BBMP
Loading ...

ಬೆಂಗಳೂರು : ಬಿಬಿಎಂಪಿ ಪಶ್ಚಿಮ ವಲಯ ಕಲ್ಯಾಣ ವಿಭಾಗದಲ್ಲಿ ಬಹುಕೋಟಿ ಹಗರಣ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದು, ಬಿಬಿಎಂಪಿ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಅಲ್ಲದೆ ಹಲವು ದಾಖಲೆಗಳನ್ನು ಇದೀಗ ಪರಿಶೀಲನೆ ನಡೆಸುತ್ತಿದ್ದಾರೆ.

ಹೌದು ಬಿಬಿಎಂಪಿ ಉಪ ಹಣಕಾಸು ನಿಯಂತ್ರಕ ಸತ್ಯಮೂರ್ತಿ ಮನೆ ಹಾಗೂ ಬಿಬಿಎಂಪಿ ಕಲ್ಯಾಣಾಧಿಕಾರಿ ಲಲಿತಾ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ದೇವಯ್ಯ ಪಾರ್ಕ್ ಬಳಿಯ ಲಲಿತಾ ನಿವಾಸ ಹಾಗೂ ವೈಯ್ಯಾಲಿಕಾವಲಿನಲ್ಲಿರುವ ಸತ್ಯಮೂರ್ತಿ ನಿವಾಸದಲ್ಲಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಿಬಿಎಂಪಿ ಪಶ್ಚಿಮ ವಲಯ ಕಲ್ಯಾಣ ವಿಭಾಗದಲ್ಲಿ ಬಹುಕೋಟಿ ಹಗರಣ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಕಲ್ಯಾಣ ಕಾರ್ಯಕ್ರಮ ಅನುಷ್ಠಾನದಲ್ಲಿ ಈ ಒಂದು ಹಗರಣ ನಡೆದಿತ್ತು. ಫಲಾನುಭವಿಗಳ ಹಣವನ್ನು ಸೊಸೈಟಿ ಗಳಿಗೆ ವರ್ಗಾಯಿಸಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿತ್ತು. ಡಿವೈಎಸ್ಪಿ ಸುನಿಲ್ ವೈ ನಾಯಕ್ ನೇತೃತ್ವದಲ್ಲಿ 8 ತಂಡಗಳಾಗಿ ದಾಳಿ ನಡೆಸಲಾಗಿದೆ.

ಇಂದಿರಾ ಕ್ಯಾಂಟೀನ್​ಗೆ ಬಂದ ಸಚಿವ ರಹೀಂ ಖಾನ್ ಮೆಚ್ಚಿಸಲು ಹೋಟೆಲ್ ಊಟ: ವಿವಾದ

Leave a Reply

Your email address will not be published. Required fields are marked *