BBMP
Loading ...

Vidhanasoudha

ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ, ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ಗಗನ ಕುಸುಮ. ಭದ್ರತಾ ದೃಷ್ಟಿಯಿಂದ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಸಭೆ ಸಮಾರಂಭಗಳು, ಸರ್ಕಾರಿ ಕಾರ್ಯಕ್ರಮಗಳು ನಡೆಯುವ ವೇಳೆ ವಿಧಾನಸೌಧ ಮುಂಭಾಗದ ಮೆಟ್ಟಿಲುಗಳು ಹಾಗೂ ಬ್ಯಾಕ್ವೆಂಟ್‌ ಹಾಲ್‌ ಗೆ ಸಾರ್ಜಜನಿಕರು ಹೋಗುವ ವ್ಯವಸ್ಥೆ ಇತ್ತು. ಆದರೆ, ಬಾಂಬ್‌ ಸ್ಫೋಟ, ಉಗ್ರರ ದಾಳಿ ಸಾಧ್ಯತೆಗಳ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಭಾರಿ ಭದ್ರತೆ ಕಲ್ಪಿಸಿ ಜನಸಾಮಾನ್ಯರ ಪ್ರವೇಶಕ್ಕೆ ಬ್ರೇಕ್‌ ಹಾಕಲಾಗಿತ್ತು. ಆದರೆ, ಇದೀಗ ವಿಧಾನಸೌಧ ನೋಡಲು ಬರೋರಿಂದಲೂ ಹಣ ವಸೂಲಿಗೆ ಸರ್ಕಾರ ಮುಂದಾಗಿದೆ.

ಗ್ಯಾರಂಟಿಗಾಗಿ ಹಣ ವಸೂಲಿ ?
ರಾಜ್ಯದಲ್ಲಿ ಯಾವುದೇ ವಸ್ತುಗಳ ಬೆಲೆ ಏರಿಕೆಯಾದರೆ, ಗ್ಯಾರಂಟಿಗಾಗಿ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಖಜಾನೆ ತುಂಬಿಕೊಳ್ಳಲು ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಆರೋಪ ಸಾಮಾನ್ಯವಾಗಿದೆ. ಇದೀಗ ರಾಜ್ಯದ ಪಾರಂಪರಕ ಕಟ್ಟಡಗಳಲ್ಲಿ ಒಂದಾದ ವಿಧಾನಸೌಧ ನೋಡಲು ದೇಶ-ವಿದೇಶಗಳಿಂದ, ರಾಜ್ಯದ ಹಳ್ಳಿ-ಹಳ್ಳಿಗಳಿಂದ ಸಾವಿರಾರು ಜನರು ಬರುತ್ತಾರೆ. ಇದೀಗ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಶುಲ್ಕ ನಿಗಧಿ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.

ಪ್ರವಾಸೋದ್ಯಮ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆಯಾ ಎಂಬ ಆರೋಪ ಕೇಳಲಾರಂಭಿಸಿದೆ. ವಿಧಾನಸೌಧ ವೀಕ್ಷಣೆಗೆ ಗೈಡೆಡ್ ಟೂರ್ ವ್ಯವಸ್ಥೆ ಜಾರಿಗೆ ತರಲುಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಈ ಮೂಲಕ ವಿಧಾನಸೌಧವನ್ನ ಪ್ರವಾಸಿ ತಾಣವಾಗಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ..

ಪ್ರವಾಸೋಧ್ಯಮ ಇಲಾಖೆಯಿಂದ ಗೈಡ್ ಟೂರ್ ಮಾಡಲು ಸರ್ಕಾರ ಪ್ರವಾಸೋದ್ಯಮ ಇಲಾಖೆಗೆ ಷರತ್ತು ಬದ್ಧವಾಗಿ ಅನುಮತಿ ನೀಡಿದೆ. ಪ್ರವೇಶ ಶುಲ್ಕ ನೀಡಿ ಒಳಗೆ ಬರಲು ಕೆಲವೊಂದು ಷರತ್ತು ಹಾಕಲಾಗಿದೆ.

ವಿಧಾನಸೌಧ ನೋಡಲು ಷರತ್ತು
* ಸಾರ್ವತ್ರಿಕ ರಜೆ ದಿನದಂದು ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೂ ಅವಕಾಶ
* 30ಜನರ ತಂಡದೊಂದಿಗೆ ವೀಕ್ಷಣೆಗೆ ಅವಕಾಶ
* ಆನ್ ಲೈನ್ ಮುಖಾಂತರ ಟಿಕೆಟ್ ಬುಕ್ ಮಾಡಿಕೊಳ್ಳಬೇಕು
* ಪ್ರವೇಶ ದರವನ್ನ ನೀಡಿ ಬರಬೇಕು
* ಪೊಲೀಸ್ ಭದ್ರತಾ ಸೂಚನೆ ಪಾಲಿಸಬೇಕು
* ಅಧಿಕೃತ ದಾಖಲೆಯನ್ನು ನೀಡಿ ಪ್ರವೇಶ ಮಾಡಬೇಕು.
* ವಿಧಾನಸೌಧದ ಕಟ್ಟಡ, ಆವರಣಕ್ಕೆ ಹಾನಿಯಾಗದಂತೆ ಸಹಕರಿಸಬೇಕು
* ಕಡ್ಡಾಯವಾಗಿ ಎಲ್ಲಾ ನಿಯಮಗಳನ್ನು ಪಾಲಿಸಬೇಕು

ಸರ್ಕಾರದ ಬೆಲೆ ಏರಿಕೆ ನಿರ್ಧಾರಗಳು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಸರ್ಕಾರ ಜನರಿಂದ ಹಣ ವಸೂಲಿಗೆ ಮುಂದಾಗಿದೆ ಎಂಬ ಆರೋಪಕ್ಕೆ ಇದು ಹೊಸ ಸೇರ್ಪಡೆಯಾಗಿದೆ.

ಬೆಂಗಳೂರಿನ ಆಸ್ತಿದಾರರಿಗೆ ಬಿಬಿಎಂಪಿ ಹೊಸ ಟ್ಯಾಕ್ಸ್‌ ಶಾಕ್‌: ಖಾಲಿ ನಿವೇಶನಕ್ಕೂ ತೆರಿಗೆ!

Leave a Reply

Your email address will not be published. Required fields are marked *