BBMP
Loading ...

Rig owner

ಬೆಂಗಳೂರು: ಕರ್ನಾಟಕ ರಿಗ್ ಓನರ್ಸ್ ಸಂಘದ ಕಾರ್ಯಕಾರಿ ಸಮಿತಿಗೆ ಫೆಬ್ರವರಿ 25 ರಂದು ನಡೆದ ಚುನಾವಣೆಯ ಫಲಿತಾಂಶ ಇಂದು (ಏಪ್ರಿಲ್‌ 17) ಹೊರಬಿದ್ದಿದ್ದು, ರಾಮನಗರ ಜಿಲ್ಲೆಯ ದಿಶಾ ಸಮಿತಿ ಸದಸ್ಯರಾದ ಎಸ್​. ಶಿವಣ್ಣ ಹಾಗೂ ಅವರ ತಂಡ ಭರ್ಜರಿ‌ ಗೆಲುವು ದಾಖಲಿಸಿದೆ.

ನಗರದ ಮಲ್ಲತ್ತಹಳ್ಳಿಯ 60 ಅಡಿ ಲೇಕ್ ರಸ್ತೆಯಲ್ಲಿರುವ ಎನ್‌ಜಿಇಎಫ್ ಲೇಔಟ್​ನ ಪಾಂಚಜನ್ಯ ಕುಟೀರದಲ್ಲಿರುವ ಕರ್ನಾಟಕ ರಿಗ್ ಓನರ್ಸ್ ಸಂಘ ಕಚೇರಿಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಫೆಬ್ರವರಿ 25 ರಂದು ನಡೆದಿತ್ತು.

ಚುನಾವಣೆ ಬಳಿಕ ಮತಪೆಟ್ಟಿಗೆಗಳನ್ನು ಜಿಲ್ಲಾ ಖಜಾನೆ ವಿಧಾನ ಸೌಧ, ಬೆಂಗಳೂರು-560001 ಇಲ್ಲಿ ಭದ್ರತೆಗಾಗಿ ಇಡಲಾಗಿತ್ತು. ಇಂದು ಮತಪೆಟ್ಟಿಗೆಯನ್ನು ವಾಪಸ್ ಪಡೆದು ಮತಗಳ ಎಣಿಕೆಯ ನಂತರ ಕೆಳಕಂಡ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆಂದು ಚುನಾವಣಾಧಿಕಾರಿ ಪಿ. ಮುನಿರಾಜ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *