BBMP
Loading ...

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ–ಖಾತಾವನ್ನು ಪಡೆಯಲು ಐದು ದಾಖಲೆಗಳನ್ನು ಅಪ್‌ಲೋಡ್‌ ಮಾಡುವುದು ಕಡ್ಡಾಯವಾಗಿದೆ.

ಇ–ಖಾತಾ ವ್ಯವಸ್ಥೆ ಸ್ವಯಂಚಾಲಿತ ಪ್ರಕ್ರಿಯೆಯಾಗಿದ್ದು, ಯಾವುದೇ ದಾಖಲೆಯನ್ನು ಪಡೆಯದೆ ಅಂತಿಮ ಇ–ಖಾತಾ ನೀಡುವ ಪ್ರಕ್ರಿಯೆಯ ಮೇಲೆ ಪಾಲಿಕೆ ಅಧಿಕಾರಿಗಳಿಗೆ ಯಾವುದೇ ರೀತಿಯ ನಿಯಂತ್ರಣ ಅಥವಾ ಅಧಿಕಾರ ಇರುವುದಿಲ್ಲ. ಆದ್ದರಿಂದ, ಮಾಲೀಕರು ನಿಗದಿಪಡಿಸಿರುವ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಇ–ಖಾತಾ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿಯ ಕಂದಾಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಮಾಲೀಕರ ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ/ ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ) ಹಾಗೂ ಆಸ್ತಿ ಫೋಟೊವನ್ನು ಅಪ್‌ಲೋಡ್‌ (BBMPeAasthi.karnataka.gov.in) ಮಾಡಬೇಕಿದೆ.

ಈ ಎಲ್ಲ ದಾಖಲೆಗಳು ಬಿಬಿಎಂಪಿ ಯಲ್ಲಿರುವ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಕೂಡಲೇ ಅಂತಿಮ ಇ–ಖಾತಾವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಯಾವುದಾದರೂ ದಾಖಲೆಯಲ್ಲಿ ವ್ಯತ್ಯಾಸವಿದ್ದರೆ ಅಥವಾ ಕೊರತೆ ಇದ್ದರೆ ಸಹಾಯಕ ಕಂದಾಯ ಅಧಿಕಾರಿಗೆ ಅರ್ಜಿ ವರ್ಗಾವಣೆಯಾಗಲಿದ್ದು, ಅವರನ್ನು ಭೇಟಿ ಮಾಡಿ ಅಗತ್ಯ ದಾಖಲೆ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಯೂಟ್ಯೂಬ್‌ನಲ್ಲಿ (https://m.youtube.com/watch?v=JR3BxET46po) ಇ–ಖಾತಾ ಪಡೆಯುವ ಮಾಹಿತಿ ನೀಡಲಾಗಿದೆ. ಅಲ್ಲದೆ, ಇ–ಖಾತಾ ಸಹಾಯವಾಣಿ 94806 83695 ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *