BBMP
Loading ...

ಬೆಂಗಳೂರು: ನಿಮ್ಮ ಮೊಬೈಲ್​ಗೆ ಎಪಿಕೆ ಅನ್ನೋ ಫೈಲ್​ ಬರ್ತಿದ್ಯಾ..?. ಎಲೆಕ್ಟ್ರಿಸಿಟಿ ಬಿಲ್, ಜಲಮಂಡಳಿ ಬಿಲ್​ ಹೆಸರಲ್ಲಿ ಎಪಿಕೆ ಫೈಲ್​​ ಬಂದಿದ್ಯಾ?. ಆ ತರ ಫೈಲ್​ ಬಂದವರು ಬರದೇ ಇದ್ದವ್ರೂ ಮೋಸ ಹೋಗೋಕು ಮುನ್ನ, ಇದನ್ನು ಗಮನವಿಟ್ಟು ತಿಳಿದುಕೊಳ್ಳಿ.

ವೇಷ ಬೇರೆ ರೂಪ ಬೇರೆ.. ಆದ್ರೆ ವಂಚನೆ ಮಾತ್ರ ಸೇಮ್​ ಟು ಸೇಮ್​.. ಓಟಿಪಿ ಬರಲ್ಲ, ಲಿಂಕ್​ಕೂ ಕಳ್ಸಲ್ಲ. ಆದ್ರೂ, ಕ್ಷಣ ಮಾತ್ರದಲ್ಲಿ ಮಾತ್ರ ನಿಮ್ಮ ಬ್ಯಾಂಕ್​ಗೆ ಕನ್ನ ಬೀಳೋದಂತೂ ಗ್ಯಾರಂಟಿ.. ಅದ್ಹೇಗೆ ಅಂದ್ರಾ?.

ಈ ಹ್ಯಾಕರ್​ಗಳ ಕಾಟ ಏನ್ಮಾಡಿದ್ರು ಕಡಿಮೆಯಾಗ್ತಿಲ್ಲ.. ಒಂದಲ್ಲ ಒಂದು ರೀತಿಯಲ್ಲಿ ಮೊಬೈಲ್​ ಹ್ಯಾಕ್​ ಮಾಡಿ ಹಣ ಎಗರಿಸ್ತಾರೆ.. ಇದೀಗ ಇದೇ ಹ್ಯಾಕರ್ಸ್​ ಬೆಸ್ಕಾಂ, ಜಲಮಂಡಳಿ ಹೆಸ್ರಲ್ಲಿ ವಂಚನೆಗಿಳಿಸಿದ್ದಾರೆ. ಆದ್ರೆ, ಈ ವಂಚಕರು ಲಿಂಕ್​, ಓಟಿಪಿ ಕಳಿಸಲ್ಲ. ಫೈಲ್​ ಕಳುಹಿಸಿ ಡೌನ್​ಲೌಡ್​ ಆಗ್ತಿದ್ದಂತೆ ಫೋನ್​ ಹ್ಯಾಕ್​ಮಾಡಿ ಒಂದು​ ಸೆಕೆಂಡ್​ನಲ್ಲೇ ಹಣಕ್ಕೆ ಕನ್ನ ಹಾಕ್ತಿದ್ದಾರೆ.

ಎಚ್ಚರ..ಎಚ್ಚರ!
* ಕೆಲ ಕಂಪನಿ ಲೋಗೋ ಡಿಪಿಗೆ ಇಟ್ಟುಕೊಂಡು ಫೈಲ್‌ ಫಾರ್ವಡ್
* ವಾಟ್ಸ್​ಆ್ಯಪ್ ನಂಬರ್​ಗಳಿಗೆ ಬರುತ್ತೆ ಎಪಿಕೆ ಫೈಲ್​ ಫಾರ್ವಡ್
* ಬೆಸ್ಕಾಂ, ನೀರಿನ ಬಿಲ್ ಪಾವತಿಸುವಂತೆ ಮೆಸೇಜ್ ಫಾರ್ವರ್ಡ್
* ಫೈಲ್‌ ವಾಟ್ಸ್​ಆ್ಯಪ್​ಗೆ ಸೆಂಡ್ ಮಾಡಿ ಡೌನ್‌ಲೋಡ್‌ಗೆ ಸೂಚನೆ
* ಮೊಬೈಲ್ ಕಂಟ್ರೋಲ್ ಕಂಪ್ಲೀಟ್ ಆಗಿ ಸೈಬ‌ರ್ ಕಳ್ಳರ ಪಾಲು
* ಬ್ಯಾಂಕ್ & ವ್ಯಾಲೆಟ್‌ಗೆ​ ನಂಬರ್ ಲಿಂಕ್ ಆಗಿದ್ರೆ ಹಣ ವರ್ಗಾವಣೆ
ನ್ಯೂಸ್​ಫಸ್ಟ್​ ವರದಿಯಿಂದ ಈ ಬಗ್ಗೆ ಜಲಮಂಡಳಿ ಗಮನಕ್ಕೂ ಬಂದಿದ್ದು, ಎಪಿಕೆ ಅಪ್ಲಿಕೇಶನ್ & ಫೈಲ್​ಗಳು ಬಂದರೆ ಬಳಸದಂತೆ ಜಲಮಂಡಳಿ ಅಧ್ಯಕ್ಷ ಡಾ.ರವಿ ರಾಮ್​ ತಿಳಿಸಿದ್ದಾರೆ.

ನೀರಿಗೆ ಸಂಬಂಧಿಸಿದಂತೆ ನಾವು ಯಾವುದೇ ಲಿಂಕ್ ಅನ್ನು ಕಳುಹಿಸಲ್ಲ. ನಿಮ್ಮ ಅಧಿಕೃತ ಆ್ಯಪ್ ಇದೆಯೋ ಅದರ ಮೂಲಕವೇ ಪೇ ಮಾಡಿ. ಬೇರೆ ಆ್ಯಪ್ ಮೂಲಕ ಹಣ ಪಾವತಿ ಮಾಡಬೇಡಿ. ಯಾವಗಲೂ ಮಾಡೋದನ್ನೇ ಮಾಡಿ. ಹೊಸದನ್ನು ಬಳಕೆ ಮಾಡಬೇಡಿ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಹೇಳಿದ್ದಾರೆ.

ಪತಿಯಿಂದ ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಮಹಿಳೆಗೆ ಹೈಕೋರ್ಟ್ ಛೀಮಾರಿ; ದುಡಿದು ಸಂಪಾದಿಸಿ ಎಂದ ಜಡ್ಜ್‌!

Leave a Reply

Your email address will not be published. Required fields are marked *