ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಹುನಿರೀಕ್ಷಿತ ‘ಯುಐ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ.
ಯುಐ’ ಸಿನಿಮಾ ಇದೇ ಡಿಸೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆನಟ ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ್ದಾರೆ. ಎಂಟು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್ / ಫ್ಲಾಪ್ ಅಂತ ಹೇಳ್ತಿದ್ರೀ, ಈ ಸಿನಿಮಾ ನಿಮ್ಮನ್ ನೋಡಿ…..
All these days you watched the movies and decided weather it’s a hit or a flop. This movie will watch you and….#UiTheMovieOnDEC20th ❤️🔥#UiTheMovie #UppiDirects #Upendra @nimmaupendra… pic.twitter.com/eSo3tAkKNc
— Upendra (@nimmaupendra) October 14, 2024
ನಾನು’ ಮತ್ತು ‘ನೀನು’ ಎಂಬ ಅರ್ಥ ನೀಡುವ ಶೀರ್ಷಿಕೆ ಹೊಂದಿರುವ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿ. ಅಜನೀಶ್ ಲೋಕನಾಥ್ ಸಂಗೀತವಿದೆ. ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿರುವ ಚಿತ್ರವಿದುಕೆ.ಪಿ. ಶ್ರೀಕಾಂತ್ ಮತ್ತು ಜಿ. ಮನೋಹರನ್ ಬಂಡವಾಳ ಹೂಡಿದ್ದಾರೆ. ನಟರಾದ ಉಪೇಂದ್ರ, ರವಿಶಂಕರ್, ಅಚ್ಯುತ್ಕುಮಾರ್, ಸಾಧುಕೋಕಿಲ ಈ ಸಿನಿಮಾದಲ್ಲಿ ಭಿನ್ನವಾದ ಪಾತ್ರವಿದೆ.
ಅಂದಹಾಗೆ ಯುಐ ಸಿನಿಮಾದಿಂದ ಕೊನೆಯದಾಗಿ ಟ್ರೋಲ್ ಸಾಂಗ್ ಬಿಡುಗಡೆಯಾಗಿತ್ತು. 7 ತಿಂಗಳ ಹಿಂದೆ ಈ ಸಾಂಗ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಚಿತ್ರದ ಮೇಲಿನ ನಿರೀಕ್ಷೆಯನ್ನು ಸಹ ದುಪ್ಪಟ್ಟು ಮಾಡಿತ್ತು. ಇದಾದ ಬಳಿಕ ಚಿತ್ರತಂಡದಿಂದ ಯಾವುದೇ ಅಪ್ಡೇಟ್ ಬಂದಿರಲಿಲ್ಲ. ಯಾವಾಗ ಹೊಸ ಅಪ್ಡೇಟ್ ಬರುತ್ತದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು ಮತ್ತು ಚಿತ್ರತಂಡವನ್ನು ಕೇಳುತ್ತಿದ್ದರು. ಇದರ ನಡುವೆ ಆ. 16ನೇ ತಾರೀಖಿನಂದು ಬಿಗ್ ಅನೌನ್ಸ್ಮೆಂಟ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಬಳಿಕ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ಸಾಧ್ಯವಾಗಲಿಲ್ಲ. ಇದೀಗ ಅಧಿಕೃತ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಡಿಸೆಂಬರ್ 20ಕ್ಕೆ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ.
ಮನೆ ಕಟ್ಟೋರಿಗೆ ಗುಡ್ ನ್ಯೂಸ್ : ದೇಶಾದ್ಯಂತ `ಕಬ್ಬಿಣ, ಸಿಮೆಂಟ್’ ಬೆಲೆ ಇಳಿಕೆ!


