ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ ಮುಂದುವರಿದಿದೆ. ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಸಹ ಕಳೆದ ಆರ್ಥಿಕ ವರ್ಷದಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 55.05 ಲಕ್ಷ ಯೂನಿಟ್ ವಿದ್ಯುತ್ ಕಳ್ಳತನವಾಗಿದ್ದು, ಅಧಿಕಾರಿಗಳು 4,788 ಪ್ರಕರಣಗಳನ್ನು ದಾಖಲಿಸಿ ಒಟ್ಟು 21.29 ಕೋಟಿ ರೂ.ಗಳ ದಂಡವನ್ನು ವಸೂಲಿ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ 2.72 ಕೋಟಿ ಯೂನಿಟ್ ವಿದ್ಯುತ್ ಕಳ್ಳತನವಾಗಿದೆ. ಅವಧಿಯಲ್ಲಿ 14,356 ಪ್ರಕರಣಗಳು ಮತ್ತು 91.25 ಕೋಟಿ ರೂ.ದಂಡ ಸಂಗ್ರಹಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇಲ್ಲಿದೆ ಕಳ್ಳತನದ ಅಂಕಿ ಅಂಶ: 2021–22ರಲ್ಲಿ 1305.55 ಯೂನಿಟ್‌ಗಳನ್ನು ಕಳವು ಮಾಡಲಾಗಿದ್ದು, 4,730 ಪ್ರಕರಣಗಳು ದಾಖಲಾಗಿವೆ. ಆ ವರ್ಷ 41.66 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ. 2022–23ರಲ್ಲಿ ಕದ್ದ ಯೂನಿಟ್‌ಗಳಲ್ಲಿ 86.72 ಇಳಿಕೆ ಕಂಡುಬಂದಿದೆ. ಆದರೆ 28.29 ಕೋಟಿ ರೂ.ಗಳ ದಂಡದೊಂದಿಗೆ 4,878 ಪ್ರಕರಣಗಳ ಸಂಖ್ಯೆ ಹೆಚ್ಚಿದೆ. 2023–24ರಲ್ಲಿ ವಿದ್ಯುತ್ ಕಳ್ಳತನ ಸ್ವಲ್ಪ ಹೆಚ್ಚಾಗಿದೆ. ಈ ಅಂಕಿಅಂಶಗಳು ಬೆಂಗಳೂರನ್ನು ವಿಶೇಷವಾಗಿ ವ್ಯಾಪಾರ ಸಂಸ್ಥೆಗಳು ಮತ್ತು ಕೈಗಾರಿಕೆಗಳಲ್ಲಿ ವಿದ್ಯುತ್ ಕಳ್ಳತನದ ನಿರಂತರ ಸಮಸ್ಯೆಯನ್ನು ಎತ್ತಿ ತೋರಿಸುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.
ಹಾಕಬೇಕಿದೆ ಕಳ್ಳರಿಗೆ ಮೂಗುದಾರ
ವಿದ್ಯುತ್ ಕಳ್ಳತನವನ್ನು ತಡೆಯಲು ಬೆಸ್ಕಾಂ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಸಹ ಬೆಸ್ಕಾಂ ನಿಯಮಗಳನ್ನು ಗಾಳಿಗೆ ತೂರಿದಂತೆ ವಿದ್ಯುತ್ ಕಳ್ಳತನ ಮಾತ್ರ ಎಗ್ಗಿಲ್ಲದೇ ಸಾಗುತ್ತಿದೆ.
ಬೆಂಗಳೂರಿನ ನಮ್ಮ ಮೆಟ್ರೋ ತನ್ನ ಮೂರನೇ ಹಂತದ ವಿಸ್ತರಣೆಗೆ ಸಜ್ಜಾಗುತ್ತಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ನಗರದಾದ್ಯಂತ ಹೊಸ ಪ್ರದೇಶಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಬೆಂಗಳೂರು ಮೆಟ್ರೊದ 3ನೇ ಹಂತದ ವಿಸ್ತರಣೆ 2024 ರ ಅಂತ್ಯದ ವೇಳೆಗೆ ಅಥವಾ 2025 ರ ಆರಂಭದಲ್ಲಿ ನಿರ್ಮಾಣ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ಗಾಳಿ ಮಳೆಗೆ ವಿದ್ಯುತ್ ಹಾನಿ: ಈ ನಂಬರ್ಗಳಿಗೆ ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ


