BBMP
Loading ...

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪುಲಿಕೇಶಿನಗರ ಠಾಣಾ ವ್ಯಾಪ್ತಿಯ ಫ್ರೆಜರ್ ಟೌನ್ ನಲ್ಲಿ 18 ವರ್ಷದ ಯುವಕನನ್ನ ಐವರು ಮಂಗಳ ಮುಖಿಯರ ಅಟ್ಟಹಾಸ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.

ಬಲವಂತವಾಗಿ ಹುಡುಗನೊಬ್ಬನಿಗೆ ಲಿಂಗ ಪರಿವರ್ತನೆ ಮಾಡಿಸಿರುವ ಆರೋಪ ಕೇಳಿ ಬಂದಿದೆ. ಮೂರು ವರ್ಷಗಳ ಹಿಂದೆ ಅಂಬೇಡ್ಕರ್‌ ಕಾಲೇಜ ಸಮೀಪದಲ್ಲಿದ್ದ ಟೀ ಅಂಗಡಿಯಲ್ಲಿ ಸಂತ್ರಸ್ತ ಕೆಲಸ ಮಾಡಿಕೊಂಡಿದ್ದ. ಚಿತ್ರ, ಅಶ್ವಿನಿ, ಕಾಜಲ್‌, ಪ್ರೀತಿ, ಮುಗಿಲ ಎಂಬುವವರು ಟೀ ಕುಡಿಯುವ ನೆಪದಲ್ಲಿ ಬಂದು ಯುವಕನನ್ನು ಪರಿಚಯ ಮಾಡಿಕೊಂಡಿದ್ದರು. ನಮ್ಮ ಜತೆಗೆ ಬಂದರೆ ನಿನ್ನನ್ನು ಒಳ್ಳೆಯ ಮನೆಯಲ್ಲಿರಿಸಿ, ಸಂಪಾದನೆಯ ದಾರಿಯನ್ನು ಮಾಡಿಕೊಡುವುದಾಗಿ ಯುವಕನನ್ನು ಪುಸಲಾಯಿಸಿದ್ದಾರೆ. ಆದರೆ ಯುವಕ ಇದಕ್ಕೆ ಒಪ್ಪದೆ ಇದ್ದಾಗ, ಬಲವಂತವಾಗಿ ಬೆದರಿಸಿ ಟ್ಯಾನರಿ ರಸ್ತೆಯಲ್ಲಿದ್ದ ಮನೆಯಲ್ಲಿ ಯುವಕನನ್ನು ಇರಿಸಿಕೊಂಡಿದ್ದಾರೆ. ಬಳಿಕ ಭಿಕ್ಷೆ ಬೇಡು ಇಲ್ಲದಿದ್ದರೆ ರೌಡಿಗಳಿಗೆ ಹೇಳಿ ನಿನ್ನ ತಂದೆ-ತಾಯಿಯನ್ನು ಕೊಲೆ ಮಾಡಿಸುತ್ತೇವೆ ಎಂದು ಹೆದರಿಸಿದ್ದಾರೆ. ಇವರ ಬ್ಲ್ಯಾಕ್‌ಮೇಲ್‌ಗೆ ಹೆದರಿದ ಯುವಕ ಸುಮಾರು ಮೂರು ವರ್ಷಗಳ ಕಾಲ ಭಿಕ್ಷಾಟನೆ ಮಾಡಿಸಿ ಹಣ ಸಂಪಾದಿಸಿದ್ದಾರೆ.

ಇತ್ತೀಚೆಗೆ ಈ ಮಂಗಳಮುಖಿಯರು ಯುವಕನಾಗಿಯೇ ಇಷ್ಟು ದುಡಿಯುತ್ತಿದ್ದಯಾ, ಹೆಣ್ಣಾದರೆ ಇನ್ನೂ ಎಷ್ಟು ಹಣವನ್ನು ಸಂಪಾದನೆ ಮಾಡಬಹುದು ಎಂದಿದ್ದಾರೆ. ಲಿಂಗ ಪರಿವರ್ತಿಸಿಕೊಂಡು ಹೆಣ್ಣಾಗು ಎಂದು ಬಲವಂತ ಮಾಡಿದ್ದಾರೆ. ಒಪ್ಪದೆ ಇದ್ದಾಗ ಗಾಂಜಾ ಸೇವಿಸಿ, ಮದ್ಯಪಾನ ಮಾಡಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ಬಳಿಕ ಬಲವಂತವಾಗಿ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಯುವಕ ಎಚ್ಚರಗೊಂಡ ಲಿಂಗ ಪರಿವರ್ತನೆ ಮಾಡಿದ್ದಾರೆ. ಅಕ್ರಮವಾಗಿ ಲಿಂಗ ಪರಿವರ್ತನೆ, ಅಶ್ಲೀಲ ಫೋಟೊ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಮನಬಂದಂತೆ ಥಳಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ.

ಭಿಕ್ಷಾಟನೆ ಮಾಡುವಂತೆ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ನೀಡಿದ್ದಾರೆ. ಕಳೆದ ಆಗಸ್ಟ್ 3 ರವರೆಗೆ ಮನೆಯಲ್ಲಿಯೇ ಕೂಡಿ ಹಾಕಿ, ಮನೆ ಮೇಲೆ ಕರೆದುಕೊಂಡು ಹೋಗಿ ಯಾವುದೋ ಪೂಜೆ ಮಾಡಿಸಿದ್ದಾರೆ. ನಂತರ ಹೇಗೋ ಇವರಿಂದ ತಪ್ಪಿಸಿಕೊಂಡ ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದಾನೆ.

ಮಂಗಳಮುಖಿಯರಾದ ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ, ಮುಗಿಲಿ ಎಂಬ ಐವರ ವಿರುದ್ಧ ಸಂತ್ರಸ್ಥ ದೂರು ನೀಡಿದ್ದು, ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಕೂಡ ಮಾಡ್ತಿದ್ದಾರೆ ಎನ್ನುವ ಆರೋಪ ಸಹ ಮಾಡಿದ್ದಾನೆ. ಇನ್ನು ಇಷ್ಟೆಲ್ಲ ಮಾಡಿದ್ದಲ್ಲದೇ ಕಸೀಪಾ ಬರೋದಿಲ್ಲ ಎಂದಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರಂತೆ. ಮನೆಯಲ್ಲಿದ್ದ ವಸ್ತುಗಳನ್ನು ಎಸೆದು ಚೆಲ್ಲಾಪಿಲ್ಲಿ ಮಾಡಿ ದಾಂಧಲೆ ಮಾಡಿದ್ದಾರಂತೆ. ಇನ್ನು ಕಸೀಪಾಗೆ ಸಹಾಯಕ್ಕೆ ಧಾವಿಸಿ ಕೆಲ ಮಂಗಳಮುಖಿಯರ ಮೇಲೂ ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಸದ್ಯ ಘಟನೆ ಸಂಬಂಧ ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಬೇಕರಿ-ಕಾಂಡಿಮೆಂಟ್ಸ್​ಗಳಲ್ಲಿ ಸಿಗರೇಟ್, ಗುಟ್ಕಾ ಮಾರಾಟಕ್ಕೆ ಬಿಬಿಎಂಪಿ ಬ್ರೇಕ್: ತಂಬಾಕು ಮಾರಾಟಕ್ಕೆ ಲೈಸೆನ್ಸ್ ಪಡೆಯುವುದು ಕಡ್ಡಾಯ

Leave a Reply

Your email address will not be published. Required fields are marked *