BBMP
Loading ...

S Shivanna

ಬೆಂಗಳೂರು: ಇದೇ ಮಂಗಳವಾರ (ಫೆ.25) ಕರ್ನಾಟಕ ರಿಗ್ ಓನರ್ಸ್ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ನಡೆಯಲಿದ್ದು, ದಿಶಾ ಸಮಿತಿ ಸದಸ್ಯರಾದ ಎಸ್​. ಶಿವಣ್ಣ ಹಾಗೂ ಅವರ ತಂಡಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಜಯಶಾಲಿಯನ್ನಾಗಿ ಮಾಡಬೇಕೆಂದು ಕೋರಲಾಗಿದೆ.

ನಗರದ ಮಲ್ಲತ್ತಹಳ್ಳಿಯ 60 ಅಡಿ ಲೇಕ್ ರಸ್ತೆಯಲ್ಲಿರುವ ಎನ್‌ಜಿಇಎಫ್ ಲೇಔಟ್​ನ ಪಾಂಚಜನ್ಯ ಕುಟೀರದಲ್ಲಿರುವ ಕರ್ನಾಟಕ ರಿಗ್ ಓನರ್ಸ್ ಸಂಘ ಕಚೇರಿಯಲ್ಲಿ ಮಂಗಳವಾರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ನಡೆಯಲಿದೆ. ರಾಮನಗರ ಜಿಲ್ಲೆಯ ದಿಶಾ ಸಮಿತಿ ಸದಸ್ಯರಾದ ಎಸ್​. ಶಿವಣ್ಣ ಅವರು ಕೂಡ ಸ್ಪರ್ಧಿಸಿದ್ದು, ಅವರ ಕ್ರಮಸಂಖೆ 22ಕ್ಕೆ ಅಮೂಲ್ಯವಾದ ಮತ ನೀಡಲು ಮನವಿ ಮಾಡಲಾಗಿದೆ.

ಅಲ್ಲದೆ, ಎಸ್​. ಶಿವಣ್ಣ ಹಾಗೂ ಅವರ ತಂಡದ ಕೆಳಕಂಡ ಅಭ್ಯರ್ಥಿಗಳಿಗೆ ನಿಮ್ಮ ಮತವನ್ನು ನೀಡಿ ಸಂಘವನ್ನು ಶ್ರೇಯೋಭಿವೃದ್ಧಿ ಪಥದಲ್ಲಿ ನಡೆಸಲು ಸಹಕಾರಿಗಳಾಗಬೇಕಾಗಿ ಎಸ್​. ಶಿವಣ್ಣ ಹಾಗೂ ಅವರ ತಂಡದ ವಿನಂತಿಸಿಕೊಂಡಿದೆ.

ರಾಜ್ಯದಲ್ಲಿ ಬೆಲೆ ಏರಿಕೆ ಬರೆ: ಅಡುಗೆ ಎಣ್ಣೆ ದರ ದಿಢೀರ್ ಹೆಚ್ಚಳ

Leave a Reply

Your email address will not be published. Required fields are marked *