BBMP
Loading ...

BBMP Election

ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ)ಯ ಚುನಾವಣೆ ನಡೆದು ಇಂದಿಗೆ ಅಂದರೆ ಸೆಪ್ಟೆಂಬರ್‌ 10ಕ್ಕೆ ಬರೋಬ್ಬರಿ 4 ವರ್ಷ ಆಗಿದೆ. ಈ ರೀತಿ ಸುದೀರ್ಘ ಅವಧಿಗೆ ಬಿಬಿಎಂಪಿ ಚುನಾವಣೆ ನಡೆಯದೆ ಇರುವುದು ಇದೇ ಮೊದಲು. ಬಿಬಿಎಂಪಿಯ ಚುನಾಯಿತ ಅಧಿಕಾರಿಗಳ ಅಧಿಕಾರ ಅವಧಿ ಮುಕ್ತಾಯವಾಗುತ್ತಿದ್ದಂತೆಯೇ ಚುನಾವಣೆ ನಡೆಸುವ ಸಂದರ್ಭ ಇರಲಿಲ್ಲ. ಆ ಸಮಯದಲ್ಲಿ ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರವಾಗಿತ್ತು. ದೇಶದಲ್ಲೇ ಕೋವಿಡ್‌ ಪ್ರಕರಣಗಳ ಅಗ್ರ ಸ್ಥಾನದಲ್ಲಿ ಬೆಂಗಳೂರು ಇತ್ತು. ಹೀಗಾಗಿ, ಚುನಾವಣೆ ಮುಂದೂಡಲಾಗಿತ್ತು.

ಒಂದರೆಡು ವರ್ಷದಲ್ಲಿ ಬಿಬಿಎಂಪಿ ಚುನಾವಣೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸುದೀರ್ಘ ನಾಲ್ಕು ವರ್ಷವಾದರೂ ಬಿಬಿಎಂಪಿಯ ಚುನಾವಣೆ ನಡೆದಿಲ್ಲ. ಈ ಹಿಂದೆ ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿಯು ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಲ್ಲೇ ಬಂದಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ಪಾಲಿಕೆ ಸದಸ್ಯರು ಬಿಬಿಎಂಪಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಹೋರಾಟ ಮಾಡಿದ್ದರು. ಬಿಬಿಎಂಪಿಯ ವಿರೋಧ ಪಕ್ಷದ ನಾಯಕರಾಗಿದ್ದ ಅಬ್ದುಲ್‌ ವಾಜಿದ್‌ ಅವರು ಹಾಗೂ ಪಾಲಿಕೆಯ ಮಾಜಿ ಆಡಳಿತ ಪಕ್ಷದ ನಾಯಕರಾಗಿದ್ದ ಎಂ.ಶಿವರಾಜು ಅವರು ಕೋರ್ಟ್‌ ಮೊರೆ ಹೋಗಿದ್ದರು.

ಬಿಬಿಎಂಪಿ ಚುನಾವಣೆ ವಿಷಯವು ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ಹಂತಕ್ಕೆ ಹೋಗಿತ್ತು. ಬಿಜೆಪಿ ಇರುವುದರಿಂದ ಬಿಬಿಎಂಪಿ ಚುನಾವಣೆ ನಡೆಯುತ್ತಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಚುನಾವಣೆ ನಡೆಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಬಿಬಿಎಂಪಿ ಚುನಾವಣೆ ನಡೆದಿಲ್ಲ.

ಬಿಬಿಎಂಪಿಯ ಚುನಾವಣೆ ಮುಂದೂಡುವುದಕ್ಕೆ ಹಲವು ಕಾರಣಗಳನ್ನು ಹುಡುಕಲಾಗುತ್ತಿದೆ ಎನ್ನುವ ಆರೋಪವೂ ಇದೆ. ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ಗಳ ವಿಂಗಡಣೆ ಮಾಡುವುದು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನು ರಚನೆ ಮಾಡುವುದು ಹಾಗೂ ಬಿಬಿಎಂಪಿಯನ್ನು ಐದು ಭಾಗವಾಗಿ ವಿಭಜನೆ ಮಾಡುವುದು. ಮೀಸಲಾತಿ ಪ್ರಕಟ ಬಾಕಿ ಎನ್ನುವುದು ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ, ಬಿಬಿಎಂಪಿ ಚುನಾವಣೆಯನ್ನು ಮುಂದೂಡಲಾಗುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವ ಸಂದರ್ಭದಲ್ಲಿ ಬಿಬಿಎಂಪಿಗೆ ಪ್ರತ್ಯೇಕ ಕಾನೂನು ರೂಪಿಸಲಾಗುವುದು ಎಂದು ಹೇಳಿ ಚುನಾವಣೆಯನ್ನು ಮುಂದೂಡಲಾಗಿತ್ತು. ಹೊಸ ಕಾನೂನಿಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು.

ಕಳೆದ ನಾಲ್ಕು ವರ್ಷಗಳಿಂದಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಚುನಾವಣೆ ನಡೆಯದೆ ಇರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಇಂದಿಗೂ ಆಡಳಿತಾಧಿಕಾರಿ ನೇತೃತ್ವದಲ್ಲಿ ಬಿಬಿಎಂಪಿ ಕಾರ್ಯನಿರ್ವಹಿಸುತ್ತಿದೆ. ಬಿಬಿಎಂಪಿಯ ಮೇಯರ್‌ ಜಾಗದಲ್ಲಿ ಇದೀಗ ಆಡಳಿತಾಧಿಕಾರಿ ಇದ್ದು. ಮೇಯರ್‌ ತೆಗೆದುಕೊಳ್ಳುವ ನಿರ್ಧಾರಗಳನ್ನು ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ನಗರದಲ್ಲಿ ಸ್ವಚ್ಛತೆ, ರಸ್ತೆಗುಂಡಿ ಸಮಸ್ಯೆ, ನೀರು ಸಮಸ್ಯೆ ಹಾಗೂ ಟ್ರಾಫಿಕ್‌ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಬೆಂಗಳೂರಿನಲ್ಲಿ ಇಂದಿಗೂ ಸಣ್ಣ ಮಳೆಯಾದರೂ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಇದೆ.

ಪಾಲಿಕೆ ಸದಸ್ಯರು ಇರುವ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರು ಈ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುತ್ತಿದ್ದರು. ಆದರೆ, ಈಗ ಅಧಿಕಾರಿಗಳೇ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆ. ಜನರು ಸಮಸ್ಯೆ ಎದುರಾದರೆ, ಕೂಡಲೇ ಪಾಲಿಕೆಯ ಆಯಾ ವಾಡ್‌ನ ಸದಸ್ಯರನ್ನು ಸಂಪರ್ಕಿಸುತ್ತಿದ್ದರು. ಆದರೆ, ಇದೀಗ ಸಣ್ಣಪುಟ್ಟ ಸಮಸ್ಯೆಗಳಿಗೂ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರನ್ನೇ ಅವಲಂಬಿಸಬೇಕಿದೆ.

ರಾಜನ ಮೇಲೆ ಭಂಗ ಬೀರಲಿದೆ: ಸಿಎಂ ಬದಲಾವಣೆ ಕುರಿತು ಕೋಡಿಶ್ರೀ ಸ್ಪೋಟಕ ಹೇಳಿಕೆ!

Leave a Reply

Your email address will not be published. Required fields are marked *