BBMP
Loading ...

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಇಂದು ( ಅ. 15) ವಿಜಯನಗರ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಬೆಸ್ಕಾಂ ಕೆಲಸವನ್ನು ಮುಂದೂಡಲಾಗಿದೆ.

ಜಲಶ್ರೀ ವಾಟರ್ ಸಪ್ಲೈ ಸರ್ವಿಸ್, ಟ್ರೀ ಪಂಪಿಂಗ್, ಆರ್ ಎಂ ಯು ಸರ್ವೀಸ್ ಸೇರಿದಂತೆ ಇನ್ನಿತರ ರಿಪೇರಿ ಕಾರ್ಯಗಳು ಇಂದು ನಡೆಯಬೇಕಿತ್ತು. ದೇವನಹಳ್ಳಿ, ವಿಜಯಪುರ, ದೊಡ್ಡನಹಳ್ಳಿ, ಶಿವನಹಳ್ಳಿ, ಕಾವೇರಿನಗರ, ಹುಳಿಮಾವು, ಅಕ್ಷಯನಗರ, ಹೊಂಗಸಂದ್ರ, ಕೋಡಿಚಿಕ್ಕನಹಳ್ಳಿ, ವಿಜಯಬ್ಯಾಂಕ್ ಲೇಔಟ್, ವಿಶ್ವಪ್ರಿಯ ಲೇಔಟ್, ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಆರ್ ಪಿಸಿ ಲೇಔಟ್, ವಿನಾಯಕ ಲೇಔಟ್, ನಾಗರಬಾವಿ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಸುತ್ತಮುತ್ತ ಪ್ರದೇಶಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿತ್ತು.

ಆದರೆ, ನಿರಂತವಾಗಿ ಮಳೆಯಾಗುತ್ತಿರುವುದರಿಂದ ಬೆಸ್ಕಾಂ ದುರಸ್ಥಿ ಕಾರ್ಯವನ್ನು ಮುಂದೂಡಿದೆ. ಎಂದಿನಂತೆ ಇಂದು ಕರೆಂಟ್​ ಇರಲಿದೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಎಂದಿನಂತೆ ಮಾಡಿಕೊಳ್ಳಬಹುದು. ಮತ್ತೆ ಯಾವ ದಿನ ರಿಪೇರಿ ಕೆಲಸ ನಡೆಯಲಿದೆ ಎಂಬುದು ಬೆಸ್ಕಾಂ ಮತ್ತೆ ತಿಳಿಸಲಿದೆ. ಸದ್ಯಕ್ಕೆ ಇಂದು ವಿಜಯನಗರ ವಾಪ್ತಿಯಲ್ಲಿ ವಿದ್ಯುತ್​ ವ್ಯತ್ಯಯವಾಗುವುದಿಲ್ಲ.

ದರ್ಶನ್ ಜಾಮೀನು ಅರ್ಜಿ ವಜಾ: ದಾಸನಿಗೆ ಜೈಲೇ ಗತಿ, ಅಭಿಮಾನಿಗಳಿಗೆ ನಿರಾಸೆ

Leave a Reply

Your email address will not be published. Required fields are marked *