BBMP
Loading ...

Dhananjay

ಬೆಂಗಳೂರು: ಚಂದನವನದ ನಟ ರಾಕ್ಷಸ, ಅಭಿಮಾನಿಗಳ ಪ್ರೀತಿಯ ಡಾಲಿ ಧನಂಜಯ್​ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ವೈದ್ಯೆಯ ಜತೆ ಹಸೆಮಣೆ ಏರಲು ಸ್ಯಾಂಡಲ್​ವುಡ್​ ಸ್ಟಾರ್​ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಧನಂಜಯ್​ ಅವರು ಮದುವೆಗೆ ರೆಡಿಯಾಗಿದ್ದಾರಂತೆ. ಮದುವೆ ಅಂದ ಮೇಲೆ ವಧು ಯಾರೆಂಬ ಪ್ರಶ್ನೆ ನಿಮ್ಮ ತಲೆಗೆ ಬಂದೇ ಬಂದಿರುತ್ತದೆ. ಡಾಲಿ ವರಿಸಲಿರುವ ವಧುವಿನ ಹೆಸರು ಧನ್ಯತಾ ಎಂದು ತಿಳಿದುಬಂದಿದೆ. ಇವರು ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಚಿತ್ರದುರ್ಗ ಮೂಲದವರು.

ಕೆಲವು ವರ್ಷಗಳಿಂದ ಧನಂಜಯ ಹಾಗೂ ಡಾ. ಧನ್ಯತಾ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಮದುವೆ ಮೂಲಕ ಜೀವನದಲ್ಲಿ ಒಟ್ಟಿಗೆ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ. ಇಬ್ಬರ ಪ್ರೀತಿಯನ್ನು ಎರಡೂ ಕುಟುಂಬಗಳು ಒಪ್ಪಿಕೊಂಡಿವೆ ಎಂದು ಹೇಳಲಾಗಿದೆ.

ಮುಂದಿನ ವರ್ಷ ಅಂದರೆ, 2025ರ ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲು ಡಾಲಿ ಧನಂಜಯ್​ ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದಹಾಗೆ ಡಾ. ಧನ್ಯತಾ ಅವರು ಗೈನಕಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಾಸನಾಂಬೆ ದರ್ಶನೋತ್ಸವ ಟಿಕೆಟ್ ಮಾರಾಟ ಪುನರಾರಂಭ: ಒಂದೇ ದಿನದಲ್ಲಿ ಪಾಸ್​ ರದ್ದು ನಿರ್ಧಾರ ವಾಪಸ್

Leave a Reply

Your email address will not be published. Required fields are marked *