BBMP
Loading ...

BBMP

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳ ಸರ್ವೇಯನ್ನು ಸೋಮವಾರದಿಂದಲೇ ಮಾಡುತ್ತೇವೆ ಎಂದಿದ್ದ ಪಾಲಿಕೆ ಇದೀಗ ಉಲ್ಟಾ ಹೊಡೆದಿದೆ.

ಇಂದಿನಿಂದ ಸರ್ವೇ ಕಾರ್ಯ ಆರಂಭವಾಗಬೇಕಾಗಿತ್ತು. ಆದ್ರೆ ಈಗ ಸರ್ವೇಗೆ ಆಪ್ ಸಿದ್ಧವಾಗಬೇಕು ಎಂಬ ಕುಂಟುನೆಪವನ್ನು ಪಾಲಿಕೆ ಹೇಳುತ್ತಿದೆ. ಈ ಬಗ್ಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಎಲ್ಲೆಲ್ಲಿ ಕಟ್ಟಡ ಇದೆ ಅಲ್ಲೆಲ್ಲಾ ಸರ್ವೇ ಮಾಡ್ತೀವಿ. ಆದ್ರೆ ಆ್ಯಪ್ ಬೇಕಾಗಿರೋದರಿಂದ ತಡ ಆಗಬಹುದು. ನಾಳೆ ನಾಡಿದ್ದಿನಿಂದ ಸರ್ವೇ ಆಗಬಹುದು.

ಖಂಡಿತ ಅನಧಿಕೃತ ಕಟ್ಟಡ ಇದ್ರೆ ತೆರವು ಮಾಡ್ತೀವಿ. ಮೊದಲು ಮಾಲೀಕರಿಗೆ ನೋಟಿಸ್ ಕೊಡ್ತೀವಿ. ಮಾಲೀಕರ ವೆಚ್ಚದಲ್ಲಿ ತೆರವಿಗೆ ಸೂಚಿಸ್ತೀವೆ. ಒಂದು ವೇಳೆ ತೆರವಾಗದಿದ್ರೆ ನಾವೇ ತೆರವು ಮಾಡ್ತೀವಿ. ಆದ್ರೆ ತೆರವಿಗೆ ಆಗೋ ವೆಚ್ಚವನ್ನ ಮಾಲೀಕರೇ ಭರಿಸಬೇಕು ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *