BBMP
Loading ...

BESCOM

ಬೆಂಗಳೂರು: ಕಿರಿಯ ಪವರ್​ ಮ್ಯಾನ್​ ಅನ್ನು ಪ್ರಭಾರ ಕಿರಿಯ ಇಂಜಿನಿಯರ್​ ಸ್ಥಾನಕ್ಕೆ ನಿಯೋಜಿಸುವ ಮೂಲಕ ಬೆಸ್ಕಾಂ ಭಾರಿ ಎಡವಟ್ಟು ಮಾಡಿಕೊಂಡಿದೆ. ಬೆಸ್ಕಾಂನ ಈ ಆದೇಶಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಮನಗರ ನಗರ ಉಪವಿಭಾಗದ ಕಿರಿಯ ಪವರ್ ಮ್ಯಾನ್ ಆದ ನಾಗರಾಜು ಅವರನ್ನು ರಾಮನಗರ ಗ್ರಾಮೀಣ ಉಪ ವಿಭಾಗದ ಕೈಲಾಂಚ ಶಾಖೆಗೆ ಕಿರಿಯ ಇಂಜಿನಿಯರ್ ಶ್ರೀ ಬಿ.ಟಿ ಸಂತೋಷ್ ಕುಮಾರ್ ವರ್ಗಾವಣೆಯಿಂದ ತೆರವಾಗಲಿರುವ ಹುದ್ದೆಗೆ ಪ್ರಭಾರ ಕಿರಿಯ ಇಂಜಿನಿಯರ್ ಆಗಿ ನಿಯೋಜಿಸಲಾಗಿದೆ ಎಂದು ಬೆಸ್ಕಾಂ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಸಾಮಾನ್ಯ ಪವರ್​ ಮ್ಯಾನ್​ ಅನ್ನು ಜೆಇ ಆಗಿ ನಿಯೋಜಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬೆಸ್ಕಾಂನಲ್ಲಿ ಯಾರು ಏನು ಬೇಕಾದರೂ ಆಗಬಹುದು. ಇಲ್ಲಿ ವಿದ್ಯಾರ್ಹತೆ ಬೇಕಾಗಿಲ್ಲ. ಇದು ನಮ್ಮ ಬೆಸ್ಕಾಂ ಇಂದಿನ ಪರಿಸ್ಥಿತಿ. ಸಾಮಾನ್ಯ ಲೈನ್​ಮ್ಯಾನ್​ ಇಷ್ಟೊಂದು ಪ್ರಭಾವ ಹೊಂದಿರುವುದನ್ನು ಕಂಡು ಅಚ್ಚರಿಯಾಗುತ್ತದೆ ಎಂದು ಬೆಸ್ಕಾಂ ಗ್ರಾಹಕರು ಟೀಕಾ ಪ್ರಹಾರ ನಡೆಸಿದ್ದಾರೆ.

ಬೆಸ್ಕಾಂ ಫಾಸ್ಟ್​ಟ್ರ್ಯಾಕ್​ ಸೇವೆ ಸ್ಥಗಿತ: ಗ್ರಾಹಕರು ಕಂಗಾಲು, ಪ್ರಶ್ನೆ ಮಾಡಿದ್ರೆ ಉಡಾಫೆ ಉತ್ತರ ನೀಡುವ ಸಿಬ್ಬಂದಿ

Leave a Reply

Your email address will not be published. Required fields are marked *