BBMP
Loading ...

ಬೆಂಗಳೂರು: ಸಚಿವರು ಸಮೀಕ್ಷೆಗೆ ಬರುತ್ತಾರೆ ಎಂದರೆ ಅಧಿಕಾರಿಗಳು ಗಡಿಬಿಡಿಯಲ್ಲಿ ನ್ಯೂನ್ಯತೆಗಳೇ ಕಾಣದಂತೆ ಆ ಸ್ಥಳವನ್ನು ರೆಡಿ ಮಾಡಿಸುವುದು ಸಾಮಾನ್ಯ. ಅದೇ ರೀತಿ ಸಚಿವ ರಹೀಂ ಖಾನ್ ಮೆಚ್ಚಿಸಲು ಇಂದಿರಾ ಕ್ಯಾಂಟೀನ್ ಗೆ ಹೋಟೆಲ್ ಊಟ ತರಿಸಿ ಈಗ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪೌರಾಡಳಿತ ಸಚಿವ ರಹೀಂ ಖಾನ್ ಕ್ಯಾಂಟೀನ್ ಪರಿಶೀಲನೆಗೆ ಬಂದಾಗ ಊಟ ನೀಡಲಾಗಿತ್ತು. ಸಚಿವರು ಬರುತ್ತಾರೆ ಎಂದು ಎರಡು ದಿನ ಮೊದಲೇ ಮಾಹಿತಿಯಿತ್ತು. ಈ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ತೊಳೆದು ಶುಭ್ರಮವಾಗಿಟ್ಟುಕೊಳ್ಳಲಾಗಿತ್ತು. ಇದರ ಜೊತೆಗೆ ರುಚಿಕರವಾದ ಊಟವನ್ನೂ ನೀಡಲಾಗಿತ್ತು.

ಆದರೆ ಸಚಿವರು ಊಟ ಮಾಡಲು ಹೋಟೆಲ್ ನಿಂದ ಊಟ ತರಿಸಲಾಗಿತ್ತು ಎಂಬ ಅಪವಾದ ಕೇಳಿಬಂದಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ರಹೀಂ ಖಾನ್ ನನಗೂ ಊಟದ ಬಗ್ಗೆ ಅನುಮಾನ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್ ಎಂದು ಸಚಿವರಿಗೆ ಹೋಟೆಲ್ ಊಟ ತರಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಸಚಿವರು ಊಟ ಮಾಡಿ ಹೋದ ಮೇಲೆ ವಿವಾದವಾಗಿದೆ. ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟ ಪರಿಶೀಲನೆಗೆಂದೇ ಸಚಿವರು ಬಂದಿದ್ದರು. ಆದರೆ ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಊಟವನ್ನೇ ಕೊಡದೇ ಹೋಟೆಲ್ ಊಟ ನೀಡಿದರೆ ಸಚಿವರ ಭೇಟಿಯ ಉದ್ದೇಶಕ್ಕೆ ಏನು ಬೆಲೆ ಬಂದಂತಾಯಿತು.

ಚಲಿಸುತ್ತಿದ್ದ ಕಾರಿನ ಮೇಲೆ‌ ಬಿದ್ದ ಮೆಟ್ರೋ ಬ್ರಿಡ್ಜ್​​ನ ಸಿಮಂಟ್ ಬ್ರಿಕ್ಸ್! ಗಾಜು ಪುಡಿಪುಡಿ

Leave a Reply

Your email address will not be published. Required fields are marked *