ಬೆಂಗಳೂರು: ಬಿಬಿಎಂಪಿ ಚೀಪ್ ಇಂಜಿನಿಯರ್ ಕಛೇರಿ, ಚೀಪ್ ಕಮಿಷನರ್ ಕಚೇರಿ ಮೇಲೆ ಬೆಳಗ್ಗೆ 11 ಗಂಟೆ ವೇಳಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಳು ಜನ ಇಡಿ ಅಧಿಕಾರಿಗಳ ತಂಡದಿಂದ ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ಗೆ ಡ್ರಿಲ್ ನಡೆಯುತ್ತಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ 2016ರಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್ ವೆಲ್ ನಲ್ಲಿ 9000 ಕೋಟಿ ಹಗರಣದ ಆರೋಪ ಕೇಳಿಬಂದಿದೆ. ಈ ಬೋರ್ ವೆಲ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸಿದೆ. ಹಗರಣಕ್ಕೆ ಸಂಬಂಧಿಸಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಆ ಸಂದರ್ಭದಲ್ಲಿ ಫಿಲ್ಡ್ ನಲ್ಲಿ ವರ್ಕ್ ಮಾಡಿದ್ದ ಎಇ ಹಾಗೂ ಎಇಇ ಗಳ ವಿಚಾರಣೆ ನಡೆಸಲಾಗಿದೆ. ಅಂಬಿಕಾ ಪತಿ ಮನೆಯಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಪರಿಶೀಲನೆ ನಡೆಸಲಾಗುತ್ತಿದೆ.
ಏನಿದು ಬಿಬಿಎಂಪಿ ಬೋರ್ ವೆಲ್ ಹಗರಣ?
2016, 2017, 2018ನೇ ಸಾಲಿನಲ್ಲಿ 968 ಕೋಟಿ ಖರ್ಚು ಮಾಡಿ 9,558 ಕೊಳವೆ ಬಾವಿಗಳನ್ನ ಕೊರೆಸಲು ಬಿಬಿಎಂಪಿ ಶುರು ಮಾಡಿತ್ತು. ಆ ಬಳಿಕ 976 ಶುದ್ಧಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಲೆಕ್ಕ ಕೊಡಲಾಗಿದೆ. 9,588 ಕೊಳವೆಬಾವಿಗಳಲ್ಲಿ 10% ಕೊಳವೆಬಾವಿಗಳ ದಾಖಲೆ ಕೊಡಲು ಪಾಲಿಕೆ ಅಧಿಕಾರಿಗಳಿಗ ವಿಫಲರಾಗಿದ್ದಾರೆ.
* ಪಾಲಿಕೆ ವ್ಯಾಪ್ತಿಯ ವಿವಿಧ ಕಡೆ ಒಟ್ಟು 9,558 ಕೊಳವೆ ಬಾವಿ ಕೊರೆಯುವ ಯೋಜನೆ
* ಒಂದು ಆರ್ ಓ ಪ್ಲಾಂಟ್ ಗೆ 25 ರಿಂದ 28 ಲಕ್ಷ ರೂಪಾಯಿ ಬಿಲ್
* 100 ಅಡಿ ಆಳ ಕೊಳವೆಬಾವಿ ಕೊರೆದು 2 ಸಾವಿರ ಅಡಿ ಕೊರೆಯಲಾಗಿದೆ ಎಂದು ಲೆಕ್ಕ
* ಈ ಯೋಜನೆಗೆ 956 ಕೋಟಿ ರೂಪಾಯಿ ಬಿಲ್ ಕ್ಲೈಮ್ ಮಾಡಿದ್ದ ಬಿಬಿಎಂಪಿ ಇಂಜಿನಿಯರ್ ಚೀಫ್ ಪ್ರಹ್ಲಾದ್
* ಆದರೆ ಅಷ್ಟೊಂದು ಪ್ರಮಾಣದಲ್ಲಿ ದಾಖಲೆ ನೀಡಲು ವಿಫಲ ಆಗಿರುವ ಪಾಲಿಕೆ ಅಧಿಕಾರಿಗಳು
* ಈ ಸಂಬಂಧ ಪಾಲಿಕೆಯ 25ಕ್ಕೂ ಅಧಿಕ ಅಧಿಕಾರಿಗಳಿಗೆ ಇಡಿ ನೋಟೀಸ್ ಈ ಹಿಂದೆ ನೀಡಿತ್ತು
* ಕೊಳವೆ ಬಾವಿ ಕೊರೆಸದೆ ಬಿಲ್ ನಲ್ಲಿ ಗೋಲ್ಮಾಲ್
* ಈ ಬಗ್ಗೆ 2019ರಲ್ಲಿ ACBಗೆ ದೂರು ನೀಡಿದ್ದ ಬಿಜೆಪಿ ಮುಖಂಡ ಎನ್ ಆರ್ ರಮೆಶ್
* ಬಳಿಕ ಎಸಿಬಿ ಮುಚ್ಚಿದ ಮೇಲೆ ಲೋಕಾಯುಕ್ತಕ್ಕೆ ಪ್ರಕರಣ ವರ್ಗ
* 2022ಲ್ಲಿ ಮೊತ್ತದ ಪ್ರಮಾಣ ನೋಡಿ ಪ್ರಕರಣ ಇಡಿಗೆ ವರ್ಗ ಮಾಡಿದ್ದ ಲೋಕಾಯುಕ್ತ.
ಇನ್ನು ಮುಂದೆ ಕಂದಾಯ ಜಮೀನಿನಲ್ಲಿ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡಲ್ಲ: ಸಿ.ಎಂ ಸಿದ್ದರಾಮಯ್ಯ


