ಬೆಂಗಳೂರು: ಇಲ್ಲಿನ ಸದಾಶಿವನಗರದಲ್ಲಿರುವ ಡಿಸಿಎಂ ನಿವಾಸದಲ್ಲಿಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಡಿ.ಕೆ ಶಿವಕುಮಾರ್ ಅವರನ್ನ ಭೇಟಿಯಾದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ.. ಆರ್‌ಸಿಬಿ ಕಪ್ ಗೆಲ್ಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಸಲ ಆರ್‌ಸಿಬಿ ಕಪ್ ಗೆಲ್ಲುವ ನಿರೀಕ್ಷೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಅದನ್ನ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತಲ್ಲ. ಕಪ್ ಗೆಲ್ಲುವ ನಿರೀಕ್ಷೆ ಅಂತು ಇದ್ದೇ ಇದೆ ಅಂತ ಹೇಳಿದ್ದಾರೆ.
ಕಳೆದ 18 ವರ್ಷಗಳಿಂದಲೂ ಐಪಿಎಲ್ ಚೆನ್ನಾಗಿ ನಡೆದುಕೊಂಡು ಬಂದಿದೆ. ಈ ಆವೃತ್ತಿಯಲ್ಲಿ ಏನಾಗುತ್ತೆ ನೋಡೋಣ. ಇವತ್ತಿನ ಆರ್‌ಸಿಬಿ ಮ್ಯಾಚ್‌ಗೆ ಆಲ್ ದಿ ಬೆಸ್ಟ್ ಹೇಳುವೆ ಎಂದರಲ್ಲದೇ, ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿ ಇದ್ದೆ. ಅದೇ ಸಮಸ್ಯೆ ನನಗೆ ಎಂದು ಮುಗುಳುನಕ್ಕರು.
ಬೆಂಗಳೂರಲ್ಲಿ ನಡು ರಸ್ತೆಯಲ್ಲೇ ಟೀ ಕುಡಿಯುತ್ತ ರೀಲ್ಸ್ ಮಾಡಿದ ಭೂಪ : ಬೆಂಡೆತ್ತಿದ ಎಸ್.ಜೆ.ಪಾರ್ಕ್ ಪೊಲೀಸರು


