BBMP
Loading ...

BBMP Tax

ಬೆಂಗಳೂರು: ಇಷ್ಟು ದಿನ ಬಿಡಿಎಗೆ ಇದ್ದ ಭೂ ಪರಿವರ್ತನೆ ಅಧಿಕಾರವನ್ನು ಇದೀಗ ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ. ಇನ್ಮುಂದೆ ರೆವಿನ್ಯೂ ಸ್ವತ್ತುಗಳಿಗೂ ನಕ್ಷೆ ಮಂಜೂರಾತಿ ಭಾಗ್ಯ ದೊರೆಯಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈ ಮೊದಲು ಬಿಡಿಎಗೆ ಇದ್ದ ರೆವಿನ್ಯೂ ಸ್ವತ್ತುಗಳ ಭೂ ಪರಿವರ್ತನೆ ಅಧಿಕಾರವನ್ನು ಇನ್ಮುಂದೆ ಬಿಬಿಎಂಪಿ ನಗರ ಯೊಜನೆ ವಿಭಾಗಕ್ಕೆ ಅಧಿಕಾರ ನೀಡಲಾಗಿದೆ. ಎಡಿಟಿಪಿಗಳಿಗೆ ಭೂ ಪರಿವರ್ತನೆ ಪವರ್​​ ನೀಡಲಾಗಿದ್ದು, ಕನ್ವರ್ಷನ್ ಮಾಡಿ, ಸುಧಾರಣಾ ಶುಲ್ಕ ಪಾವತಿಸಿಕೊಂಡು ಪ್ಲ್ಯಾನ್ ಕೊಡಲು ಅವಕಾಶ ನೀಡಲಾಗಿದೆ.

ಇನ್ನು ಏಕ ನಿವೇಶನ ವಿನ್ಯಾಸ ನಕ್ಷೆ ಮಂಜೂರಾತಿ ಅಧಿಕಾರದಲ್ಲಿ ಮಾರ್ಪಾಡು ಮಾಡಲಾಗಿದೆ. ಬಿ ಖಾತಾಗಳಿಗೆ ಕಟ್ಟಡ ಮಂಜೂರಾತಿ ನಕ್ಷೆ ಸಿಗುತ್ತಿರಲಿಲ್ಲ. ಆದರೆ ಸರ್ಕಾರದ ಈ ನಿರ್ಧಾರ ರೆವಿನ್ಯೂ ಜಾಗದ ಮಾಲೀಕರ ಸಂಕಷ್ಟ ದೂರ ಮಾಡಿದೆ.

ನಕ್ಷೆ ಮಂಜೂರಾತಿಗಾಗಿ ಬಿಡಿಎಗೆ ಅಲೆಯಬೇಕಿತ್ತು. ಆದರೆ, ಈಗ ಆ ಸಮಸ್ಯೆ ದೂರವಾಗಿದೆ. ಅಲ್ಲದೆ, ಈ ಕ್ರಮದಿಂದ ಬಿಬಿಎಂಪಿ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ ಆದಾಯ ಹರಿದು ಬರುವ ನಿರೀಕ್ಷೆಯಿದೆ.

ಬೆಂಗಳೂರಲ್ಲಿ ನಡು ರಸ್ತೆಯಲ್ಲೇ ಟೀ ಕುಡಿಯುತ್ತ ರೀಲ್ಸ್ ಮಾಡಿದ ಭೂಪ : ಬೆಂಡೆತ್ತಿದ ಎಸ್.ಜೆ.ಪಾರ್ಕ್ ಪೊಲೀಸರು

Leave a Reply

Your email address will not be published. Required fields are marked *