BBMP
Loading ...

Tender

ಬೆಂಗಳೂರು: ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ವತಿಯಿಂದ 2022 ರಿಂದ 2023ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿ ಕರೆಯಲ್ಪಟ್ಟ ಬೆಳಗಾವಿ ವಿಭಾಗದಲ್ಲಿ ಬಡವರಿಗಾಗಿ ಮೀಸಲಿಟ್ಟಿರುವ ವಸತಿ ಗೃಹಗಳ ನಿರ್ಮಾಣ ಟೆಂಡರ್ ಕಾಮಗಾರಿಗಳಿಗಾಗಿ ಹೊರ ರಾಜ್ಯದ ಏಜೆನ್ಸಿ ಹಾಗೂ ಬ್ಲ್ಯಾಕ್ ಲಿಸ್ಟ್ ನಲ್ಲಿರುವ ಕಂಪನಿಗೆ ಟೆಂಡರ್‌ ಪಡೆದು ಕೋಟ್ಯಾಂತರ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ.

ಪ್ರಭಾವಿ ರಾಜಕರಣಿಗಳು ಹಾಗೂ ಇಲಾಖೆಯ ಅಧಿಕಾರಿಗಳ ಕಮೀಷನ್ ದಂದೆ ಸರ್ಕಾರ ಮತ್ತು ಸಾರ್ವಜನಿಕರ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಬಡವರಿಗಾಗಿ ಮೀಸಲಿಟ್ಟಿರುವ ಜಿ+3 ವಸತಿ ಗೃಹಗಳ ನಿರ್ಮಾಣದ ಟೆಂಡರನ್ನ ನ್ಯಾಷನಲ್ ಪ್ರಾಜೆಕ್ಸ್ಟ್ ಕನ್‌ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್, ಚೇತಕ್ ವೆಂಚರ್ಸ್ ಪ್ರೈವೈಟ್ ಲಿಮಿಟೆಡ್, ಹಾಗೂ ಫೈವ್ ಸೀಸ್ ಬಿಲ್ಡರ್ಸ್ ನಿರ್ಮಾಣ ಮಾಡುತ್ತಿವೆ.

ಅಂದಾಜು ಸುಮಾರು 100.00 ಕೋಟಿ ಟೆಂಡರ್ ಕಾಮಗಾರಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಹೆಚ್ಚುವರಿ ಮೊತ್ತ ಅಂದಾಜು ಸುಮಾರು ರೂ. 98.60 ಕೋಟಿ ಗಳಿಗೆ ಟೆಂಡರ್ ಪಡೆದು ಇದೇ ಕಾಮಗಾರಿಯನ್ನು ಪುನಃ ಒಂದೇ ಸೈಟ್‌ಗೆ ಎರಡೆರಡು ಪ್ರತ್ಯೇಕ ಕಾಮಗಾರಿ ಎಂದು ತೋರಿಸಲಾಗಿದೆ. ಅಲ್ಲದೆ ಚೇತಕ್ ವೆಂಚರ್ಸ್ ಪ್ರೈವೈಟ್ ಲಿಮಿಟೆಡ್, ಹಾಗೂ ಫೈವ್ ಸೀಸ್ ಬಿಲ್ಡರ್ಸ್ ಈಗಾಗಲೇ ಅನರ್ಹವಾಗಿರುವ ಬ್ಲ್ಯಾಕ್ ಲಿಸ್ಟ್ ನಲ್ಲಿರುವ ಗುತ್ತಿಗೆದಾರ ಕಂಪನಿಗಳಾಗಿವೆ. ಅಕ್ರಮದ ಕುರಿತು ಸಮಗ್ರ ತನಿಖೆಯಾಗಬೇಕು ಹಾಗೂ ಅಂಥಹ ಕಂಪನಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ.

ಇ ಖಾತಾ ಇಲ್ಲದ ಹೊಸ ಆಸ್ತಿಗಳಿಗೆ, ಅಪಾರ್ಟ್‌ಮೆಂಟ್‌ದಾರರಿಗೆ ಬಿಬಿಎಂಪಿ ಗುಡ್‌ನ್ಯೂಸ್‌

Leave a Reply

Your email address will not be published. Required fields are marked *