BBMP
Loading ...

ಬೆಂಗಳೂರು: ನಗರದಲ್ಲಿನ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹೊಸದಾಗಿ 52 ಇಂದಿರಾ ಕ್ಯಾಂಟೀನ್ ಗಳನ್ನು ವಿವಿಧೆಡೆ ಆರಂಭಿಸಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 52 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ಗುರುವಾರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿ ಕ್ಯಾಂಟೀನ್‌ಗೆ ₹40 ಲಕ್ಷದಂತೆ ಒಟ್ಟು ₹20 ಕೋಟಿ ವ್ಯಯಿಸಲಾಗುವುದು ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

ಅಂದಹಾಗೇ ಈಗಾಗಲೇ ಬೆಂಗಳೂರಲ್ಲಿ ಹಲವು ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಹೊಸ ಮೆನ್ಯೂ ರೂಪದಲ್ಲಿ ತಿಂಡಿ, ಊಟವನ್ನು ನೀಡಲಾಗುತ್ತಿದೆ. ಈಗ ಹೊಸದಾಗಿ ನಗರದಲ್ಲಿ 52 ಇಂದಿರಾ ಕ್ಯಾಂಟೀನ್ ಆರಂಭಿಸಲಾಗುತ್ತಿದ್ದು, ಮತ್ತಷ್ಟು ಜನತೆಯ ಹಸಿವನ್ನು ನೀಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದಂತೆ ಆಗಿದೆ.

ಬೆಸ್ಕಾಂ, ಜಲಮಂಡಳಿ ಹೆಸರಲ್ಲಿ ಕಿರಾತಕರ ವಂಚನೆ: APK ಫೈಲ್​​ ಡೌನ್​ಲೋಡ್ ಮಾಡಿದ್ರೆ ಹಣ ಮಾಯ, ಹೇಗೆ?

Leave a Reply

Your email address will not be published. Required fields are marked *