BBMP
Loading ...

Hassan_News_2.max-1280x720.format-webp

Greater Bengaluru News9 : ಗಂಡ ಹಾಗೂ ಮಗುವನ್ನು ಬಿಟ್ಟು ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಪರಾರಿಯಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಅಲ್ಲದೇ ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡು, ಕಾಲುಂಗುರ ತೊಡಿಸಿಕೊಂಡಿರುವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಾಸನ ತಾಲೂಕಿನ ಮುಕಂದೂರು ಗ್ರಾಮದ ಪ್ರಕಾಶ್ ಎಂಬುವವರ ಪತ್ನಿ ಚಾಲಾಕಿ ಮಹಿಳೆಯಾಗಿದ್ದಾಳೆ.

ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಒಂದು ಮಗುವೂ ಇದೆ. ಕಳೆದ ಕೆಲವು ಸಮಯದಿಂದ ಪತ್ನಿ ಪರಪುರುಷನ ಜತೆ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಈ ಹಿಂದೆ ಒಮ್ಮೆ ಮನೆಯನ್ನು ಬಿಟ್ಟು ಹೋಗಿದ್ದಳು. ಆಗ ಪತಿ ಪ್ರಕಾಶ್ ದೊಡ್ಡ ಮನಸ್ಸು ಮಾಡಿ, ರಾಜಿ ಪಂಚಾಯಿತಿ ನಡೆಸಿ ಆಕೆಯನ್ನು ಮತ್ತೆ ಮನೆಗೆ ಕರೆತಂದಿದ್ದರು.

ಇತ್ತೀಚೆಗೆ ‘ನನಗೆ ಆರೋಗ್ಯ ಸರಿಯಿಲ್ಲ, ಆಸ್ಪತ್ರೆಗೆ ಹೋಗಿ ಬರುತ್ತೇನೆ’ ಎಂದು ಪತಿಯಲ್ಲಿ ಹೇಳಿ ಮನೆಯಿಂದ ಹೊರಬಂದಿದ್ದಳು. ಆದರೆ ಸಂಜೆಯಾದರೂ ಆಕೆ ಮನೆಗೆ ಮರಳದಿದ್ದಾಗ ಗಾಬರಿಗೊಂಡ ಪತಿ ಪ್ರಕಾಶ್ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆಕೆ ತನ್ನ ಪ್ರಿಯಕರನ ಜತೆ ಕಾರಿನಲ್ಲಿ ಓಡಿಹೋಗಿರುವುದು ತಿಳಿದುಬಂದಿದೆ.

ಕಾರಿನಲ್ಲೇ ತಾಳಿ ಕಟ್ಟಿಸಿಕೊಂಡಳು!
ಸಿನಿಮೀಯ ಶೈಲಿಯಲ್ಲಿ ನಡೆದ ಮದುವೆಯ ವಿಡಿಯೊ ವೈರಲ್‌ ಆಗಿದ್ದು, ಪ್ರಿಯಕರನ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಮಹಿಳೆಗೆ ತಾಳಿ ಕಟ್ಟಿ, ಕಾಲುಂಗರ ತೊಡಿಸಿದ್ದಾನೆ. ಪತ್ನಿಯ ಈ ದ್ರೋಹದಿಂದ ಕಂಗೆಟ್ಟ ಪತಿ ಪ್ರಕಾಶ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಸಂಧಾನ ನಡೆದಾಗಲೂ ಪೊಲೀಸರು ‘ಗಂಡ ಕಿರುಕುಳ ನೀಡುತ್ತಿದ್ದಾನೆಯೇ?’ ಎಂದು ಕೇಳಿದ ಪ್ರಶ್ನೆಗೆ ಈಕೆ ಉತ್ತರಿಸಿರಲಿಲ್ಲ. ಈಗ ಮೊಬೈಲ್ ಟ್ರ್ಯಾಕಿಂಗ್ ಮೂಲಕ ಮಹಿಳೆಯು ಪತ್ತೆಯಾಗಿದ್ದು, ಪತ್ನಿಯ ನಡೆಯಿಂದ ನೊಂದ ಪತಿ ತನಗಾದ ಅನ್ಯಾಯದ ಬಗ್ಗೆ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.


ಪತ್ನಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಬಗ್ಗೆ ಪತಿ ಪ್ರಕಾಶ್ ಮಾತನಾಡಿದ್ದು, 15 ಹಸು ಇತ್ತು, ನಿತ್ಯ 100 ಲೀಟರ್ ಹಾಲು ಹಾಕ್ತಿದ್ದೆ. ಟ್ರ್ಯಾಕ್ಟರ್, ಆಸ್ತಿ, ಮನೆ‌ ಎಲ್ಲವೂ ಇತ್ತು. ತಿಂಗಳಿಗೆ ಕನಿಷ್ಠ 80 ಸಾವಿರ ರೂಪಾಯಿ ಆದಾಯ ಇತ್ತು. ಎಲ್ಲಾ ವ್ಯವಹಾರ ಪತ್ನಿಗೆ ಕೊಟ್ಟಿದ್ದೆ. ನನ್ನೇ ಮದುವೆ ಆಗಬೇಕು ಎಂದು ಹಠಕ್ಕೆ ಬಿದ್ದು ಮದವೆ ಆಗಿದ್ದಳು. ಸ್ವಂತ ಸೋದರ ಮಾವನ ಮಗಳೆಂದು ನಾನೂ ಇಷ್ಟಪಟ್ಟು ಮದುವೆ ಆಗಿದ್ದೆ. ಎಂದೂ ಅನುಮಾನ ಬರದಂತೆ ಇದ್ದು ಹೀಗೆ ಮೋಸ ಮಾಡಿದ್ದಾಳೆ. ಆಸ್ಪತ್ರೆಗೆ ಹೋಗ್ತಿನಿ ಎಂದು ವಾಪಸ್ ಬರ್ಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಹೊರಹಾಕಿದ್ದಾರೆ.

ನನಗೆ ಡಿವೋರ್ಸ್ ಬೇಕು ಎಂದ ಮಹಿಳೆ
ನನ್ನನ್ನು ಯಾರೂ ಕಿಡ್ನ್ಯಾ ಪ್‌ ಮಾಡಿಲ್ಲ. ಪ್ರಕಾಶ್ ಜತೆ ಜೀವನ ಮಾಡಲು ನಂಗೆ ಇಷ್ಟ ಇಲ್ಲ. ಹಾಗಾಗಿ ನಾನೇ ‌ಸ್ವಇಚ್ಛೆಯಿಂದ ಹೊರಗೆ ಬಂದಿದ್ದೇನೆ. ಮಾಧ್ಯಮದ ಮುಂದೆ ಹೋಗಿ ನನ್ನ ಗಂಡ ಮಾನ ಮರ್ಯಾದೆ‌ ಕಳೆದಿದ್ದಾರೆ. ಅವರ ಜತೆ ಜೀವನ ಮಾಡಲು ಇಷ್ಟ ಇಲ್ಲ. ನಂಗೆ ಡಿವೋರ್ಸ್ ಬೇಕು ಅಷ್ಟೇ. ಹೀಗೆ ಬಲವಂತ ಮಾಡಿದರೆ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತಿನಿ ‌ಎಂದು ಎಚ್ಚರಿಕೆ ನೀಡಿದ್ದಾಳೆ.

Leave a Reply

Your email address will not be published. Required fields are marked *