BBMP
Loading ...

Traffic Police

Greater Bengaluru News9 : ನಗರದ ಆರ್‌ಟಿ ನಗರ ಫ್ಲೈಓವರ್‌ ಬಳಿ ಕ್ಯಾಬ್‌ ಡ್ರೈವರ್‌ ಮೇಲೆ ಟ್ರಾಫಿಕ್‌ ಪೊಲೀಸ್‌ ಹಲ್ಲೆ ನಡೆಸಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಶೆಲ್‌ ಪೆಟ್ರೋಲ್‌ ಬಂಕ್‌ ಪಕ್ಕದಲ್ಲಿ ನಡೆದ ಈ ಘಟನೆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಡಿಯೋದಲ್ಲಿ ಟ್ರಾಫಿಕ್‌ ಪೊಲೀಸ್‌ ಅಧಿಕಾರಿಯೊಬ್ಬರು ಚಾಲಕನಿಗೆ ಸಾರ್ವಜನಿಕರ ಮುಂದೆ ಕಪಾಳಮೋಕ್ಷ ಮಾಡುತ್ತಿರುವುದು ದೃಶ್ಯವಾಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕ್ಯಾಬ್‌ ಚಾಲಕ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ ಪ್ರಶ್ನೆ ಮಾಡಿದ್ದು, ವಾದದ ನಡುವೆ ಘಟನೆ ನಡೆದಿರುವುದು ತಿಳಿದುಬಂದಿದೆ.

ಈ ದೃಶ್ಯ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವೈರಲ್‌ ಆಗುತ್ತಿದ್ದಂತೆ ಸಾವಿರಾರು ಜನರು ಟ್ರಾಫಿಕ್‌ ಪೊಲೀಸ್‌ನ ವರ್ತನೆ ಖಂಡಿಸಿದ್ದಾರೆ. “ಸಾಮಾನ್ಯ ನಾಗರಿಕರ ಮೇಲೆ ಹೀಗೆ ದೌರ್ಜನ್ಯ ಮಾಡುವುದು ಅಮಾನವೀಯ,” ಎಂದು ಹಲವರು ಟೀಕಿಸಿದ್ದಾರೆ. ಕೆಲವರು, “ಟ್ರಾಫಿಕ್‌ ನಿಯಂತ್ರಿಸುವ ಬದಲು ಅಧಿಕಾರದ ದರ್ಪ ತೋರಿಸುತ್ತಿದ್ದಾರೆ,” ಎಂದು ಕಮೆಂಟ್‌ ಮಾಡಿದ್ದಾರೆ.

ಇದೀಗ ನೆಟ್ಟಿಗರು ಈ ಘಟನೆಯಲ್ಲಿ ಭಾಗಿಯಾದ ಅಧಿಕಾರಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ.

Leave a Reply

Your email address will not be published. Required fields are marked *