BBMP
Loading ...

Food

ಪ್ರಸ್ತುತ ಜನರ ಜೀವನಶೈಲಿ ಬಹಳ ಹೆದಗೆಟ್ಟಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಜೀವನ ಮಾಡುತ್ತಿರುವ ಅದೆಷ್ಟೋ ಜನರ ಬದುಕು ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗು, ಅಲ್ಲಿಂದ ಬಂದ ತಕ್ಷಣ ಮಲಗು ಎನ್ನುವಂತಾಗಿದೆ. ಇಷ್ಟಕ್ಕೆ ಮಾತ್ರ ಸೀಮತವಾಗಿಬಿಟ್ಟಿದೆ. ಕೆಲಸದ ಒತ್ತಡ, ಜೀವನ ಕಟ್ಟಿಕೊಳ್ಳುವ ಭರದಲ್ಲಿ ಉತ್ತಮ ಜೀವನಶೈಲಿಯನ್ನೇ ಮರೆಯುವ ಜನರು, ಖಾಯಿಲೆಗಳನ್ನು ಕೈಬೀಸಿ ಆಹ್ವಾನಿಸುತ್ತಿದ್ದಾರೆ.

ಉತ್ತಮ ಜೀವನಶೈಲಿಗೆ ಒಂದೊಳ್ಳೆ ಭೋಜನ ಕೂಡ ಮುಖ್ಯ. ಇವು ಮಾನವನ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಅನೇಕ ಜನರು ತಡವಾಗಿ ಊಟ ಮಾಡುವುದು, ಇಷ್ಟಬಂದ ಸಮಯದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಮಾಡುತ್ತಿದ್ದಾರೆ. ಈ ರೀತಿ ತಡವಾಗಿ ತಿನ್ನುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಲಿದೆ.

ಈ ಬಗ್ಗೆ ಆರೋಗ್ಯ ತಜ್ಞರು ಹೇಳುವುದೇನೆಂದರೆ, ರಾತ್ರಿ 8 ಗಂಟೆಯ ಮೊದಲು ಊಟವನ್ನು ಮುಗಿಸಿಕೊಳ್ಳುವುದು ದೇಹ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಸಣ್ಣ ಬದಲಾವಣೆಯು ದೀರ್ಘಾವಧಿಯಲ್ಲಿ ಪ್ರಬಲವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ರಾತ್ರಿ 8 ಗಂಟೆಯ ಮೊದಲು ಭೋಜನವನ್ನು ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳು ಏನೇನು ಎಂಬುದರ ವಿವರ ಹೀಗಿದೆ ಗಮನಿಸಿ.

ಜೀರ್ಣಕ್ರಿಯೆ ಸುಧಾರಣೆ
ರಾತ್ರಿ ವೇಳೆ ಬೇಗ ಭೋಜನವನ್ನು ಮುಗಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಪೂರ್ಣ ವಿಶ್ರಾಂತಿ ಸಿಗುತ್ತದೆ. ಆಮ್ಲೀಯತೆ, ಗ್ಯಾಸ್​ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಆಹಾರ ಸರಿಯಾಗಿ ಜೀರ್ಣವಾಗಲು ಹೆಚ್ಚು ಸಮಯ ಸಿಗುತ್ತದೆ ಮತ್ತು ದೇಹವು ಸರಿಯಾದ ಶಕ್ತಿಯನ್ನು ಪಡೆಯುತ್ತದೆ. ಇದು ಸುಖ ನಿದ್ರೆಗೂ ಸಹಕಾರಿ.

ತೂಕ ನಿಯಂತ್ರಣ/ಕಡಿಮೆ
ದಣಿದ ದೇಹಕ್ಕೆ ತಡವಾಗಿ ಆಹಾರ ಕೊಟ್ಟರೆ, ಅದು ಕೊಬ್ಬಾಗಿ ಬದಲಾಗುವ ಅಪಾಯವನ್ನು ಎದುರಿಸುತ್ತದೆ. ರಾತ್ರಿ ವೇಳೆ ಆದಷ್ಟು ತಿನ್ನದಿರುವುದು, ಉಪವಾಸ ಮಲಗುವುದನ್ನು ತಪ್ಪಿಸಿ. 8 ಗಂಟೆಯೊಳಗೆ ಊಟ ಮಾಡುವುದರಿಂದ ಕೆಟ್ಟ ಕೊಬ್ಬನ್ನು ಕಡಿಮೆ ಆಗುವುದರ ಜತೆಗೆ ತೂಕ ನಿಯಂತ್ರಣದಲ್ಲಿರುತ್ತದೆ. ಚಯಾಪಚಯವು ವೇಗವಾಗಿ ಕೆಲಸ ಮಾಡುತ್ತದೆ.

ಮಧುಮೇಹ (ಸಕ್ಕರೆ) ನಿಯಂತ್ರಣ
ರಾತ್ರಿ ತಡವಾಗಿ ಊಟ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ. ಆದ್ದರಿಂದ, ಮೊದಲೇ ಊಟ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ. ಇನ್ಸುಲಿನ್ ಸಂವೇದನೆ ಸುಧಾರಿಸುತ್ತದೆ. ಟೈಪ್ 2 ಮಧುಮೇಹ ಬರುವ ಅಪಾಯವು ಕಡಿಮೆಯಾಗುತ್ತದೆ.

ನಿದ್ರೆಯ ಗುಣಮಟ್ಟ ಸುಧಾರಣೆ
ಊಟ ಮಾಡಿದ ತಕ್ಷಣ ನಿದ್ರಿಸುವುದು ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಸ್ವಲ್ಪ ಬೇಗ ಊಟ ಮಾಡುವುದರಿಂದ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಸರಿಯಾಗಿ, ಖಾಲಿಯಾಗಿರುತ್ತದೆ. ಇದು ನಿದ್ರೆಗೆ ಅಡ್ಡಿಪಡಿಸುವುದಿಲ್ಲ. ಮಿದುಳು ವಿಶ್ರಾಂತಿ ಪಡೆಯುತ್ತದೆ. ಬೆಳಗ್ಗೆ ಉತ್ಸಾಹದಿಂದ ಎಚ್ಚರಗೊಳ್ಳುವ ಅವಕಾಶವಿದೆ.

ಹೃದಯದ ಆರೋಗ್ಯವನ್ನು ಸುಧಾರಣೆ
ರಾತ್ರಿ ತಡವಾಗಿ ಊಟ ಮಾಡುವುದರಿಂದ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಆದ್ದರಿಂದ, ಬೇಗ ಊಟ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೃದ್ರೋಗದ ಅಪಾಯ ಕೂಡ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟಗಳು ಸಮತೋಲನವಾಗಿರುತ್ತದೆ,(ಏಜೆನ್ಸೀಸ್).

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *