ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕರ್ಮಕಾಂಡ ಪವರ್ ಟಿವಿ ನಡೆಸಿದ ತನಿಖಾವರದಿಯಲ್ಲಿ ಬಯಲಾಗಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಯಡಿ ದುಪ್ಪಟ್ಟು ಹಣ ವಸೂಲಿ ಮಾಡಲು ಬೆಸ್ಕಾಂ ಮುಂದಾಗಿದೆ. ಜನರಿಂದ ಹಣದ ಸುಲಿಗೆ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜಶ್ರೀ ಎಲೆಕ್ಟ್ರಿಕಲ್ ಕಂಪನಿಗೆ ಸ್ಮಾರ್ಟ್ ಮೀಟರ್ ಟೆಂಡರ್ ಕೊಡಲಾಗಿದೆ. ದಾವಣಗೆರೆ ಮೂಲದ ಈ ಕಂಪನಿ ಮುಂದಿನ ಐದು ವರ್ಷಗಳವರೆಗೆ ಟೆಂಡರ್ ಅನ್ನು ಪಡೆದುಕೊಂಡಿದೆ. ಈ ಟೆಂಡರ್ ಮೂಲಕ ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ಲಾಭವಾಗಲಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಈ ಕಂಪನಿಗೆ ಸುಖಾ ಸುಮ್ಮನೇ ಟೆಂಡರ್ ನೀಡಿಲ್ಲ. ಇಲ್ಲಿ ಬೆಸ್ಕಾಂನಿಂದ ಗೋಲ್ಮಾಲ್ ನಡೆದಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸ್ಮಾರ್ಟ್ ಮೀಟರ್ ಅನ್ನು ಸೇಲ್ ಮಾಡಲಾಗುತ್ತಿದೆ. ಬೆಸ್ಕಾಂ ವಲಯದಲ್ಲಿ ರಾಜಶ್ರೀ ಕಂಪನಿ ಹಗಲು ದರೋಡೆಗೆ ಇಳಿದಿದೆ.
ಕೆಪಿಟಿಸಿಎಲ್ನಲ್ಲಿ ಸ್ಮಾರ್ಟ್ ಮೀಟರ್ಗೆ ಶೆಡ್ಯೂಲ್ ಆಫ್ ರೇಟ್ ಇರೋದು 2,400 ರೂಪಾಯಿ. ಆದರೆ, ರಾಜಶ್ರೀ ಕಂಪನಿ ಚಾರ್ಜ್ ಮಾಡುತ್ತಿರುವುದು ಜಿಎಸ್ಟಿ ಸೇರಿದಂತೆ 4,998 ರೂಪಾಯಿ. ಈ ಮೂಲಕ ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾಗಿದೆ. ಇಷ್ಟೆಲ್ಲ ಹಗಲು ದರೋಡೆ ನಡೆಯುತ್ತಿದ್ರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಅಧಿಕಾರಿ ಸುಮ್ಮನೇ ಕುಳಿತಿರುವುದು ನಾನಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಲಾಂಗ್ ಝಳಪಿಸುತ್ತಾ ವೀಲಿಂಗ್ ಮಾಡಿದ್ದ ಪುಂಡರಿಗೆ ಬಿಸಿ ಮುಟ್ಟಿಸಿದ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು


