BBMP
Loading ...

BNG Police

ಬೆಂಗಳೂರು : ರೀಲ್ಸ್ ಹುಚ್ಚಿಗೆ ಜನ ಏನು ಬೇಕಾದರೂ ಮಾಡೋಕೆ ಹೇಸುವುದಿಲ್ಲ. ಇದೀಗ ಬೆಂಗಳೂರು ನಗರದಲ್ಲಿ ಟ್ರಾಫಿಕ್ ನಡುವೆ ರಸ್ತೆ ದಾಟುವುದೇ ದೊಡ್ಡ ಸರ್ಕಸ್ ಮಾಡಿದಂಗೆ.ಇನ್ನು ಗಡಿಬಿಡಿಯಲ್ಲಿ ಸಿಗ್ನಲ್ ಪಾಲಿಸದೇ ರಸ್ತೆ ದಾಟಲು ಹೋಗಿ ಪ್ರಾಣ ಕಳೆದುಕೊಂಡವರ ಹಲವಾರು ಉದಾಹರಣೆಗಳಿವೆ. ಇದರ ಮಧ್ಯ ನಡು ರಸ್ತೆಯಲ್ಲಿಯೇ ವ್ಯಕ್ತಿಯೋರ್ವ ಚೇರ್ ಹಾಕಿಕೊಂಡು ಕುಳಿತು ಟೀ ಕುಡಿಯುತ್ತಾ ರೀಲ್ಸ್ ಮಾಡಿದ್ದಾನೆ.

ಹೌದು ಈ ರೀಲ್ಸ್ ವೈರಲ್ ಆಗಿದ್ದು, ಅನೇಕರು ಈತನ ನಡೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಡಿಯೊ ಹಂಚಿಕೊಂಡು ಬೆಂಗಳೂರು ಪೊಲೀಸ್ ಎಕ್ಸ್ ಖಾತೆಯನ್ನು ಉಲ್ಲೇಖಿಸಿದ್ದರು. ಇದರ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಕ್ರಮಕ್ಕೆ ಮುಂದಾದ ಹಲಸೂರು ಗೇಟ್ ಉಪ ವಿಭಾಗದ ಎಸ್ ಜೆ ಪಾರ್ಕ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪ್ರಚಾರದ ತೆವಲಿಗೆ ಕಳೆದ ಏಪ್ರಿಲ್ 12 ರಂದು ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿ ರಸ್ತೆಯಲ್ಲಿ ರೀಲ್ಸ್ ಮಾಡುತ್ತಾ ಕಿರಿಕ್‌ ಮಾಡಿದ್ದ. ನಂತರ ಆ ರೀಲ್ಸ್‌ ಅನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆ simbu_str_123 ನಲ್ಲಿ ಅಪ್ಲೋಡ್‌ ಮಾಡಿದ್ದ.ಸಿಟಿ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ಪುಂಡನ ರೀಲ್ಸ್ ಗಮನಿಸಿತ್ತು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯುವಕರಿಗೆ ತಪ್ಪು ಸಂದೇಶ ನೀಡಿದ ಅಡಿ ಎಸ್.ಜೆ.ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಪುಂಡನನ್ನು ಬಂಧಿಸಿದ್ದರು.

ಪರವಾನಗಿ ಉಲ್ಲಂಘನೆ: 100ಕ್ಕೂ ಹೆಚ್ಚು ಪಿಜಿಗಳ ಅಡುಗೆಮನೆಗೆ ಬಿಬಿಎಂಪಿ ಬೀಗ

Leave a Reply

Your email address will not be published. Required fields are marked *