BBMP
Loading ...

Tea Coffee

ಬೆಂಗಳೂರು:- ರಾಜ್ಯ ಸರ್ಕಾರವು, ನಂದಿನಿ ಹಾಲಿನ ದರ ಬೆಲೆ ಪ್ರತಿ ಲೀ.ಗೆ 4 ರೂ. ಏರಿಕೆ ಮಾಡಿದ ಬೆನ್ನಲ್ಲೇ ಈಗ ಹೋಟೆಲ್‌ಗಳಲ್ಲಿ ಕಾಫಿ, ಟೀ ಬೆಲೆಯೂ ಏರಿಕೆಯಾಗಿದೆ.

ಮೊದಲೇ ಬಸ್ ಟಿಕೆಟ್, ಮೆಟ್ರೋ, ಹಾಲು, ವಿದ್ಯುತ್ ಬಳಿಕ ಡಿಸೇಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆನ್ನಲ್ಲೇ ಈಗ ಕಾಫಿ, ಟೀ ದರ ಸಹ ಏರಿಕೆಯಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈಗ ಹಾಲಿನ ದರ ಲೀಟರ್‌ಗೆ 4 ರೂ. ಏರಿಕೆಯಾದ ಬೆನ್ನಲ್ಲೇ ಈಗ ಹೋಟೆಲ್‌ಗಳಲ್ಲಿ ಕಾಫಿ, ಟೀ ಬೆಲೆಯೂ ಏರಿಕೆಯಾಗಿದೆ. 2-3 ರೂ. ಏರಿಕೆ ಕಂಡಿದೆ. ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ ಟೀ ದರದ ಜೊತೆಗೆ ಶೀಘ್ರವೇ ಬೆಣ್ಣೆ, ತುಪ್ಪದ ದೋಸೆ ದರವೂ ಏರಿಕೆಯಾಗಲಿದೆ ಎಂದು ಹೋಟೆಲ್ ಅಸೋಸಿಯೇಷನ್ ಹೇಳಿದೆ.

ಇನ್ನೂ ದರ ಏರಿಕೆ ವಿಚಾರದಲ್ಲಿ ಸರ್ಕಾರವನ್ನು ಕಟುವಾಗಿ ಟೀಕಿಸಿರುವ ಹೆಚ್.ಡಿ.ಕುಮಾರಸ್ವಾಮಿ ಹಾಲಿನ ದುಡ್ಡು ರೈತರಿಗೆ ಮೊಸರಿನ ದುಡ್ಡು ಏನು ಮಾಡ್ತೀರಾ ಎಂದು ಕಿಡಿಕಾರಿದ್ದಾರೆ.

ಕೆಇಆರ್​ಸಿಯಿಂದ ಒಸಿ ಕಡ್ಡಾಯ ಆದೇಶ: ರೆವೆನ್ಯೂ ಸೈಟ್​ನಲ್ಲಿ ಮನೆ ಕಟ್ಟಿದ್ರೆ ಇನ್ಮುಂದೆ ಕರೆಂಟ್ ಸಿಗಲ್ಲ!

Leave a Reply

Your email address will not be published. Required fields are marked *