BBMP
Loading ...

Police

Greater Bengaluru News9 : ಕರ್ನಾಟಕದ 120 ಇನ್ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಇನ್ಸ್ಪೆಕ್ಟರ್‌ಗಳ ವರ್ಗಾವಣೆಯ ವಿಷಯದಲ್ಲಿ ಕಳೆದ ಹಲವಾರು ತಿಂಗಳಿಂದ “ಮೀನಾಮೇಷಾ” ನಡೆಯುತ್ತಿತ್ತು. ಎರಡು ವರ್ಷಗಳ ಸೇವಾ ಅವಧಿ ಪೂರೈಸಿ ಮೂರು-ನಾಲ್ಕು ತಿಂಗಳು ಕಳೆದರೂ ವರ್ಗಾವಣೆ ಆಗದೆ ಕಾಯುತ್ತಿದ್ದ ಅನೇಕ ಇನ್ಸ್ಪೆಕ್ಟರ್‌ಗಳಿಗೆ ಇದೀಗ ವರ್ಗಾವಣೆಯ ಭಾಗ್ಯ ಒಲಿದಿದೆ.

ನಗರ ಮತ್ತು ಗ್ರಾಮಾಂತರ ಎರಡೂ ವಿಭಾಗಗಳಲ್ಲಿ ಕೆಲವು ಇನ್ಸ್ಪೆಕ್ಟರ್‌ಗಳು “ಜಾತಕ ಪಕ್ಷಿಯಂತೆ” ತಮ್ಮ ವರ್ಗಾವಣೆಯನ್ನು ಕಾಯುತ್ತಿದ್ದರು. ಈ ಬಾರಿ ಅವರಿಗೂ ವರ್ಗಾವಣೆ ಆದೇಶ ಬಿದ್ದಿದ್ದು, ಇಲಾಖೆ ಒಳಗೆ ಚುರುಕು ಚಟುವಟಿಕೆ ಆರಂಭವಾಗಿದೆ.

ವರ್ಗಾವಣೆಯ ಪಟ್ಟಿಯು ರಾಜಕೀಯ ಪ್ರಭಾವ ಮತ್ತು ಹೈಕಮಾಂಡ್ ಹಸ್ತಕ್ಷೇಪದ ಹಾದಿಯಲ್ಲಿ ನಡೆದಿದೆಯೇ ಎಂಬ ಚರ್ಚೆಯೂ ಇಲಾಖೆ ಒಳಗೆ ಸದ್ದು ಮಾಡುತ್ತಿದೆ.

ಇದೀಗ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಹೊಸ ಹುದ್ದೆಗಳಿಗೆ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಕೂಡ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *