BBMP
Loading ...

E khata

ಬೆಂಗಳೂರು ನಗರದಲ್ಲಿ ಆಸ್ತಿ ಖರೀದಿ, ಮಾರಾಟ, ಲೀಸಿಂಗ್, ಅಥವಾ ಬ್ಯಾಂಕ್ ಸಾಲ ಪಡೆಯುವ ಪ್ರಕ್ರಿಯೆ ಈಗ ಹೊಸ ಹಂತಕ್ಕೆ ಕಾಲಿಟ್ಟಿದೆ. ಬಿಬಿಎಂಪಿ ಪ್ರಕಟಿಸಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ‘ಇ-ಖಾತಾ’ ಇಲ್ಲದೆ ಯಾವುದೇ ಆಸ್ತಿ ವ್ಯವಹಾರವನ್ನು ಮುಂದೆ ನಡೆಸುವುದು ಅಸಾಧ್ಯ. ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನೊಂದಾಯಿತ ದಾಖಲೆಗಳಿಲ್ಲದ ಆಸ್ತಿಗಳನ್ನು ಈಗ ರಾಜ್ಯ ಸರ್ಕಾರ ಕಠಿಣವಾಗಿ ತಿರಸ್ಕರಿಸುತ್ತಿದೆ.

ಇ-ಖಾತಾ ಎಂದರೆ ಏನು?
‘ಇ-ಖಾತಾ’ ಎಂದರೆ ಆಸ್ತಿ ಕುರಿತಿರುವ ಎಲ್ಲಾ ಮಾಹಿತಿ ಒಳಗೊಂಡಿರುತ್ತದೆ. ಅಂದರೆ ಮಾಲಿಕನ ಹೆಸರು, ಸ್ಥಳ, ಮಾಪನ, ತೆರಿಗೆ ಪಾವತಿ ವಿವರಗಳು ಇತ್ಯಾದಿಯನ್ನು ಒಳಗೊಂಡಿರುತ್ತದೆ. ಡಿಜಿಟಲ್ ರೂಪದಲ್ಲಿ ಸರಕಾರದ ಅಧಿಕೃತ ಪೋರ್ಟಲ್‌ BBMPeAasthi.karnataka.gov.in ನಲ್ಲಿ ನೊಂದಾಯಿತ ದಾಖಲೆ. ಇದರಿಂದ ಆಸ್ತಿ ಪಾರದರ್ಶಕವಾಗುತ್ತದೆ, ನಕಲಿ ದಾಖಲೆಗಳು ಕಡಿಮೆಯಾಗುತ್ತವೆ ಮತ್ತು ಭವಿಷ್ಯದ ಲೆಕ್ಕಪತ್ರಗಳಲ್ಲಿ ಯಾವುದೇ ಗೊಂದಲವಿಲ್ಲದೆ ನಿರ್ವಹಿಸಬಹುದು.

ಈ ವ್ಯವಸ್ಥೆ ಏಕೆ ಅನಿವಾರ್ಯ?
ಹಳೆಯ ಖಾತಾ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಡುಪ್ಲಿಕೇಟ್ ದಾಖಲೆಗಳು, ಹಾಗೂ ನಕಲಿ ಹಕ್ಕುದಾರರ ಸಮಸ್ಯೆ ಹೆಚ್ಚಾಗಿದ್ದವು. ಇದನ್ನು ತಡೆಯಲು ಬಿಬಿಎಂಪಿ ಇದೀಗ ಇ-ಖಾತಾ ಪದ್ದತಿಯನ್ನೇ ಕಡ್ಡಾಯವಾಗಿ ಅನುಸರಿಸುತ್ತಿದೆ. ಇದರಿಂದ ಸರ್ಕಾರದ ಆದಾಯವನ್ನೂ ಹೆಚ್ಚಿಸಬಹುದು, ಮತ್ತು ಆಸ್ತಿ ವರ್ಗಾವಣೆ ವೇಳೆ ಯಾವುದೇ ಶಂಕೆ ಇರುವುದಿಲ್ಲ.

ಈ ವ್ಯವಸ್ಥೆ ಏಕೆ ಅನಿವಾರ್ಯ?
ಹಳೆಯ ಖಾತಾ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಡುಪ್ಲಿಕೇಟ್ ದಾಖಲೆಗಳು, ಹಾಗೂ ನಕಲಿ ಹಕ್ಕುದಾರರ ಸಮಸ್ಯೆ ಹೆಚ್ಚಾಗಿದ್ದವು. ಇದನ್ನು ತಡೆಯಲು ಬಿಬಿಎಂಪಿ ಇದೀಗ ಇ-ಖಾತಾ ಪದ್ದತಿಯನ್ನೇ ಕಡ್ಡಾಯವಾಗಿ ಅನುಸರಿಸುತ್ತಿದೆ. ಇದರಿಂದ ಸರ್ಕಾರದ ಆದಾಯವನ್ನೂ ಹೆಚ್ಚಿಸಬಹುದು, ಮತ್ತು ಆಸ್ತಿ ವರ್ಗಾವಣೆ ವೇಳೆ ಯಾವುದೇ ಶಂಕೆ ಇರುವುದಿಲ್ಲ.

3,900 ಕ್ಕೂ ಹೆಚ್ಚು ಆಸ್ತಿ ಮಾಲೀಕರು ವಿಫಲ:
ಖಾತಾ ಇಲ್ಲದಿದ್ದರಿಂದ ದಾಖಲೆ ಗೊಂದಲಗಳು ಉಂಟಾಗಿ 3,900 ಕ್ಕೂ ಹೆಚ್ಚು ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ವಿಫಲರಾಗಿದ್ದಾರೆ. ಅಲ್ಲದೆ, ಇನ್ನೂ 19,777 ಅರ್ಜಿಗಳನ್ನು ಬಿಬಿಎಂಪಿ ಪರಿಶೀಲನೆ ಹಂತದಲ್ಲಿ ಇರಿಸಿಕೊಂಡಿದೆ. ಇದರರ್ಥ, ಇ-ಖಾತಾ ಹೊಂದಿರುವುದು ಆಸ್ತಿ ಮಾಲೀಕರಿಗೆ ಕೇವಲ ಆಯ್ಕೆಯಲ್ಲ, ಭವಿಷ್ಯದ ಕಾನೂನುಬದ್ಧ ಆಸ್ತಿ ವ್ಯವಹಾರದ ಪ್ರಮುಖ ಅಂಶವಾಗಿದೆ.

ಜನಸೇವಕ ಸೇವೆಯಿಂದ ಮನೆ ಬಾಗಿಲಿಗೆ ಖಾತಾ ಸಹಾಯ:
ಬಿಬಿಎಂಪಿಯ ಜನಸೇವಕ ಯೋಜನೆಯ ಮೂಲಕ ಅಧಿಕಾರಿಗಳು ನೇರವಾಗಿ ಮನೆಗೆ ಬಂದು ದಾಖಲೆ ಪರಿಶೀಲನೆ, ಫಾರ್ಮ್ ಪೂರೈಸುವ ಸಹಾಯ ಹಾಗೂ ಡಿಜಿಟಲ್ ಅಪ್ಲಿಕೇಶನ್ ಪ್ರಕ್ರಿಯೆ ನಡೆಸಿಕೊಡುತ್ತಾರೆ. ಇದಕ್ಕೆ ₹115 ಸೇವಾಶುಲ್ಕ ವಿಧಿಸಲಾಗಿದೆ.

ಹೊಸ ವಿಸ್ತರಣೆ ಯೋಜನೆಗಳಿಗೆ ಇ-ಖಾತಾ ಕಡ್ಡಾಯ:
ನಗರ ವ್ಯಾಪ್ತಿ ವಿಸ್ತರಿಸಲು ನಡೆಯುತ್ತಿರುವ ಹೊಸ ಬಡಾವಣೆಗಳ ಅಭಿವೃದ್ಧಿಯಲ್ಲಿ, ಸ್ಥಳೀಯ ಯೋಜನೆ ಅನುಮೋದನೆ, ಸರ್ವೇ ನಂಬರ ಸೇರ್ಪಡೆ ಮೊದಲಾದ ಎಲ್ಲ ಹಂತಗಳಿಗೂ ಇ-ಖಾತಾ ಅನಿವಾರ್ಯವಾಗಿದೆ. ಇದರಿಂದ ಅನಧಿಕೃತ ಕಟ್ಟಡ ನಿರ್ಮಾಣ ಹಾಗೂ ಖೋಟಾ ದಾಖಲೆಗಳಿಂದ ಜನರಿಗೆ ಆಗಬಹುದಾದ ಹಾನಿಯನ್ನು ತಡೆಯಬಹುದು.

ಬಿಬಿಎಂಪಿಯ ಎಚ್ಚರಿಕೆ:
ಮುನ್ಸೂಚನೆ ನೀಡಿದಂತೆ ಇ-ಖಾತಾ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಸ್ತಿ ಪಾವತಿ, ಲೀಜ್, ಮಾರಾಟ ಇತ್ಯಾದಿ ಯಾವುದೇ ಕಾನೂನು ಪ್ರಕ್ರಿಯೆ ಸಾಧ್ಯವಿಲ್ಲ. ಇದರ ಜೊತೆಗೆ ಆಸ್ತಿಯ ಬುದ್ದಿವಾದ ಹಕ್ಕನ್ನು ಕಾನೂನಾತ್ಮಕವಾಗಿ ಸಾಬೀತು ಪಡಿಸಲು ಸಹ ಕಷ್ಟವಾಗುತ್ತದೆ.

ಈಗಾಗಲೇ ಸಾವಿರಾರು ಮಂದಿಗೆ ಈ ಡಿಜಿಟಲ್ ವ್ಯವಸ್ಥೆಯಿಂದ ಸೌಲಭ್ಯ ದೊರೆತಿದೆ. ಆದರೆ ಹಲವರು ಇನ್ನೂ ಅಪೂರ್ಣ ದಾಖಲೆಗಳ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಪ್ರತಿಯೊಬ್ಬ ಆಸ್ತಿ ಮಾಲಿಕನು ತ್ವರಿತವಾಗಿ ತಮ್ಮ ಆಸ್ತಿಗೆ ಸಂಬಂಧಿಸಿದ ಇ-ಖಾತಾ ಪಡೆಯುವುದು ಅವಶ್ಯಕ. ಇದು ಭವಿಷ್ಯದ ಆಸ್ತಿ ವಹಿವಾಟಿಗೆ ಕೇವಲ ಪೂರಕವಲ್ಲ, ಕಡ್ಡಾಯವೇ ಆಗಿದೆ.

ಭಕ್ತರಿಗೆ ಗುಡ್ ನ್ಯೂಸ್: ತಿರುಪತಿ, ಕುಕ್ಕೆ ದೇವಸ್ಥಾನ ಸೇರಿ ಸರ್ಕಾರದ 3 ಸಾವಿರ ರೂಮ್ ಆನ್​​ ಲೈನ್​ ಬುಕ್ಕಿಂಗ್ ವ್ಯವಸ್ಥೆ

Leave a Reply

Your email address will not be published. Required fields are marked *