ಬಿಡದಿ (ರಾಮನಗರ): ಕೇಬಲ್ ಅಳವಡಿಕೆಗೆ ಅನುಮತಿ ನೀಡಲು ವಿದ್ಯುತ್ ಗುತ್ತಿಗೆದಾರನಿಂದ ಕಚೇರಿಯಲ್ಲಿ 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಬೆಸ್ಕಾಂನ ಬಿಡದಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಹಣದ ಸಮೇತ ಬಂಧಿಸಿದ್ದಾರೆ.
ವಿದ್ಯುತ್ ಗುತ್ತಿಗೆದಾರ ಅನಂತರಾಜ್ ಎಂಬುವರು ಬಿಡದಿ ಭಾಗದಲ್ಲಿ ಕೇಬಲ್ ಅಳವಡಿಸಲು ಗುತ್ತಿಗೆ ಪಡೆದಿದ್ದರು. ಗುತ್ತಿಗೆ ಮಂಜೂರಾತಿಯ ಪತ್ರಕ್ಕೆ ಸಹಿ ಮಾಡಲು 1.50 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪುಟ್ಟಸ್ವಾಮಿ, ಮುಂಗಡವಾಗಿ 30 ಸಾವಿರ ರೂಪಾಯಿ ತಂದು ಕೊಡುವಂತೆ ಹೇಳಿದ್ದ. ಈ ಕುರಿತು, ಅನಂತರಾಜ್ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು.
ಬೆಳಿಗ್ಗೆ ಅನಂತರಾಜ್ಗೆ ಕರೆ ಮಾಡಿದ್ದ ಪುಟ್ಟಸ್ವಾಮಿ, ಛತ್ರ ಗ್ರಾಮದಲ್ಲಿರುವ ತನ್ನ ಕಚೇರಿಗೆ ಹಣ ತಲುಪಿಸುವಂತೆ ಸೂಚಿಸಿದ್ದ. ಈ ಕುರಿತು ಮಾಹಿತಿ ಪಡೆದಿದ್ದ ನಮ್ಮ ತಂಡ ಮುಂಚೆಯೇ ಕಚೇರಿಗೆ ತೆರಳಿತ್ತು. ಕಚೇರಿಗೆ ಬಂದ ಪುಟ್ಟಸ್ವಾಮಿ, ಅನಂತರಾಜ್ ಅವರಿಂದ 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬಂಧಿಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ದರ್ಶನ್ ಅರೆಸ್ಟ್ ಆಗಿ ಇಂದಿಗೆ 100 ದಿನ! ಜೈಲಾಧಿಕಾರಿಗಳ ಮುಂದೆ ವಿಜಯಲಕ್ಷ್ಮಿ ಮಾಡಿದ ಮನವಿ ಏನು?
ಸೆಪ್ಟೆಂಬರ್ 19 ಗುರುವಾರದಂದು ವಿಜಯನಗರ, ಮಾಗಡಿ ರಸ್ತೆ, ದಾಸರಹಳ್ಳಿ ಸೇರಿ ಹಲವೆಡೆ ಪವರ್ ಕಟ್: ಇಲ್ಲಿದೆ ಪಟ್ಟಿ


