BBMP
Loading ...

Electric Bill

ಬೆಂಗಳೂರು: ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆಯ ಗಾಯ ಇನ್ನೂ ಹಸಿಯಾಗಿರುವಗಲೇ ಮತ್ತೊಂದು ಬರೆ ಬಿದ್ದಿದೆ. ಪ್ರತಿ ಯೂನಿಟ್​ಗೆ 36 ಪೈಸೆ ವಿದ್ಯುತ್​ ದರ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಇಂದು (ಮಾರ್ಚ್​ 20) ಆದೇಶ ಹೊರಡಿಸಿದೆ.

ಹೊಸ ದರ ಏಪ್ರಿಲ್​ 1ರಿಂದಲೇ ಜಾರಿಗೆ ಬರಲಿದೆ. ಈಗಾಗಲೇ ಬಸ್​ ಟಿಕೆಟ್​ ದರ, ಮೆಟ್ರೋ ಪ್ರಯಾಣ ದರ ಹಾಗೂ ದಿನಸಿ ಉತ್ಪನ್ನಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಇದೀಗ ವಿದ್ಯುತ್​ ದರ ಬಿಸಿ ತುಪ್ಪವಾಗಲಿದೆ.

ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಣಿ ಗ್ರ್ಯಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್​ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ. ಏಪ್ರಿಲ್ 1ರಿಂದಲೇ ಕೆಇಆರ್​ಸಿ ಹೊಸ ದರ ಜಾರಿಗೆ ಬರಲಿದೆ.

ಕೆಪಿಟಿಸಿಎಲ್‌ ಮತ್ತು ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳ (ಎಸ್ಕಾಂ) ಸಿಬ್ಬಂದಿಯ ಪಿಂಚಣಿ ಹಾಗೂ ಗ್ರಾಚ್ಯುಟಿಯ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಬೇಕಿತ್ತು. 2021-22 ರಿಂದ 2024-25ನೇ ಆರ್ಥಿಕ ವರ್ಷಗಳ ಪಿಂಚಣಿ ಹಾಗೂ ಗ್ರಾಚ್ಯುಟಿ ಬಾಕಿ ಹಾಗೂ 2025-26ನೇ ಹಣಕಾಸು ವರ್ಷದಿಂದ ಆಗುವ ಖರ್ಚು ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಕೋರಿ ಕೆಪಿಟಿಸಿಎಲ್​ ಮತ್ತು ಎಸ್ಕಾಂಗಳು ಈ ಹಿಂದೆ ಸಲ್ಲಿಸಿದ್ದ ಅರ್ಜಿಗೆ ಕೆಇಆರ್​ಸಿ ಅಸ್ತು ಎಂದಿದೆ.

ಸರ್ಕಾರದ ಪಾಲನ್ನು ಜನರಿಂದಲೇ ವಸೂಲಿ ಮಾಡಲು ಕೆಇಆರ್​ಸಿ ಅವಕಾಶವನ್ನು ನೀಡಿದ್ದು, ಇಂದು ಆದೇಶವನ್ನು ಹೊರಡಿಸಿದೆ. ಈ ಆದೇಶದಂತೆ 2025-26ರಲ್ಲಿ 36 ಪೈಸೆ ಹೆಚ್ಚಳವಾಗಿದೆ. ಇದಿಷ್ಟೇ ಅಲ್ಲದೆ, 2026-27ರಲ್ಲಿ ಪ್ರತಿ ಯೂನಿಟ್​ಗೆ ತಲಾ 35 ಪೈಸೆ ಮತ್ತು 2027-28ರಲ್ಲಿ ತಲಾ 34 ಪೈಸೆಯನ್ನು ಹೆಚ್ಚಿಸಲು ಕೆಇಆರ್​ಸಿ ಸಮ್ಮತಿ ನೀಡಿದೆ.

ಕರ್ನಾಟಕ ವಿದ್ಯುತ್‌ ಸುಧಾರಣಾ ನಿಯಮಗಳಿಗೆ 2022ರಲ್ಲಿ ತಿದ್ದುಪಡಿ ತರಲಾಗಿತ್ತು. ಆ ತಿದ್ದುಪಡಿಯಂತೆ ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ಗ್ರಾಹಕರಿಗೆ ವರ್ಗಾಯಿಸಲು ಇಚ್ಛಿಸಿದರೆ ಕೆಇಆರ್‌ಸಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಲಾಗಿದೆ. ಹೀಗಾಗಿ ಕೆಪಿಟಿಸಿಎಲ್​ ಮತ್ತು ಎಸ್ಕಾಂಗಳು ಅರ್ಜಿ ಸಲ್ಲಿಸಿದ್ದವು. ಇದೀಗ ಕೆಇಆರ್​ಸಿ ಒಪ್ಪಿಗೆ ಸೂಚಿಸಿ, ಆದೇಶ ಹೊರಡಿಸಿದೆ. ಪಿಂಚಣಿ ಮತ್ತು ಗ್ರಾಚ್ಯುಟಿಯ ಸರ್ಕಾರದ ಪಾಲನ್ನು ಭರಿಸಲು ಮುಂದಿನ 3 ಹಣಕಾಸು ವರ್ಷಗಳಲ್ಲಿ ಗ್ರಾಹಕರಿಂದ ಬರೋಬ್ಬರಿ 8,519.55 ಕೋಟಿ ರೂಪಾಯಿ ಮೊತ್ತವನ್ನು ವಸೂಲಿ ಮಾಡಲು ಕೆಇಆರ್‌ಸಿ ಒಪ್ಪಿಗೆ ನೀಡಿದೆ.

ಬೆಸ್ಕಾಂ ಕರ್ಮಕಾಂಡ ಬಯಲು: ಸ್ಮಾರ್ಟ್​ ಮೀಟರ್​ ಹೆಸರಲ್ಲಿ ಹಣದ ಸುಲಿಗೆ, ಫಿಕ್ಸ್​ ರೇಟ್​ ಬೇರೆ ಮಾರಾಟದ ರೇಟೇ ಬೇರೆ

Leave a Reply

Your email address will not be published. Required fields are marked *