ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಮತ್ತು ಇತರ ವಿದ್ಯುತ್ ಸರಬರಾಜು ಕಂಪನಿಗಳ (ESCOMS) ಸ್ಮಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು 15,568 ಕೋಟಿ ರೂ.ಗಳ ‘ದುರುಪಯೋಗ’ ನಡೆದಿದೆ ಎಂಬ ಬಹು ದೊಡ್ಡ ಆರೋಪ ಕೇಳಿಬಂದಿದೆ. ಈ ಬಗ್ಗೆ ನಿನ್ನೆಯಷ್ಟೇ ಬೆಸ್ಕಾಂ ಮತ್ತು ಎಸ್ಕಾಂ ಎಂಡಿ ಸ್ಪಷ್ಟನೆ ನೀಡಿದರು. ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು. ಇಂದು ಇಂಧನ ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ ನೀಡಿದ್ದು, ಅವರು ಕೂಡಯಾವುದೇ ಅವ್ಯವಾರ ನಡೆದಿಲ್ಲ ಅಂತಿದ್ದಾರೆ. ಆದರೆ, ಮಾಧ್ಯಮದವರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಅಧಿಕಾರಿಗಳಿಂದ ಉತ್ತರ ಹೇಳಿಸಿದ ಪ್ರಸಂಗವು ಕೂಡ ಇಂದಿನ ಸುದ್ದಿಗೋಷ್ಠಿಯಲ್ಲಿ ನಡೆಯಿತು. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ…


