BBMP
Loading ...

BBMP

ಬೆಂಗಳೂರಿನ ಆಸ್ತಿದಾರರಿಗೆ ಕೊನೆಗೂ ಶಾಕ್‌ ಕೊಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಶುಲ್ಕ ವಿಧಿಸುವುದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹೇಳಿತ್ತು. ಅಂದರೆ ಬೆಂಗಳೂರಿನಲ್ಲಿ ಪ್ರತಿದಿನವೂ ಮನೆಗಳಲ್ಲಿ ಹಾಗೂ ಹೋಟೆಲ್‌, ಉದ್ಯಮ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಉತ್ಪತ್ತಿಯಾಗುವ ಕಸಕ್ಕೂ ಬಿಬಿಎಂಪಿ ಟ್ಯಾಕ್ಸ್‌ ಹಾಕಲಿದೆ. ಈ ವಿಚಾರದಲ್ಲಿ ಇದೀಗ ಬೆಂಗಳೂರಿನ ಆಸ್ತಿದಾರರಿಗೆ ಹೊಸ ಶಾಕ್‌ ಕೊಡಲಾಗಿದೆ. ಯಾವ ಆಸ್ತಿದಾರರಿಗೆ ಎಷ್ಟು ತೆರಿಗೆ ಬೀಳಲಿದೆ ಹಾಗೂ ಈ ಹೊಸ ಟ್ಯಾಕ್ಸ್‌ನಿಂದ ಬೆಂಗಳೂರಿನ ಆಸ್ತಿದಾರರ ಮೇಲೆ ಯಾವೆಲ್ಲಾ ರೀತಿ ಪರಿಣಾಮ ಬೀರಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನ ಜನರಿಗೆ ಸರ್ಕಾರ ಹಾಗೂ ಬಿಬಿಎಂಪಿ ಈಗಾಗಲೇ ಶಾಕ್‌ ಕೊಟ್ಟಿತ್ತು. ಇದೀಗ ಅದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ನಿರ್ವಹಣಾ ಬಳಕೆದಾರರ ಸೇವಾ ಶುಲ್ಕವನ್ನು 2025 -2026ನೇ ಆರ್ಥಿಕ ಸಾಲಿನಿಂದ ಆಸ್ತಿ ತೆರಿಗೆ ಸಂಗ್ರಹದ ಜೊತೆಯಲ್ಲೇ ಸಂಗ್ರಹಿಸಲಾಗುವುದು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು ಹೇಳಿದ್ದಾರೆ. ಈ ಮೂಲಕ ಬೆಂಗಳೂರಿಗರ ವಿರೋಧದ ನಡುವೆಯೂ ಕಸಕ್ಕೂ ಟ್ಯಾಕ್ಸ್‌ ಪ್ಲ್ಯಾನ್ ಜಾರಿಗೆ ತರಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸಹ ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನು ಬೆಂಗಳೂರಿನಲ್ಲಿ ಖಾಲಿ ನಿವೇಶನವಿದ್ದರೂ ಆಸ್ತಿದಾರರು ಕಸ ನಿರ್ವಹಣೆಗೆ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕು. ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಪ್ರತ್ಯೇಕವಾಗಿ ಕಸ ಸಂಗ್ರಹ ಶುಲ್ಕವನ್ನು ನಿಗಿದಿ ಮಾಡಲಾಗಿದೆ. ಅದೇನು ಎನ್ನುವ ಸಂಪೂರ್ಣ ವಿವರ ನೋಡೋಣ.

ಬಿಬಿಎಂಪಿಯು (SWM User Fee) ಕಸ ಸಂಗ್ರಹ ಶುಲ್ಕಕ್ಕೆ ಸಂಬಂಧಿಸಿದಂತೆ ಸುದೀರ್ಘ ಸುತ್ತೋಲೆಯನ್ನು ಹೊರಡಿಸಿದ್ದು. ಇದರಲ್ಲಿ ಯಾವ ಆಸ್ತಿದಾರರಿಗೆ ಎಷ್ಟು ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎನ್ನುವುದನ್ನು ನಿಗದಿ ಮಾಡಲಾಗಿದೆ. 2025-26ನೇ ಸಾಲಿನಿಂದ ಅಂದರೆ ಇದೇ ವರ್ಷದಿಂದಲೇ ಟ್ಯಾಕ್ಸ್‌ ಶುರುವಾಗಲಿದೆ.

ಸಾರ್ವಜನಿಕರಿಂದ ವಿರೋಧ: ಬೆಂಗಳೂರಿನಲ್ಲಿ ಕಸ ನಿರ್ಹಣೆಯಲ್ಲಿ ಬೆಂಗಳೂರು ಕಸ ನಿರ್ವಹಣಾ ಸಂಸ್ಥೆ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಸಂಪೂರ್ಣವಾಗಿ ವಿಫಲವಾಗಿದೆ. ಈ ರೀತಿ ಇರುವಾಗಲೇ ಬೆಂಗಳೂರಿನಲ್ಲಿ ಕಸ ಸಂಗ್ರಹ ಮಾಡುವುದಕ್ಕೂ ಟ್ಯಾಕ್ಸ್‌ ವಿಧಿಸಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ಮೊದಲು ಕಸ ಸಂಗ್ರಹ ಸರಿಯಾಗಿ ಮಾಡಿ ಹಾಗೂ ಸ್ವಚ್ಛತೆ ಕಾಪಾಡಿ ಆ ಮೇಲೆ ಕಸಕ್ಕೆ ಟ್ಯಾಕ್ಸ್‌ ಹಾಕಿ ಎಂದು ಜನ ಹೇಳುತ್ತಿದ್ದಾರೆ. ವಸತಿ ಉಪಯೋಗದ ಸ್ವತ್ತುಗಳಿಗೆ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ/ಸೇವಾ ಶುಲ್ಕ (SWM User Fee) ವಿವರ

ಕಟ್ಟಡದ ವಿಸ್ತೀರ್ಣ | ಕಸ ನಿರ್ವಹಣಾ ಬಳಕೆದಾರರ ಸೇವಾ ಶುಲ್ಕ ಪ್ರತಿ ತಿಂಗಳು
600 ಚ.ಅಡಿಗಳವರೆಗೆ 10 ರೂಪಾಯಿ

601 ಚ.ಅಡಿಗಳಿಂದ 50 ರೂ.

1001 ಚ.ಅಡಿಗಳಿಂದ 100 ರೂ.

2001 ಚ.ಅಡಿಗಳಿಂದ 150 ರೂ.

3001 ಚ.ಅಡಿಗಳಿಂದ 200 ರೂ.

4000 ಚ.ಅಡಿಗಳವರೆಗೆ 400 ರೂ.

ಖಾಲಿ ನಿವೇಶನ / ಭೂಮಿ ಹಾಗೂ ಕಸ ನಿರ್ವಹಣಾ ಬಳಕೆದಾರರ/ಸೇವಾ (SWM User Fee)

ನಿವೇಶನ / ಭೂಮಿಯ ವಿಸ್ತೀರ್ಣ ಪ್ರತಿ ಚ.ಅಡಿಗೆ ಪ್ರತಿ ವರ್ಷಕ್ಕೆ ರೂ.

ಖಾಲಿ ನಿವೇಶನ / ಭೂಮಿ * 0.60

ವಸತಿಯೇತರ ಉಪಯೋಗದ ಇತರ ಸ್ವತ್ತುಗಳಿಗೆ ಘನತ್ಯಾಜ್ಯ ನಿರ್ವಹಣಾ ಬಳಕದಾರರ ಸೇವಾ ಶುಲ(SWM User Fee)

ಕಟ್ಟಡದ ವಿಸ್ತೀರ್ಣ ಹಾಗೂ ಕಸ ನಿರ್ವಹಣಾ ಬಳಕೆದಾರರ/ಸೇವಾ (SWM User Fee) ಪ್ರತಿ ವರ್ಷಕ್ಕೆ
1000 ಚ.ಅಡಿಗಳವರೆಗೆ 2,000.00

1001 ಚ.ಅಡಿಗಳಿಂದ 2000 ಚ.ಅಡಿಗಳವರೆಗೆ 6,000.00

2001 ಚ.ಅಡಿಗಳಿಂದ 5000 ಚ.ಅಡಿಗಳವರೆಗೆ 14,000.00

5001 ಚ.ಅಡಿಗಳಿಂದ 10000 ಚ.ಅಡಿಗಳವರೆಗೆ 38,000.00

10001 ಚ.ಅಡಿಗಳಿಂದ 20000 ಚ.ಅಡಿಗಳವರೆಗೆ 70,000.00

20001 ಚ.ಅಡಿಗಳಿಂದ 50000 ಚ.ಅಡಿಗಳವರೆಗೆ 1,50,000.00

50001 ಚ.ಅಡಿಗಳಿಂದ 100000 ಚ.ಅಡಿಗಳವರೆಗೆ 2,75,000.00

100001 ಚ.ಅಡಿಗಳಿಂದ 200000 ಚ.ಅಡಿಗಳವರೆಗೆ 5,00,000.00

200001 ಚ.ಅಡಿಗಳಿಂದ 500000 ಚ.ಅಡಿಗಳವರೆಗೆ 13,00,000.00

500000 ಚ.ಅಡಿಗಳಿಗೂ ಮೇಲ್ಪಟ್ಟು 35,00,000.00

ಸೂಚನೆ: ಸ್ವಂತ ಮತ್ತು ಬಾಡಿಗೆ (ಮಿಶ್ರು ಉಪಯೋಗವು ಸ್ವತ್ತುಗಳಿಗೆ ಕಸ ನಿರ್ವಹಣಾ ಬಳಕೆದಾರರ/ಸೇವಾ ಶುಲ್ಕವು ಆಸ್ತಿತೆರಿಗೆಯ ಶೇ.60 ಕ್ಕಿಂತ ಹೆಚ್ಚಾದಲ್ಲಿ ಶೇ.60ಕ್ಕೆ ಮಿತಿಗೊಳಿಸಲಾಗಿದೆ ಎಂದು ಬಿಬಿಎಂಪಿಯು ಹೇಳಿದೆ. ಬಾಡಿಗೆ ಉಪಯೋಗದ ಸ್ವತ್ತುಗಳಿಗೆ ಕಸ ನಿರ್ವಹಣಾ ಬಳಕೆದಾರರ/ಸೇವಾ ಶುಲ್ಕವು ಆಸ್ತಿತೆರಿಗೆಯ ಶೇ.30ಕ್ಕಿಂತ ಹೆಚ್ಚಾದಲ್ಲಿ ಶೇ.30 ಕ ಮಿತಿಗೊಳಿಸಲಾಗಿದೆ ಎಂದೂ ಹೇಳಲಾಗಿದೆ.)

ವಸತಿಯೇತರ ಉಪಯೋಗದ ವರ್ಗ-VII ಹೋಟೆಲ್ ಮತ್ತು ಲಾಡ್ಜ್‌ ಸೇರಿದಂತೆ ಇತರೆ ಉದ್ಯಮಗಳಿಗೆ ಕಸದ ಟ್ಯಾಕ್ಸ್‌

ಕಟ್ಟಡದ ವಿಸ್ತೀರ್ಣ ಹಾಗೂ ಬಳಕದಾರರ ಸೇವಾ ಶುಲ್ಕ/ ಪ್ರತಿ ವರ್ಷಕ್ಕೆ
1000 ಚ.ಅಡಿಗಳವರೆಗೆ 4,000.00 ರೂ.

1001 ಚ.ಅಡಿಗಳಿಂದ 2000 ಚ.ಅಡಿಗಳವರೆಗೆ 12,000.00 ರೂ.

2001 ಚ.ಅಡಿಗಳಿಂದ 5000 ಚ.ಅಡಿಗಳವರೆಗೆ 28,000.00 ರೂ.

5001 ಚ.ಅಡಿಗಳಿಂದ 10000 ಚ.ಅಡಿಗಳವರೆಗೆ 76,000.00 ರೂ.

10001 ಚ.ಅಡಿಗಳಿಂದ 20000 ಚ.ಅಡಿಗಳವರೆಗೆ 1,40,000.00

20001 ಚ.ಅಡಿಗಳಿಂದ 50000 ಚ.ಅಡಿಗಳವರೆಗೆ 3,00,000.00

50001 ಚ.ಅಡಿಗಳಿಂದ 100000 ಚ.ಅಡಿಗಳವರೆಗೆ 5,50,000.00

100001 ಚ.ಅಡಿಗಳಿಂದ 200000 ಚ.ಅಡಿಗಳವರೆಗೆ 10,00,000.00

200001 ಚ.ಅಡಿಗಳಿಂದ 500000 ಚ.ಅಡಿಗಳವರೆಗೆ 26,00,000.00

10 500000 ಚ.ಅಡಿಗಳಿಗೂ ಮೇಲ್ಪಟ್ಟು 70,00,000.00

ಸೂಚನೆ: ಕಸ ನಿರ್ವಹಣಾ ಬಳಕೆದಾರರ/ಸೇವಾ ಶುಲ್ಕವು ಆಸ್ತಿತೆರಿಗೆಯ ಶೇ.60 ಕ್ಕಿಂತ ಹಚ್ಚಾದಲ್ಲಿ ಶೇ.600 ಮಿತಿಗೊಳಿಸಲಾಗಿದೆ.

ವಸತಿಯೇತರ ಉಪಯೋಗದ ವರ್ಗ – VIII ಸ್ಟಾರ್‌ ಹೋಟಲ್ ಉಪಯೋಗದ ಸ್ವತ್ತುಗಳಿಗೆ ಕಸ ನಿರ್ವಹಣಾ ಬಳಕದಾರರ/ಸೇವಾ ಶುಲ್ಕ

(SWM User Fee) ಪ್ರತಿ ವರ್ಷಕ್ಕೆ ರೂ. ವಿವರ ಇಲ್ಲಿದೆ.

ಕಟ್ಟಡದ ವಿಸ್ತೀರ್ಣ ಮತ್ತು ಟ್ಯಾಕ್ಸ್‌
10000 ಚ.ಅಡಿಗಳವರೆಗೆ 95,000.00

20001 ಚ.ಅಡಿಗಳಿಂದ 50000 ಚ.ಅಡಿಗಳವರೆಗೆ 1,75,000.00

50001 ಚ.ಅಡಿಗಳಿಂದ 100000 ಚ.ಅಡಿಗಳವರೆಗೆ 3,75,000.00

100001 ಚ.ಅಡಿಗಳಿಂದ 200000 ಚ.ಅಡಿಗಳವರೆಗೆ 6,87,500.00

10001 ಚ.ಅಡಿಗಳಿಂದ 20000 ಚ.ಅಡಿಗಳವರೆಗೆ 12,50,000.00

200001 ಚ.ಅಡಿಗಳಿಂದ 500000 ಚ.ಅಡಿಗಳವರೆಗೆ 32,50,000.00

500000 ಚ.ಅಡಿಗಳಿಗೂ ಮೇಲ್ಪಟ್ಟು 87,50,000.00

ಸೂಚನೆ: ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಸೇವಾ ಶುಲ್ಕವು ಆಸ್ತಿತೆರಿಗೆಯ ಶೇ.60 ಕ್ಕಿಂತ ಹೆಚ್ಚಾದಲ್ಲಿ ಶೇ.60ಕ್ಕೆ ಮಿತಿಗೊಳಿಸಲಾಗಿದೆ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಮಾಹಿತಿ ನೀಡಿದ್ದಾರೆ.

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು? ಇಲ್ಲಿದೆ ಪೂರ್ಣ ಮಾಹಿತಿ…

Leave a Reply

Your email address will not be published. Required fields are marked *