BBMP
Loading ...

BESCOM

ಬೆಂಗಳೂರು: ರೆವೆನ್ಯೂ ಸೈಟ್​ನಲ್ಲಿ ಕಟ್ಟಡ ನಿರ್ಮಿಸಿದರೆ ಇನ್ನು ಮುಂದೆ ವಿದ್ಯುತ್​ ಸಂಪರ್ಕ ಸಿಗುವುದಿಲ್ಲ. ಏಕೆಂದರೆ, ಒಸಿ ಇರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್​ ಸಂಪರ್ಕ ನೀಡಬೇಕೆಂಬ ಸುಪ್ರೀಂಕೋರ್ಟ್​ ತೀರ್ಪಿನ ಅನ್ವಯ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆದೇಶ ಹೊರಡಿಸಿದ್ದು, ಅದನ್ನು ಬೆಸ್ಕಾಂ ಪಾಲಿಸುವುದಾಗಿ ತಿಳಿಸಿದೆ.

ಈ ನಿಯಮಗಳನ್ನು ಜಾರಿ ಮಾಡುವುದಾಗಿ ಬೆಸ್ಕಾಂ ಪ್ರಕಟಣೆ ಹೊರಡಿಸಿದೆ. ಅಲ್ಲದೆ, ಎಲ್ಲ ಎಸ್ಕಾಂಗಳು ಈ ಆದೇಶ ಪಾಲಿಸುವುದಾಗಿ ಶೀಘ್ರದಲ್ಲೇ ಪ್ರಕಟಿಸಲಿವೆ. ನಕ್ಷೆ ಹಾಗೂ ಒಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್​ ಮತ್ತು ನೀರಿನ ಸಂಪರ್ಕ ನೀಡದಂತೆ ಕಳೆದ ಡಿಸೆಂಬರ್​ನಲ್ಲಿ ಸುಪ್ರಿಂಕೋರ್ಟ್​ ಆದೇಶ ಹೊರಡಿಸಿದೆ.

ಈ ಆದೇಶದ ಬೆನ್ನಲ್ಲೇ ಒಸಿ ಇಲ್ಲದೇ ಇದ್ದರೆ ವಿದ್ಯುತ್​ ಸಂಪರ್ಕ ನೀಡಬಾರದು ಎಂದು ಕೆಇಆರ್​ಸಿ ಎಲ್ಲ ಎಸ್ಕಾಂಗಳಿಗೆ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಈ ಆದೇಶವನ್ನು ಪಾಲಿಸಲು ಬೆಸ್ಕಾಂ ಎಲ್ಲ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದೆ. ಎಲ್ಲ ಎಸ್ಕಾಂಗಳೂ ಕೂಡ ಈ ಆದೇಶವನ್ನು ಪಾಲಿಸಲಿವೆ.

ಈ ನಿಯಮದಿಂದ ಆಗುವ ಪರಿಣಾಮ ಏನೆಂದರೆ, ಕಂದಾಯ ನಿವೇಶನ ಮತ್ತು ಬಿ ಖಾತಾ ನಿವೇಶನಗಳಿಗೆ ನಕ್ಷೆ ಮಂಜೂರಾತಿಯನ್ನು ಕೊಡುವಂತಿಲ್ಲ. ನಕ್ಷೆ ಮಂಜೂರಾತಿ ಸಿಗದಿದ್ದರೆ ಆ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಆ ಕಟ್ಟಡಗಳಿಗೆ ಸಿಗುವುದಿಲ್ಲ. ಇದರಿಂದಾಗಿ ನಿರ್ಮಾಣ ಹಂತದಲ್ಲಿರುವ ಹಾಗೂ ಮುಂದೆ ನಿರ್ಮಿಸಲಾಗುವ ಕಟ್ಟಡಗಳಿಗೆ ವಿದ್ಯುತ್​ ಸಂಪರ್ಕ ಸಿಗಲ್ಲ.

ನಕ್ಷೆ ಮಂಜೂರಾತಿ ಇಲ್ಲದೇ ಹೋದರೆ ಇನ್ನು ಮುಂದೆ ಬೆಂಗಳೂರಿನಲ್ಲೂ ತಾತ್ಕಾಲಿಕ ವಿದ್ಯುತ್​ ಸಂಪರ್ಕ ಇರುವುದಿಲ್ಲ. ಇದರಿಂದ ನಿರ್ಮಾಣ ಚಟುವಟಿಕೆಗೆ ಬ್ರೇಕ್​ ಬೀಳಲಿದ್ದು, ರಿಯಲ್​ ಎಸ್ಟೇಟ್​ ಉದ್ಯಮಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮನೆ ಕಟ್ಟುವವರೇ ಹುಷಾರ್…ಇನ್ನೂ OC ಇದ್ದರಷ್ಟೇ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ: KERC ಆದೇಶದಿಂದ ಜನಸಾಮಾನ್ಯರಿಗೆ ಸಂಕಷ್ಟ

Leave a Reply

Your email address will not be published. Required fields are marked *