BBMP
Loading ...

th-8

ಬೆಂಗಳೂರು:- ಇತ್ತೀಚೆಗೆ ಕರ್ತವ್ಯದಲ್ಲಿದ್ದಾಗಲೇ BMTC ಸಿಬ್ಬಂದಿಗಳ ಸಾವು ಪ್ರಕರಣ ಹೆಚ್ಚಳವಾಗುತ್ತಿದೆ. ಇದಕ್ಕೆ ಸಿಬ್ಬಂದಿಗಳ ಅತಿಯಾದ ಒತ್ತಡವೇ ಎಂದು ಹೇಳಲಾಗುತ್ತಿದೆ.

ನಿನ್ನೆಯಷ್ಟೇ ಬಸ್​ ಚಾಲನೆ ವೇಳೆ ಡ್ರೈವರ್​​ಗೆ ಹಾರ್ಟ್ ಅಟ್ಯಾಕ್ ಆಗಿ ಪ್ರಾಣ ಬಿಟ್ಟಿದ್ದರು. ಇದಕ್ಕೆ ಅಧಿಕಾರಿಗಳ ಕಿರುಕುಳವೇ ಕಾರಣ. ನಿರಂತರವಾಗಿ ಹಗಲು-ರಾತ್ರಿ ಕೆಲಸ ಮಾಡಿಸಿದ್ದಾರೆ. ಇದರಿಂದ ಕಿರಣ್ ಪ್ರಾಣ ಬಿಟ್ಟಿದ್ದಾನೆ ಎಂದು ಸಾರಿಗೆ ನೌಕರರ ಮುಖಂಡರು ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಎಂಟಿಸಿಯಲ್ಲಿ ನೌಕರರ ಕೊರತೆ ಉಂಟಾಗಿದೆಯಂತೆ. ಇದರಿಂದ ಇರುವಂತಹ ನೌಕರರಿಗೆ ಒಟಿ ಕೊಟ್ಟು ಒತ್ತಡಕ್ಕೆ ಸಿಲುಕಿಸುತ್ತಿದ್ದಾರಂತೆ. ನಿನ್ನೆ ಹೃದಯಾಘಾತದಿಂದ ಮೃತಪಟ್ಟ ಕಿರಣ್​ಗೆ ನಿರಂತರವಾಗಿ ಮೂರು ದಿನಗಳ ಕಾಲ ಡೇ ಅಂಡ್ ನೈಟ್ ಡ್ಯೂಟಿ ಮಾಡಿಸಿದ್ದಾರೆ. ಮೊನ್ನೆ ರಾತ್ರಿ ಕಿರಣ್​ಗೆ ಜ್ವರ ಬಂದಿತ್ತಂತೆ, ಆದರೂ ಅಧಿಕಾರಿಗಳ ಒತ್ತಡದಿಂದಾಗಿ ಡ್ಯೂಟಿ ಮಾಡಿದ್ದರಿಂದ ಹಾರ್ಟ್ ಅಟ್ಯಾಕ್ ಆಗಿ ನಿಧನ ಹೊಂದಿದ್ದಾನೆ ಅನ್ನೋದು ಸಾರಿಗೆ ಮುಖಂಡರ ಆರೋಪವಾಗಿದೆ.

ಡ್ರೈವರ್, ಕಂಡಕ್ಟರ್​ಗಳು ಕೆಲಸ ಮುಗಿಸಿ ಬಂದ್ರು ಅಧಿಕಾರಿಗಳು ಮತ್ತೊಂದು ಶಿಫ್ಟ್ ಕೆಲಸ ಮಾಡಿಸಲು ಆರ್ಡರ್ ಮಾಡ್ತಾರಂತೆ. ಮೃತ ಕಿರಣ್ ಸೋಮವಾರ, ಮಂಗಳವಾರ, ಬುಧವಾರದವರೆಗೆ ಡೇ ಅಂಡ್ ನೈಟ್ ಡ್ಯೂಟಿ ಮಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ಕಿರಣ್ ಬಳಿ ನಿರಂತರವಾಗಿ ಅಧಿಕಾರಿಗಳು ಒಟಿ ಡ್ಯೂಟಿ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಮತ್ತು ಜೊತೆಯಲ್ಲಿ ಕೆಲಸ ಮಾಡಿದ ಕಂಡಕ್ಟರ್​ಗಳು ಮಾಹಿತಿ ನೀಡ್ತಿದ್ದಾರೆ.

ಮೂರು ದಿನ ನಿರಂತರವಾಗಿ ಡ್ಯೂಟಿ ಮಾಡಿದ್ರಿಂದ ಈ ಘಟನೆ ನಡೆದಿದೆಯಂತೆ. ಕಿರಣ್ ಪ್ರತಿದಿನ ಹಾಸನದಿಂದ ಅಪ್ ಅಂಡ್ ಡೌನ್ ಮಾಡಿಕೊಂಡು ಡ್ಯೂಟಿ ಮಾಡ್ತಿದ್ದ ಇದನ್ನು ಬಂಡವಾಳ ಮಾಡಿಕೊಂಡ ಅಧಿಕಾರಿಗಳು ಹೆದರಿಸಿ ಜನರಲ್ ಶಿಫ್ಟಸ್​ಗೆ ಬಾ, ಮಧ್ಯಾಹ್ನ ಶಿಫ್ಟ್​ಗೆ ಬಾ ಎಂದು ಕೆಲಸ ಮಾಡಿಸಿಕೊಂಡಿದ್ದಾರೆ. ಕಿರಣ್ ಸಾವಿಗೆ ಬಿಎಂಟಿಸಿಯ ಅಧಿಕಾರಿಗಳೇ ನೇರ ಹೊಣೆ, ಅಧಿಕಾರಿಗಳು ಕಿರಣ್ ನನ್ನ ಟಾರ್ಗೆಟ್ ಮಾಡಿ ನಿರಂತರವಾಗಿ ಕೆಲಸ ಮಾಡಿಸಿಕೊಂಡಿದ್ದಾರೆ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಆರೋಪ ಮಾಡಿದ್ದಾರೆ.

ಬಿಎಂಟಿಸಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹಾರ್ಟ್ ಅಟ್ಯಾಕ್​ನಿಂದ ಸಾವನ್ನಪ್ಪಿದವರ ಅಂಕಿ-ಸಂಖ್ಯೆ

2020- 21 ರಲ್ಲಿ 63- ನೌಕರರು

2021-22 ರಲ್ಲಿ 65- ನೌಕರರು

2022-23 ರಲ್ಲಿ 50- ನೌಕರರು

2023-24 ರಲ್ಲಿ 35- ನೌಕರರು

ಇನ್ನೂ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪುತ್ತಿರುವ 100 ಜನರಲ್ಲಿ 33 ಜನ ಚಾಲಕರಿದ್ದಾರಂತೆ. ಆಟೋ, ಕ್ಯಾಬ್, ಸೇರಿದಂತೆ ಬಿಎಂಟಿಸಿಯ ಡ್ರೈವರ್​ಗಳು ಇದ್ದಾರಂತೆ. ಡ್ರೈವರ್​ಗಳು ನಿರಂತರವಾಗಿ ಹಗಲು-ರಾತ್ರಿ ಬೆಂಗಳೂರಿನ ಟ್ರಾಫಿಕ್​ನಲ್ಲಿ ಇದ್ದಾಗ, ಹೆಚ್ಚಿನ ಮಟ್ಟದಲ್ಲಿ ವಾಯುಮಾಲಿನ್ಯಕ್ಕೆ ತುತ್ತಾಗುತ್ತಾರೆ. ಇದರ ಜೊತೆಗೆ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ರಾತ್ರಿಯಿಡೀ ಡ್ಯೂಟಿ ಮಾಡಿದಾಗ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆಗಳಿವೆ. ನಿದ್ರೆ ಬರಬಾರದು ಎಂದು ಸಿಗರೆಟ್ ಸೇದುತ್ತಾರೆ, ಇದರಿಂದಲೂ ಸಮಸ್ಯೆ ಆಗುತ್ತದೆ ಎಂದು ಜಯದೇವ ಹೃದ್ರೋಗ ತಜ್ಞ ಡಾ. ರಾಹುಲ್ ಪಾಟೀಲ್​ ಹೇಳಿದ್ದಾರೆ.

Leave a Reply

Your email address will not be published. Required fields are marked *