BBMP
Loading ...

Corrupt Officer

ಇಂದು ಯಾವುದೇ ಸರ್ಕಾರಿ ಕೆಲಸ ಆಗಬೇಕೆಂದರೂ ಅಲ್ಲಿ ಲಂಚವೇ ಪ್ರಧಾನ. ಲಂಚ ಕೊಡದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ. ಸರ್ಕಾರಿ ಸೇವೆ ಜನ ಸಾಮಾನ್ಯನ ಹಕ್ಕು ಆಗಿದ್ದರೂ ಅದನ್ನು ಪಡೆಯಲು ತಾನು ಬೆವರು ಸುರಿಸಿ ದುಡಿದ ಹಣವನ್ನು ಲಂಚವಾಗಿ ಕೊಡಬೇಕಿದೆ. ಸರ್ಕಾರಿ ನೌಕರಿಯಲ್ಲಿರುವ ಕೆಲ ಹೈಟೆಕ್​ ಭಿಕ್ಷುಕರ ಜನ ಸಾಮಾನ್ಯರನ್ನು ಸುಲಿಗೆ ಮಾಡುವುದನ್ನೇ ತಮ್ಮ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ.

ಲಂಚಕ್ಕೆ ಕಡಿವಾಣ ಹಾಕಲು ಎಷ್ಟೇ ಕಾನೂನು ತಂದರೂ ಅದು ಪರಿಣಾಮಕಾರಿಯಾಗುತ್ತಿಲ್ಲ. ಲಂಚ ಒಂದು ರೀತಿಯಲ್ಲಿ ಸಾಂಕ್ರಮಿಕ ರೋಗದಂತೆ ಎಲ್ಲಡೆ ಪಸರಿಸಿದೆ. ಆದರೆ, ಲಂಚ ಕೇಳವವರನ್ನು ಪ್ರಶ್ನಿಸಿದರೆ ಅವರ ಎದೆಯಲ್ಲಿ ನಡುಕ ಹುಟ್ಟುವುದಂತೂ ಗ್ಯಾರಂಟಿ. ಗುಜರಾತಿನಲ್ಲಿ ಜನರು ಸರ್ಕಾರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ರೀತಿ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನವಭಾರತ್​ ಟೈಮ್ಸ್​ ವರದಿಯ ಪ್ರಕಾರ, ಕುತ್ತಿಗೆಯಲ್ಲಿ ಫಲಕಗಳನ್ನು ಧರಿಸಿದ ಕೆಲ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗೆ ನುಗ್ಗಿ, ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡರು. ನಿಮಗೆ ನಾಚಿಕೆಯಾಗಬೇಕು, ಜನರ ಹಣವನ್ನು ತಿಂದು ಕೊಬ್ಬಿದ ಎಮ್ಮೆಗಳಂತೆ ಆಗಿದ್ದೀರಾ? ಎಂದು ಅಧಿಕಾರಿ ವಿರುದ್ಧ ಪ್ರತಿಭಟನಾಕಾರರು ಕೂಗಾಡಿದರು.

ಇದೇ ಸಂದರ್ಭದಲ್ಲಿ ಹಣದ ಕಂತೆಗಳನ್ನು ತೆಗೆದು ಅಧಿಕಾರಿಯ ಮುಖದ ಮೇಲೆ ನೋಟುಗಳನ್ನು ಎಸೆದು ಕೋಪದಿಂದ ಕೂಗಾಡಿದರು. ಇಗೋ, ಇದನ್ನು ತೆಗೆದುಕೊಳ್ಳಿ, ನಿಮಗೆ ಬೇಕಾದಷ್ಟು ತಿನ್ನಿರಿ ಎಂದು ತೀವ್ರವಾಗಿ ಪ್ರತಿಭಟಿಸಿದರು. ತಮ್ಮ ಪ್ರದೇಶದಲ್ಲಿರುವ ಭೀಕರ ಪರಿಸ್ಥಿತಿಗಳ ಬಗ್ಗೆ ಆಕ್ರೋಶ ಹೊರಹಾಕಿದರು. ಸರ್, ನಮ್ಮ ಕಾಲನಿಗೆ ಕೊಳಕು ನೀರು ಬರುತ್ತಿದೆ ಎಂದು ಒಬ್ಬರು ಕೂಗಿದರು. ನಿಮಗೆ ಎಷ್ಟು ಹಣ ಬೇಕು? ಇಲ್ಲಿ ತೆಗೆದುಕೊಳ್ಳಿ ಎಂದು ಮತ್ತೊಬ್ಬರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಈ ಎಲ್ಲ ದೃಶ್ಯವು ವೈರಲ್​ ವಿಡಿಯೋದಲ್ಲಿ ಸೆರೆಯಾಗಿದೆ.

ಅಚ್ಚರಿಯ ವಿಷಯವೆಂದರೆ ಇಷ್ಟೆಲ್ಲ ಆದರೂ ಆ ಅಧಿಕಾರಿ ಮಾತ್ರ ಏನೂ ಆಗಿಲ್ಲ ಎಂಬಂತೆ ಕೈಕಟ್ಟಿ ಕುಳಿತಿದ್ದರು. ಅವರ ನಿರ್ಲಕ್ಷ್ಯ ಮನೋಭಾವ ನೋಡಿ ಪ್ರತಿಭಟನಾಕಾರರ ಕೋಪ ಇನ್ನಷ್ಟು ಹೆಚ್ಚಾಯಿತು.

ನೀವು ಅಕ್ರಮವಾಗಿ ಎಷ್ಟೇ ಸಂಪಾದಿಸಿದರೂ ನಿಮ್ಮ ಹೊಟ್ಟೆ ತುಂಬುವುದಿಲ್ಲ, ಇಗೋ ಈ ದುಡ್ಡು ತೆಗೆದುಕೊಂಡು ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಿ, ಜನರು ನಿಮಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದರು. ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಕಲಮ್​ ಕಿಚೋತ್​ ಹೆಸರಿನ ಎಕ್ಸ್​ ಪೇಜ್​ನಲ್ಲಿ ಪೋಸ್ಟ್ ಮಾಡಲಾಗಿದೆ. ಇದುವರೆಗೂ ವಿಡಿಯೋವನ್ನು 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ಈ ವಿಡಿಯೋವನ್ನು ಗುಜರಾತಿನಲ್ಲಿ ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದು ನಿಖರವಾಗಿ ತಿಳಿದಿಲ್ಲವಾದರೂ, ಆನ್‌ಲೈನ್‌ನಲ್ಲಿ ಇದರ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಅನೇಕ ನೆಟ್ಟಿಗರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ಘಟನೆಯು ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಹೆಚ್ಚುತ್ತಿರುವ ಭ್ರಷ್ಟಾಚಾರದ ಸಂಕೇತವಾಗಿದೆ ಎಂದಿದ್ದಾರೆ. ಈಗಲೂ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.

ಹೆದ್ದಾರಿಗಳ ಟೋಲ್‌ನಲ್ಲಿ ಖಾಸಗಿ ವಾಹನಗಳಿಗೆ ಟೋಲ್ ಸಂಗ್ರಹ ಬದಲು ಮಾಸಿಕ, ವಾರ್ಷಿಕ ಟೋಲ್ ಪಾಸ್‌!

Leave a Reply

Your email address will not be published. Required fields are marked *