ರಾಜ್ಯಾದ್ಯಂತ ಇಂದಿನಿಂದ ಬೆಲೆ ಏರಿಕೆ ಬಿಸಿ ಜನರಿಗೆ ದೊಡ್ಡ ಮಟ್ಟದಲ್ಲೇ ತಟ್ಟಲಿದೆ. ಒಂದೆಡೆ ಹಾಲು ಹಾಗೂ ಮೊಸರು ಪ್ರತಿ ಲೀಟರ್ 4 ರೂ ಹೆಚ್ಚಾಳವಾಗಿದ್ದರೆ, ವಿದ್ಯುತ್ ದರ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳವಾಗಿದೆ.
ಹೀಗೆ ಹಾಲು ಮತ್ತು ವಿದ್ಯುತ್ ಮಾತ್ರವಲ್ಲದೇ ಇಂದಿನಿಂದ ಬೆಂಗಳೂರು ನಗರದಲ್ಲಿ ಕಸ ಸಂಗ್ರಹಣೆಗೂ ಸಹ ಬಿಬಿಎಂಪಿ ಟ್ಯಾಕ್ಸ್ ಹಾಕಲು ಮುಂದಾಗಿದೆ. ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಪ್ರತ್ಯೇಕ ದರವನ್ನು ಬಿಬಿಎಂಪಿ ವಿಧಿಸಿದೆ.
ವಸತಿ ಕಟ್ಟಡಗಳ ಕಸ ಸಂಗ್ರಹಣೆಯ ದರಗಳು
ವಸತಿ ಕಟ್ಟಡಗಳಲ್ಲಿ ಕಸ ಸಂಗ್ರಹಣೆ ಮಾಡಲು ಚದರ ಅಡಿಗಳ ಆಧಾರದ ಮೇಲೆ ವಿವಿಧ ಸೆಸ್ ದರಗಳನ್ನು ವಿಧಿಸಲಾಗಿದೆ. ಅವುಗಳ ಪಟ್ಟಿ ಕೆಳಕಂಡಂತಿದೆ.
* 600 ಚದರ ಅಡಿವರೆಗೆ 10 ರೂ ಟ್ಯಾಕ್ಸ್
* 601ರಿಂದ 1000 ಅಡಿವರೆಗೆ 50 ರೂ ಟ್ಯಾಕ್ಸ್
* 1001ರಿಂದ 2000 ಅಡಿವರೆಗೆ 100 ರೂ ಟ್ಯಾಕ್ಸ್
* 2001ರಿಂದ 3000 ಅಡಿವರೆಗೆ 150 ರೂ ಟ್ಯಾಕ್ಸ್
* 3001ರಿಂದ 4000 ಅಡಿವರೆಗೆ 200 ರೂ ಟ್ಯಾಕ್ಸ್
* 4000 ಅಡಿ ಮೇಲ್ಪಟ್ಟ ವಸತಿ ಕಟ್ಟಗಳಿಗೆ 400 ರೂ ಟ್ಯಾಕ್ಸ್
ವಾಣಿಜ್ಯ ಕಟ್ಟಡಗಳ ಕಸ ಸಂಗ್ರಹಣೆ ಸೆಸ್ ಪಟ್ಟಿ
ವಸತಿ ಕಟ್ಟಡಗಳ ಕಸ ಸಂಗ್ರಹಣೆಯ ಸೆಸ್ ಚದರ ಅಡಿಗಳನ್ನು ಆಧರಿಸಿದ್ದರೆ, ವಾಣಿಜ್ಯ ಕಟ್ಟಡಗಳ ಕಸಕ್ಕೆ ಕಸದ ತೂಕದ ಮೇಲೆ ಸೆಸ್ ವಿಧಿಸಲಾಗುತ್ತದೆ.
* ಪ್ರತಿನಿತ್ಯ 5 ಕೆಜಿವರೆಗೆ ಕಸ ಸಂಗ್ರಹಣೆಯಾದರೆ 500 ರೂ
* ಪ್ರತಿನಿತ್ಯ 10 ಕೆಜಿವರೆಗೆ ಕಸ ಸಂಗ್ರಹಣೆಯಾದರೆ 1400 ರೂ
* ಪ್ರತಿನಿತ್ಯ 25 ಕೆಜಿವರೆಗೆ ಕಸ ಸಂಗ್ರಹಣೆಯಾದರೆ 3500 ರೂ
* ಪ್ರತಿನಿತ್ಯ 50 ಕೆಜಿವರೆಗೆ ಕಸ ಸಂಗ್ರಹಣೆಯಾದರೆ 7000 ರೂ
* ಪ್ರತಿನಿತ್ಯ 100 ಕೆಜಿವರೆಗೆ ಕಸ ಸಂಗ್ರಹಣೆಯಾದರೆ 14000 ರೂ ವಿಧಿಸಲಾಗಿದೆ.


