BBMP
Loading ...

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬಾರ್‌ & ರೆಸ್ಟೋರೆಂಟ್ ಮಾಲೀಕರ ಬಹು ದಿನದ ಬೇಡಿಕೆ ಕೊನೆಗೂ ಈಡೇರಿದೆ. ಇನ್ಮುಂದೆ ಮಧ್ಯರಾತ್ರಿ 1 ಗಂಟೆವರೆಗೂ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರಿನಾದ್ಯಂತ ಈ ಹೊಸ ಆದೇಶ ಜಾರಿಯಾಗುತ್ತಿದೆ.

ಈ ಹಿಂದೆ ಬೆಳಗ್ಗೆ 9ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಕಮಿಷನರೇಟ್ (ಸಿಟಿ ಸೆಂಟರ್‌) ವ್ಯಾಪ್ತಿಯಲ್ಲಿ ಬರುವ ಬಾರ್ & ರೆಸ್ಟೋರೆಂಟ್‌ಗೆ ಅವಕಾಶವಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಾರ್ & ರೆಸ್ಟೋರೆಂಟ್‌ಗಳಿಗೂ ರಾತ್ರಿ 1 ಗಂಟೆಯವರೆಗೂ ವ್ಯಾಪಾರ ವ್ಯವಹಾರಕ್ಕೆ ಸಮಯ ವಿಸ್ತರಿಸಲಾಗಿದೆ. ಈ ರೂಲ್ಸ್‌ನಿಂದ ಬಿಬಿಎಂಪಿ ಲಿಮಿಟ್ಸ್ ಅಲ್ಲಿ ಬಾರ್ ಮಾಲೀಕರ ವ್ಯಾಪಾರಕ್ಕೆ ಅನುಕೂಲ ಆಗಲಿದೆ.

ಮಧ್ಯರಾತ್ರಿ 1 ಗಂಟೆವರೆಗೂ ಸಮಯಾವಕಾಶ ನೀಡುವಂತೆ ಕೋರಿ ಬೆಂಗಳೂರು ಸೇರಿ 10 ಮಹಾನಗರ ಪಾಲಿಕೆಗಳ ಹೋಟೆಲ್ ಮಾಲೀಕರು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ರಾಜಧಾನಿ ಬೆಂಗಳೂರಿಗೆ ಮಾತ್ರ ಮಧ್ಯರಾತ್ರಿ 1 ಗಂಟೆ ತನಕ ವಾಣಿಜ್ಯ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ) ಲಕ್ಷ್ಮೀ ಸಾಗರ್ ಅವರು ಈ ಆದೇಶ ನೀಡಿದ್ದಾರೆ.

ಇಂದು ಮಧ್ಯರಾತ್ರಿಯಿಂದಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಆದೇಶ ಜಾರಿಯಾಗಿದ್ದು, ಇನ್ಮುಂದೆ ಬೆಳಗ್ಗೆ 6ರಿಂದ ಮಧ್ಯರಾತ್ರಿ 1ಗಂಟೆ ತನಕ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಲಾಗಿದೆ. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಅವರು ಸರ್ಕಾರದ ಈ ಆದೇಶಕ್ಕೆ ಧನ್ಯವಾದ ತಿಳಿಸಿದ್ದಾರೆ.

CL 4 – ಕ್ಲಬ್ (ಬೆಳಗ್ಗೆ 9 ರಿಂದ ಮಧ್ಯರಾತ್ರಿ 1)

CL 6 ( a) – ಸ್ಟಾರ್ ಹೋಟೆಲ್ (ಬೆಳಗ್ಗೆ 9 ರಿಂದ ಮಧ್ಯರಾತ್ರಿ 1)

CL 7 – ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ (ಬೆಳಗ್ಗೆ 9 ರಿಂದ ಮಧ್ಯರಾತ್ರಿ 1)

CL 7 ( D) ಎಸ್‌ಸಿ ಎಸ್‌ಟಿ ಮಾಲೀಕತ್ವದ ಹೋಟೆಲ್ ಅಂಡ್ ಬೋರ್ಡಿಂಗ್ ಹೌಸ್ (ಬೆಳಗ್ಗೆ 9 ರಿಂದ ಮಧ್ಯರಾತ್ರಿ 1)

CL 9 – ಬಾರ್ (ಬೆಳಗ್ಗೆ 10 ರಿಂದ ಮಧ್ಯರಾತ್ರಿ 1)

Leave a Reply

Your email address will not be published. Required fields are marked *