BBMP
Loading ...

CHN Wife Husband

ಚಾಮರಾಜನಗರ: ನಿನ್ನ ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿ ನೀಡುತ್ತಿದ್ದ ಟಾರ್ಚರ್‌ಗೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ.

ಪರಶಿವ (32) ಆತ್ಮಹತ್ಯೆ ಮಾಡಿಕೊಂಡ ಪತಿ. ನೀನು ಚನ್ನಾಗಿಲ್ಲ, ನನಗೆ ಸರಿಯಾದ ಜೋಡಿಯಲ್ಲ ಎಂದು ಪತ್ನಿ ಎಲ್ಲರ ಎದುರೇ ಅವಮಾನ ಮಾಡುತ್ತಿದ್ದಳು. ಶೊಕಿವಾಲೆಯಾಗಿದ್ದ ಪತ್ನಿ ಹೈಫೈ ಜೀವನ ಮಾಡಲು ಬಯಸಿದ್ದಳು. ಅಲ್ಲದೇ ರೀಲ್ಸ್ ಗೀಳು ಕೂಡ ಇತ್ತು.

ಒಳ್ಳೆ ಬಟ್ಟೆ ಕೊಡಿಸು, ಆಭರಣ ಕೊಡಿಸು, ಬೇರೆಮನೆ ಮಾಡು ಎಂದು ಪತ್ನಿ ಪತಿಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದಳು. ಇಷ್ಟು ಮಾತ್ರವಲ್ಲದೇ ಸುಳ್ಳು ವರದಕ್ಷಿಣೆ ಕೇಸ್ ಹಾಕಿ ಪತಿಯನ್ನು ಒಂದೂವರೆ ತಿಂಗಳು ಜೈಲಿಗೆ ಕೂಡ ಕಳಿಸಿದ್ದಳು. ಪತ್ನಿಯ ಕಿರುಕುಳದಿಂದ ಬೇಸತ್ತು ಪತಿ ಪರಶಿವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಟ್ರೋ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ: ಬಿಎಂಆರ್​ಸಿಎಲ್​ ವಿರುದ್ಧ ಆಕ್ರೋಶ

Leave a Reply

Your email address will not be published. Required fields are marked *