BBMP
Loading ...

BBMP Tax

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಮಹತ್ವದ ಹಾಗೂ ಸುವರ್ಣ ಅವಕಾಶವೊಂದು ಇಂದೇ (ನವೆಂಬರ್‌ 30) ಮುಕ್ತಾಯವಾಗಲಿದೆ. ಇಂದು ನೀವು ಒಟಿಎಸ್ (ಒಂದು ಬಾರಿ ಪರಿಹಾರ ಯೋಜನೆ – OTS ) ಯೋಜನೆಯ ಲಾಭವನ್ನು ಪಡೆದುಕೊಳ್ಳದೆ ಇದ್ದರೆ, ಗೋಲ್ಡನ್‌ ಅವಕಾಶವೊಂದು ಕೈತಪ್ಪುವುದು ಮಾತ್ರವಲ್ಲ. ನೀವು ದುಪ್ಪಟ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇನ್ನು ಈ ಯೋಜನೆಯನ್ನು ಜಾರಿ ಮಾಡಿದ ಮೇಲೆ ಬಿಬಿಎಂಪಿಯು ಕೋಟಿ ಕೋಟಿ ಆದಾಯ ಗಳಿಸಿದೆ. ಒಟಿಎಸ್‌ ಯೋಜನೆಯನ್ನು ವಿಸ್ತರಿಸುವುದಿಲ್ಲ ಅಂತ ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ)ಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು ಈಗಾಗಲೇ ಹೇಳಿದ್ದಾರೆ. ಹೀಗಾಗಿ, ಒಟಿಎಸ್‌ ಮುಂದುವರಿಯುತ್ತೆ ಎನ್ನುವ ರಿಸ್ಕ್‌ ತೆಗೆದುಕೊಳ್ಳುವುದಕ್ಕೆ ಹೋಗಲೇಬೇಡಿ.

ಬಿಬಿಎಂಪಿಯು ಬೆಂಗಳೂರಿನ ಆಸ್ತಿದಾರರಿಗೆ ಒಟಿಎಸ್ (ಒಂದು ಬಾರಿ ಪರಿಹಾರ ಯೋಜನೆ – OTS ) ಯೋಜನೆಯ ಬೊಂಬಾಟ್‌ ಅವಕಾಶವನ್ನು ಕೊಟ್ಟಿತ್ತು. ಈ ಯೋಜನೆಯ ಮೂಲಕ ನೀವು ಆಸ್ತಿ ತೆರಿಗೆ ಪಾವತಿ ಮಾಡಿದರೆ ಲಾಭವಾಗುತ್ತಿತ್ತು. ಆದರೆ, ಈ ಅವಧಿ ಇಂದೇ ಶನಿವಾರ ಮುಕ್ತಾಯವಾಗಲಿದೆ. ನಾಳೆಯಿಂದ ಅಂದರೆ ಡಿಸೆಂಬರ್‌ 1ರಿಂದ ನೀವು ದುಪ್ಪಟ್ಟು ಆಸ್ತಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಆಸ್ತಿ ತೆರಿಗೆ ಮೊತ್ತವು ಡಿಸೆಂಬರ್ 1ರಿಂದ ಎರಡು ಪಟ್ಟು ಇಲ್ಲವೇ ಅದಕ್ಕಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಬಿಬಿಎಂಪಿಯು ಬೆಂಗಳೂರಿನ ಆಸ್ತಿದಾರರಿಗೆ ಎಚ್ಚರಿಕೆಯನ್ನು ಕೊಟ್ಟಿದೆ.

ಒಟಿಎಸ್‌ನಿಂದ ಬಿಬಿಎಂಪಿಗೆ ಕೋಟಿ ಕೋಟಿ ಆದಾಯ
ಇನ್ನು ಒಟಿಎಸ್‌ನಿಂದ ಬಿಬಿಎಂಪಿಗೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ. ಬಿಬಿಎಂಪಿಯು ನೀಡಿದ ಈ ಯೋಜನೆಯ ಲಾಭವನ್ನು ಹಲವರು ಸದುಪಯೋಗ ಪಡೆದುಕೊಂಡಿದ್ದಾರೆ. ಬಿಬಿಎಂಪಿಗೆ ಶುಕ್ರವಾರ ಅಂದರೆ ನವೆಂಬರ್‌ 29ರ ಸಂಜೆಯ ವರೆಗೆ ಬರೋಬ್ಬರಿ 3,820 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ಒಟಿಎಸ್‌ ಯೋಜನೆಯನ್ನು ಬಳಸಿಕೊಂಡೇ ಹಲವು ಆಸ್ತಿದಾರರು ಆಸ್ತಿ ತೆರಿಗೆಯನ್ನು ಪಾವತಿ ಮಾಡಿದ್ದಾರೆ.

ಮಹದೇವಪುರದಲ್ಲಿ ಹೆಚ್ಚು: ಎಂದಿನಂತೆ ಈ ಬಾರಿಯೂ ಮಹದೇವಪುರ ವಲಯ ವ್ಯಾಪ್ತಿಯಿಂದ ಅತ್ಯಂತ ಹೆಚ್ಚು ಅಂದರೆ 1,010 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಒಟಿಎಸ್‌ ಯೋಜನೆ ಅಂತ್ಯವಾಗುವುದರ ಒಳಗಾಗಿ ಬಿಬಿಎಂಪಿಯು ಬರೋಬ್ಬರಿ 4,000 ಸಾವಿರ ಕೋಟಿ ರೂಪಾಯಿ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಂಡಿತ್ತು. ಇನ್ನು ಅದು ಬಹುತೇಕ ಯಶಸ್ವಿಯಾದಂತೆ ಆಗಿದೆ. ಇಂದು ಸಹ ಒಟಿಎಸ್‌ ಯೋಜನೆ ಬಳಸಿಕೊಳ್ಳುವುದಕ್ಕೆ ಅವಕಾಶ ಇದೆ. ಹೀಗಾಗಿ, ಇನ್ನಷ್ಟು ಹಣ ಹರಿದು ಬರುವ ನಿರೀಕ್ಷೆಯಲ್ಲಿ ಬಿಬಿಎಂಪಿ ಇದೆ. ಈ ಲಾಭವನ್ನು ಬಳಸಿಕೊಳ್ಳಲು ಇಂದೇ ಕೊನೆಯ ದಿನವಾಗಿದೆ. ಹೀಗಾಗಿ, ಇಂದು ಇನ್ನಷ್ಟು ಜನ ಆಸ್ತಿದಾರರು ಆಸ್ತಿ ತೆರಿಗೆ ಪಾವತಿ ಮಾಡುವ ಸಾಧ್ಯತೆ ಇದೆ.

ಯಾಕೆ ಒಟಿಎಸ್ ಯೋಜನೆ ಮುಖ್ಯ: ಇನ್ನು ಬೆಂಗಳೂರಿನ ಆಸ್ತಿದಾರರಿಗೆ ಬಿಬಿಎಂಪಿ ನೀಡಿರುವ ಒಟಿಎಸ್‌ ಹಲವು ಕಾರಣಕ್ಕೆ ಮುಖ್ಯವಾಗಿದೆ. ಇದನ್ನು ಸ್ಮಾರ್ಟ್‌ ಆಗಿ ಬೆಂಗಳೂರಿನ ಆಸ್ತಿದಾರರು ಬಳಸಿಕೊಂಡಿದ್ದೇ ಆಗಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ (ಬೆಂಗಳೂರಿನಲ್ಲಿ) ಒಂದು ಬಾರಿ ಪರಿಹಾರ ಯೋಜನೆಯ ಮೂಲಕ ಆಸ್ತಿ ತೆರಿಗೆಯನ್ನು ಕಟ್ಟುವುದರಿಂದಾಗಿ ಆಸ್ತಿ ತೆರಿಗೆ ಬಾಕಿದಾರರಿಗೆ ಬಡ್ಡಿ ಮತ್ತು ದಂಡವನ್ನು ಬಿಬಿಎಂಪಿಯು ಮನ್ನಾ ಮಾಡುತ್ತಿದೆ. ಇಂತಹ ಬೆಸ್ಟ್‌ ಅವಕಾಶವು ಇಂದೇ ಮುಕ್ತಾಯವಾಗುತ್ತಿದೆ.

ಸುಲಭವಾಗಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡಿ: ಇನ್ನು ಬೆಂಗಳೂರಿನ ಆಸ್ತಿದಾರರು ಆಸ್ತಿ ತೆರಿಗೆಯನ್ನು ಸುಲಭವಾಗಿ ಪಾವತಿ ಮಾಡಬಹುದಾಗಿದೆ. ಬೆಂಗಳೂರಿನಲ್ಲಿ ಆಸ್ತಿದಾರರು ಆನ್‌ಲೈನ್‌ ಇಲ್ಲವೇ ಆಫ್‌ಲೈನ್‌ನ ಮೂಲಕ ಅತ್ಯಂತ ಸುಲಭವಾಗಿ ಆಸ್ತಿ ತೆರಿಗೆ ಪಾವತಿ ಮಾಡಲಿಕ್ಕೆ ಅವಕಾಶ ಇದೆ. ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನ BBMPtax.karnataka.gov.in ಗೆ ಭೇಟಿ ಕೊಟ್ಟು ನೀವು ನಿಮ್ಮ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿದೆ.‘

ನಿಮ್ಮ ಮನೆಗೆ ಸೋಲಾರ್ ಹಾಕಿಸಬೇಕಾ? ‘ಸೂರ್ಯ ಘರ್’ ಯೋಜನೆಯಡಿ ಹಾಕಿಸಿಕೊಳ್ಳಲು ಬೆಸ್ಕಾಂನಿಂದ ಬಂಪರ್ ಸಬ್ಸಿಡಿ

Leave a Reply

Your email address will not be published. Required fields are marked *