BBMP
Loading ...

BESCOM

ಬೆಂಗಳೂರು: ಅಕ್ರಮವಾಗಿ ಬೆಸ್ಕಾಂನ ವಿದ್ಯುತ್ ಸಾಮಗ್ರಿಗಳನ್ನು ಸಂಗ್ರಹಿಸಿ ಗ್ರಾಹಕರ ವಿದ್ಯುತ್ ಕಾಮಗಾರಿಗಳನ್ನು ನಿರ್ವಹಣೆ ಮಾಡುತ್ತಿದ್ದ ಪವರ್​ಮ್ಯಾನ್​ನನ್ನು ಅಮಾನತು ಮಾಡಿ ಬೆಸ್ಕಾಂ ಆದೇಶ ಹೊರಡಿಸಿದೆ. ಈ ಅಕ್ರಮವನ್ನು ಬಿಬಿಎಂಪಿ ನ್ಯೂಸ್​ 9 ಬಯಲಿಗೆ ಎಳೆದಿತ್ತು.

ಅಮಾನತಾದ ಪವರ್​ಮ್ಯಾನ್​ನನ್ನು ಶ್ರೀನಿವಾಸ್​ ಎಂದು ಗುರುತಿಸಲಾಗಿದೆ. ಈತ ಬೆಸ್ಕಾಂನ ಹೊಂಗಸಂದ್ರ ಕಾರ್ಯಪಾಲನ ಘಟಕ, ಎಸ್ -8 ಉಪವಿಭಾಗ, ಹೆಚ್​ಎಸ್​ಆರ್ ವಿಭಾಗ ಬೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಭಾಗದಲ್ಲಿ ನೇರವಾಗಿ ಗ್ರಾಹಕರನ್ನು ಸಂಪರ್ಕಿಸಿ ನಾನು ಬೆಸ್ಕಾಂನಲ್ಲಿ ನೌಕರ ನಾಗಿದ್ದು, ನನಗೆ ಮೇಲಾಧಿಕಾರಿಗಳ ಸಂಪರ್ಕ ಮತ್ತು ಶಿಫಾರಸ್ಸು ಇದೆ ಎಂದು ನಂಬಿಸಿ, ಕಟ್ಟಡ ಸೇರಿದಂತೆ ಹಲವು ವಿದ್ಯುತ್ ಕಾಮಗಾರಿಗಳನ್ನು ಮಾಡಿಕೊಡುವುದಾಗಿ ಸುಮಾರು ವರ್ಷಗಳಿಂದ ಗ್ರಾಹಕರಿಂದ ನೇರವಾಗಿ ಕೆಲಸ ನಿರ್ವಹಿಸುತ್ತಿದ್ದ.

ಇಂದು ಬೆಳಗ್ಗೆ ಎ ಇ ಸಿ ಎಸ್ ಬಡಾವಣೆಯ ಬಿ ಬ್ಲಾಕ್ ಸಿಂಗಸಂದ್ರದಲ್ಲಿ ಒಂದು ಉಗ್ರಾಣದಲ್ಲಿ ವಿದ್ಯುತ್ ಸಾಮಗ್ರಿಗಳನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ನೇರವಾಗಿ ವಿದ್ಯುತ್ ಗುತ್ತಿಗೆದಾರರ ಕೈಗೆ ಸಿಕ್ಕಿಹಾಕಿಕೊಂಡಿರುತ್ತಾರೆ. ನಿಮ್ಮ ಕಂಪನಿಯಿಂದ ಅನುಮತಿ ಪಡೆದು, ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ನಿರ್ವಹಿಸ ಬೇಕಾಗಿದ್ದ ಕಾಮಗಾರಿಗಳನ್ನು ಅಕ್ರಮವಾಗಿ ಬೆಸ್ಕಾಂನ ವಿದ್ಯುತ್ ಸಾಮಗ್ರಿಗಳನ್ನು ಸಂಗ್ರಹಿಸಿ, ಬಳಸಿ ಗ್ರಾಹಕರ ವಿದ್ಯುತ್ ಕಾಮಗಾರಿಗಳನ್ನು ನಿರ್ವಹಣೆ ಮಾಡಿ ಬೆಸ್ಕಾಂ ಕಂಪನಿಗೂ ಲಕ್ಷಾಂತರ ರೂಪಾಯಿ ನಷ್ಟ ಮಾಡಿದ್ದಾನೆ. ಅಲ್ಲದೆ, ಇದೇ ವಿದ್ಯುತ್ ಕಾಮಗಾರಿಗಳನ್ನು ನಂಬಿ ಜೀವನ ನಡೆಸುತ್ತಿರುವ ವಿದ್ಯುತ್‌ ಗುತ್ತಿಗೆದಾರರಿಗೆ ಅನ್ಯಾಯ ಎಸಗಿದ್ದಾನೆ.

ಈ ಮೇಲಿನ ಎಲ್ಲಾ ವಿಷಗಳನ್ನು ಪರಿಗಣಿಸಿ ಶ್ರೀನಿವಾಸ್ ಎಂಬ ಪವರ್ ಮ್ಯಾನ್​ನನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಬಿಬಿಎಂಪಿ ನ್ಯೂಸ್​ 9 ವರದಿ ಮಾಡಿ ಬೆಸ್ಕಾಂ ಗಮನ ಸೆಳೆದಿತ್ತು ಪರಿಣಾಮ ಶ್ರೀನಿವಾಸ್​ನನ್ನು ಸಸ್ಪೆಂಡ್​ ಮಾಡಲಾಗಿದೆ. ವಿದ್ಯುತ್​ ಗುತ್ತಿಗೆದಾರರ ಸಂಘದ ಬೆಂಗಳೂರು ಜಿಲ್ಲಾಧ್ಯಕ್ಷರಾದ ಗೋವಿಂದರಾಜು ಹಾಗೂ ಕಾರ್ಯದರ್ಶಿ  ಯದು ಕುಮಾರ್ ಈ ಕಾರ್ಯಚರಣೆಯಲ್ಲಿ ಭಾಗಿಯಾಗಿ, ಶ್ರೀನಿವಾಸ್​ ಅಕ್ರಮವನ್ನು ಬಯಲು ಮಾಡಿ, ಸಸ್ಪೆಂಡ್​ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಂಗಸಂದ್ರ ಬೆಸ್ಕಾಂ ವ್ಯಾಪ್ತಿಯಲ್ಲಿ ಅಕ್ರಮ ಗೋಡೌನ್​! ಬೆಸ್ಕಾಂ ವಸ್ತುಗಳ ಪತ್ತೆ, ಪವರ್​ಮ್ಯಾನ್​ನಿಂದಲೇ ಮಹಾ ವಂಚನೆ

Leave a Reply

Your email address will not be published. Required fields are marked *