BBMP
Loading ...

New Project

Greater Bengaluru News9: ಪ್ರಶಾಂತನಗರದ ಓಂ ಶ್ರೀ ಹರಿಹರ ಆಧ್ಯಾತ್ಮಿಕ ಸಂಸ್ಥೆ ವತಿಯಿಂದ 22ನೇ ವಾರ್ಷಿಕೋತ್ಸವ ಪ್ರಯುಕ್ತ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮಗಳು ನಡೆಯಲಿದೆ.

ಜನವರಿ 14 ರಂದು ದೊಡ್ಡ ಪರದೆಯ ಮೇಲೆ ಮಕರ ಜ್ಯೋತಿಯ ದಿವ್ಯ ದರ್ಶನ, ನಂತರ ಪ್ರಸಿದ್ಧ ಗಾಯಕರಾದ ಕಲಾಶ್ರೀ ಟಿ ರಾಜಾರಾಮ್ ಸವಿಗಾನ ಲಹರಿ ತಂಡದವರಿಂದ ಭಕ್ತಿಗೀತೆಗಳು ಮತ್ತು ಭಜನೆ ನಡೆಯಿತು.

ನಾಳೆ ಅಂದರೆ ಜನವರಿ 18ರ ಭಾನುವಾರದಂದು 22ನೇ ವಾರ್ಷಿಕೋತ್ಸವದ ಪ್ರಯುಕ್ತ ಬೆಳಗ್ಗೆ 8.30 ರಿಂದ ಕಲಶ ಪೂಜೆ, ಹೋಮ, ಅಲಂಕಾರ, ಮಹಾಮಂಗಳಾರತಿ ಹಾಗೂ ಮಧ್ಯಾಹ್ನ 12.00 ರಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ಶುಚಿ ಮತ್ತು ನೈರ್ಮಲ್ಯದಿಂದ ಕೂಡಿರುವ ದೇವಸ್ಥಾನದಲ್ಲಿನ ಸೌಲಭ್ಯಗಳು

  1. ಮಾಲೆ, ವಸ್ತ್ರಗಳು, ತುಪ್ಪದಕಾಯಿ ಮತ್ತು ಇರುಮುಡಿ ಕಟ್ಟುವ ವ್ಯವಸ್ಥೆ
  2. ಮಾಲೆ ಧರಿಸಿದ ಸ್ವಾಮಿಗಳಿಗೆ ತಂಗಲು ಜಾಗ
  3. ಪಡಿಪೂಜೆ ಮತ್ತು ಇತರೆ ಪೂಜೆಗಳು
  4. ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಈ ದೇವರ ಕೈಂಕರ್ಯಗಳಲ್ಲಿ ಭಕ್ತಿಪೂರ್ವಕವಾಗಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರುತ್ತೇವೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

8618305938, 9901454766, 9845536036

ಅಧ್ಯಕ್ಷರು ಹಾಗೂ ಪದಾಧಿಕಾರಿಗಳು

ಓಂ ಶ್ರೀ ಹರಿಹರ ಆಧ್ಯಾತ್ಮಿಕ ಸಂಸ್ಥೆ

ಸರ್ವರಿಗೂ ಆದರದ ಸುಸ್ವಾಗತ

Leave a Reply

Your email address will not be published. Required fields are marked *