BBMP
Loading ...

ಬೆಂಗಳೂರು: ಕೇಕ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ವಿವಿಧ ಬಗೆಯ ಕೇಕ್‌ಗಳನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುತ್ತಾರೆ. ಬರ್ತ್​​ಡೇ ಪಾರ್ಟಿಗಳು ಬಂದರಂತೂ ಕೇಕ್ ಅನಿವಾರ್ಯ. ಆದರೆ ಕೇಕ್‌ ರುಚಿ ಇನ್ಮುಂದೆ ಬದಲಾಗಬಹುದು ಆಶ್ಚರ್ಯವಾಗುತ್ತಿದೆಯಾ ಏನಾಪ್ಪಾ ಅಂತಾ!

ಹೌದು.. ಗೋಬಿ, ಕಬಾಬ್, ಕಾಟನ್ ಕ್ಯಾಂಡಿ, ಪಾನಿಪುರಿ ತಿನಿಸುಗಳ ಮೇಲೆ ಆಹಾರ ಇಲಾಖೆ ಒಂದಷ್ಟು ನಿರ್ಬಂಧಗಳನ್ನು ವಿಧಿಸಿತ್ತು ಆದರೆ ಈಗ ಕೇಕ್‌ ಮೇಲೂ ನಿರ್ಬಂಧ ಹೇರುವ ಪರಿಸ್ಥಿತಿ ಒದಗಿ ಬಂದಿದೆ.ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆ ಜನರ ಹಿತದೃಷ್ಟಿ ಕಾಪಾಡುವ ಸಲುವಾಗಿ ಈ ಬೇಕರಿ ತಿನಿಸುಗಳ ಮೇಲೂ ಕಠಿಣ ಕ್ರಮ ತೆಗದುಕೊಳ್ಳಲಿದ್ದಾರೆ.

ಸುಮಾರು 264 ಕಡೆಗಳಲ್ಲಿ ಕೇಕ್‌ಗಳ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.‌ ಇದರ ವರದಿಗೆ ಇಲಾಖೆ ಕಾಯುತ್ತಿದೆ.‌ ಒಂದು ವೇಳೆ, ವರದಿ ಪಾಸಿಟಿವ್ ಬಂದಿದ್ದೇ ಆದಲ್ಲಿ ಕೆಲವೊಂದು ಪದಾರ್ಥಗಳ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೇಕ್‌ ತನ್ನ ಮೂಲ ಸ್ವಾದವನ್ನು ಕಳೆದುಕೊಳ್ಳಲಿದೆ.

ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬೆನ್ನಲ್ಲೇ ನಟ ದರ್ಶನ್ ವಿರುದ್ಧ ಮತ್ತೊಂದು ಎಫ್​ಐಆರ್​ ದಾಖಲು!

ವಾರೆಂಟ್ ಜಾರಿಯಾದ್ರೂ ಕೋರ್ಟ್​ಗೆ ಹಾಜರಾಗದ ವಕೀಲ ಜಗದೀಶ್​ ಅರೆಸ್ಟ್​!

Leave a Reply

Your email address will not be published. Required fields are marked *