BBMP
Loading ...

Court


Greater Bengaluru News9 : ಲಂಚ ಪಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಸರ್ಕಾರಿ ನೌಕರರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ತಲಾ 20 ಸಾವಿರ ರೂ.ದಂಡ ವಿಧಿಸಿದೆ.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಪ್ರಥಮ ದರ್ಜೆ ಸಹಾಯಕರಾಗಿದ್ದ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಎಫ್‍ಡಿಎ ಎಂ.ಎಂ. ಮೌಲಾಲಿ ಬೇಗ್ ಅಹ್ಮದ್ ಬೇಗ್ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ಶೇಖರ್ ಎಂಬುವವರು ಶಿಕ್ಷೆಗೆ ಒಳಗಾದ ಅಪರಾಧಿಗಳು.


ಮೌಲಾಲಿ ಬೇಗ್ ಅವರು ಕೇಂದ್ರ ಸರ್ಕಾರಿ ಬೇಡ ಪಾಲಕ ಬಿಮಾ ಯೋಜನೆಯಡಿ ವಿಮೆ ಮಾಡಿಸಲು ಕುರುಬ ಜನಾಂಗದವರು 2008-09ನೇ ಸಾಲಿನಲ್ಲಿ ಮತ್ತು 2009ರಲ್ಲಿ ಸಂಗ್ರಹಿಸಿ ನೀಡಿದ್ದ ಹಣವನ್ನು ಸ್ವಂತಕ್ಕೆ ಬಳಸಿ-ಕೊಂಡಿದ್ದರು. ಈ ಕುರಿತು ಚಿತ್ತಾಪುರ ತಾಲ್ಲೂಕಿನ ಬೆಣ್ಣೂರÀ ಬೀರಲಿಂಗೇಶ್ವರ ದೇವಸ್ಥಾನ ಸಮಿತಿ, ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಕುರುಬ ಸಂಘದ ಅಧ್ಯಕ್ಷ ಬೀರಪ್ಪಾ ದೊಡ್ಡಮನಿ 2014ರಲ್ಲಿ ದೂರು ನೀಡಿದ್ದರು. ಈ ಕುರಿತು ಇನ್‍ಸ್ಪೆಕ್ಟರ್ ತಮ್ಮರಾಯ ಪಾಟೀಲ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ತನಿಖೆ ನಡೆಸಿದ ಇನ್‍ಸ್ಪೆಕ್ಟರ್ಟಿ .ಆರ್.ರಾಘವೇಂದ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಎಜಿಎಂ ಶೇಖರ ಅವರು ಕಪನೂರ ಎರಡನೇ ಹಂತದಲ್ಲಿರುವ ಎಂ/ಎಸ್ ಎಕ್ಸಲೆಂಟ್ ಹಾಲೋ ಬ್ಲಾಕ್ ಅಂಡ್ ರೈಲ್ವೇಸ್ ಟ್ರ್ಯಾಕ್ ಇಂಟರ್‍ಲಾಕ್ ಪ್ಲಾಂಟ್ಸ್ ಘಟಕದ ಹೆಸರು ಮತ್ತು ಉತ್ಪಾದನೆಯ ಹೆಸರನ್ನು ಎಂ/ಎಸ್ ಹ್ಯಾನ್ಸ್ ಕ್ಯಾಶಿವ್‍ನಟ್ ಪೆÇ್ರಸೆಸಿಂಗ್ ಪ್ಲಾಂಟ್ ಎಂದು ಬದಲಾವಣೆ ಮಾಡಲು 40 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪಾಲುದಾರಿಕೆ ಘಟಕದ ವಿಜಯಕುಮಾರ ಹಣಮಂತರಾಯ ಕೆಂಗಲ 2017ರಲ್ಲಿ ಎಸಿಬಿ ( ಈಗ ಲೋಕಾಯುಕ್ತ ) ಠಾಣೆಯಲ್ಲಿ ದೂರು ನೀಡಿದ್ದರು. ಶೇಖರ 10 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು.

ಡಿಎಸ್‍ಪಿ ಸಂತೋಷ ಬನಹಟ್ಟಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ತನಿಖೆ ನಡೆಸಿದ ಇನ್‍ಸ್ಪೆಕ್ಟರ್ ಕೃಷ್ಣಪ್ಪ ಕಲ್ಲದೇವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣಗಳ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಚಾಂದಕವಠೆ ಅವರು ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *