BBMP
Loading ...

Man Ends Life

ರಾಣೆಬೆನ್ನೂರು: ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ, ಉದ್ಯೋಗ ಸಿಗದೇ ಇದ್ದುದ್ದಕ್ಕೆ, ರೈತ ಬೆಳೆ ಕೈ ಹಿಡಿಯದಿದ್ದಕ್ಕೆ, ಲವ್ ಫೇಲ್ಯೂರ್ ಆಗಿದ್ದಕ್ಕೆ ಹೀಗೆ ಬೇರೆ ಬೇರೆ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ತಾರೆ. ಆದರೆ ಇಲ್ಲೊಬ್ಬ ಯುವಕ ಬೇರೆಯೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು..37 ವರ್ಷದ ಯುವಕನೊಬ್ಬ ತನಗೆ ಮದುವೆಯಾಗಲು ಹೆಣ್ಣು ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬೇಸರದ ಘಟನೆ ನಡೆದಿದೆ. ಮೃತ ಯುವಕನ್ನು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಬೀರೇಶ್ವರ ನಗರದ ನಿವಾಸಿ ಪ್ರದೀಪ್​ಕುಮಾರ್ ಕರಬಸಪ್ಪ ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದೆ.

ಈತ ಜೊಮ್ಯಾಟೋ ಕಂಪನಿಯಲ್ಲಿ ಫುಡ್‌ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಆದರೆ, ಮದುವೆ ಮಾಡಿಕೊಳ್ಳಲು ಯಾರೂ ಕನ್ಯೆ ಕೊಡಲಿಲ್ಲವೆಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಮೃತ ಯುವಕನಿಗೆ ಕಳೆದ ಕೆಲ ವರ್ಷಗಳಿಂದ ಮದುವೆಯಾಗಲು ಬೇರೆ ಬೇರೆ ಭಾಗಗಳಲ್ಲಿ ಹುಡುಗಿ ಹುಡುಕುತ್ತಿದ್ದರು. ಆದರೆ ಎಲ್ಲೂ ಕೂಡ ಹುಡುಗಿ ಸೆಟ್ ಆಗಿರಲಿಲ್ಲ. ಮದುವೆಗೆ ಹೆಣ್ಣು ಸಿಗಲಿಲ್ಲ ಎಂದು ತೀವ್ರವಾಗಿ ಪ್ರದೀಪಕುಮಾರ್, ಮಾನಸಿಕವಾಗಿ ತೀವ್ರ ಮನನೊಂದಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರ್ಶನ್​ ಅರೆಸ್ಟ್​ ಆಗಿ ಇಂದಿಗೆ 100 ದಿನ! ಜೈಲಾಧಿಕಾರಿಗಳ ಮುಂದೆ ವಿಜಯಲಕ್ಷ್ಮಿ ಮಾಡಿದ ಮನವಿ ಏನು?

Leave a Reply

Your email address will not be published. Required fields are marked *