BBMP
Loading ...

Siddaramaiah

ಬೆಂಗಳೂರು: ಜನರಿಗೆ ಸಾಲ ನೀಡಿ, ವಸೂಲಿ ಹೆಸರಲ್ಲಿ ಕಿರುಕುಳ ನೀಡುತ್ತಿರುವ ಮೈಕ್ರೊಫೈನಾನ್ಸ್​ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಫೈನಾನ್ಸ್​ಗಳ ಹಾವಳಿಗೆ ಬ್ರೇಕ್​ ಹಾಕುವ ಸುಗ್ರೀವಾಜ್ಞೆಗೆ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

ಈ ಬಗ್ಗೆ ಮಾತನಾಡಿದ ಕಾನೂನು ಸಚಿವ ಎಚ್​.ಕೆ. ಪಾಟೀಲ್​, ಮೈಕ್ರೊಫೈನಾನ್ಸ್ ವಿಚಾರದಲ್ಲಿ ಮಸೂದೆ ತರಲು ಉದ್ದೇಶಿಸಲಾಗಿದೆ. ಸಂಜೆ ಸಿಎಂ‌ ಸಿದ್ದರಾಮಯ್ಯ ಅವರು ಹಿರಿಯ ಸಚಿವರ ಸಭೆ ಕರೆದಿದ್ದಾರೆ. ಈ ವಿಷಯ ಅಂತಿಮಗೊಳಿಸಲು ಹಾಗೂ ಮಹತ್ವದ ಸಲಹೆಗಳು ಇರುವುದರಿಂದ ಎಲ್ಲವನ್ನು ಪರಿಗಣಿಸಿ, ಚರ್ಚಿಸಿ, ಅಂತಿಮಗೊಳಿಸಲು ನಿರ್ಧರಿಸಿದ್ದಾರೆ ಎಂದರು.

ಮೈಕ್ರೊಫೈನಾನ್ಸ್ ಪ್ರತಿನಿಧಿ, ರಿಸರ್ವ್ ಬ್ಯಾಂಕ್ ಜತೆಗೂ ಸಮಾಲೋಚನೆ ನಡೆಸಲಾಗಿದೆ. ಮಸೂದೆಯ ಕರಡು ಕೂಡ ಸಿದ್ಧವಾಗಿದೆ. ಆದರೆ, ಕೆಲವು ತಾಂತ್ರಿಕ ಸಮಸ್ಯೆ ಇದೆ. ಹೊಸ‌ ಮಸೂದೆಗೆ ಕೆಲವು ಕಾನೂನು ಅಡ್ಡಿಯಾಗುತ್ತದೆಯೇ‌ ಎಂದು ನೋಡಬೇಕಿದೆ. ಮಸೂದೆ ಅಂತಿಮಗೊಳಿಸಲು ಸಿಎಂಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಾಲ ತೆಗೆದುಕೊಂಡ ರೈತರು, ಕಾರ್ಮಿಕರು, ಚಿಕ್ಕ ಅತಿ ಚಿಕ್ಕ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳ ಸಾಲ ವಸೂಲಿ ಪ್ರಕ್ರಿಯೆಯಲ್ಲಿ ನಡೆದ ಕೆಲವು ಘಟನೆಗಳು ಗಂಭೀರವಾದ ಹಾಗೂ ಒಪ್ಪದಂತಿದೆ. ಜನ‌ ತೊಂದರೆಗೆ ಸಿಲುಕಿದ್ದಾರೆ. ಅಮಾನವೀಯ ಸಾಲ ವಸೂಲಿ ನಡೆದಿದೆ ಎಂಬ ದೂರುಗಳು ಬರುತ್ತಿವೆ. ಇಂದೂ ಸಹ ಆತ್ಮಹತ್ಯೆ ಪ್ರಕರಣ ನಡೆದಿದೆ ಎಂದು ಹೇಳಿದರು.

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ತಡೆಯ ಸುಗ್ರೀವಾಜ್ಞೆ ಕುರಿತಂತೆ ಬಿಸಿ ಬಿಸಿ ಚರ್ಚೆ ನಡೆಸಲಾಯಿತು.

ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವ ಸಂಬಂಧ ಮಂಡಿಸಲಾದಂತ ಸುಗ್ರೀವಾಜ್ಞೆ ತರುವಂತ ಮಸೂದೆಗೆ ಅನುಮೋದನೆ ನೀಡಲಾಗಿದೆ. ಇನ್ನೂ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ ಬಳಿಕ, ಅವರು ಒಪ್ಪಿಗೆ ಸೂಚಿಸಿದ್ರೇ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಬೀಳಿದೆ.

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್: ವಾಹನ ಸವಾರರಿಗೆ ತಲೆಬಿಸಿ ಶುರು!

Leave a Reply

Your email address will not be published. Required fields are marked *