BBMP
Loading ...

Smart Meter

Greater Bengaluru News9 : ವಿದ್ಯುತ್ ಬಳಸಿದ ಮೇಲೆ ವಿದ್ಯುತ್ ಬಿಲ್ ಪಾವತಿಸುವ ಗೋಜಿಲ್ಲ! ಮೊಬೈಲ್ ಕರೆನ್ಸಿಯಂತೆ ಮುಂಚಿತವಾಗಿ ಬಿಲ್ ಪಾವತಿಸಿ, ವಿದ್ಯುತ್ ಸೌಲಭ್ಯ ಪಡೆಯುವ ಪ್ರೀಪೇಯ್ಡ್ ಪೇಮೆಂಟ್ ಸ್ಮಾರ್ಟ್ ಮೀಟರ್‌ಗಳು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿ.(ಜೆಸ್ಕಾಂ) ಗ್ರಾಹಕರ ಮನೆಗೆ ಬರಲು ಸಜ್ಜಾಗಿವೆ.

ಹೊಸದಾಗಿ ವಿದ್ಯುತ್ ಮೀಟರ್‌ಗೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಈ ಪ್ರೀಪೇಯ್ಡ್ ಸ್ಟಾರ್ಟ್‌ ಮೀಟರ್‌ಗಳು ದೊರೆಯಲಿವೆ. ಮಾ.1 ರಿಂದಲೇ ಹೊಸ ಪದ್ದತಿ ಜಾರಿಗೆ ಬರಲಿದೆ. ಜೆಸ್ಕಾಂ ವ್ಯಾಪ್ತಿಯ ಅಧಿಕಾರಿಗಳು ಸಹ ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ಈಗಾಗಲೇ ಹಳೆಯ ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಸ್ಟಾರ್ಟ್ ವಿದ್ಯುತ್ ಮೀಟರ್ ಸಮಸ್ಯೆಯಿಲ್ಲ. ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸಂಪರ್ಕ ನೀಡಿರುವುದರಿಂದ ಗ್ರಾಹಕರು ತಮ್ಮ ಮಿತಿಯಲ್ಲಿ ವಿದ್ಯುತ್ ಬಳಕೆಗೆ ಬಿಲ್ ಪಾವತಿಸುವ ಸಮಸ್ಯೆಯಿಲ್ಲ, ಆದರೆ, ಹೊಸದಾಗಿ ವಿದ್ಯುತ್ ಸೌಲಭ್ಯ ಪಡೆಯುವ ಗ್ರಾಹಕರು ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕೈಗಾರಿಕೆ, ಗೃಹ ಬಳಕೆ, ವಾಣಿಜ್ಯ ಉದ್ದೇಶ ಸೇರಿ ಎಲ್ಲ ಬಗೆಯ ವಿದ್ಯುತ್ ಸಂಪರ್ಕಗಳಿಗೆ ನಿಯಮಾನುಸಾರ ದರ ನಿಗದಿಮಾಡಲಾಗಿದೆ. ಗ್ರಾಹಕರು ಪ್ರೀಪೇಯ್ಡ್ ವಿದ್ಯುತ್ ಮೀಟರ್‌ಗಳನ್ನು ಆನ್‌ಲೈನ್ ಇಲ್ಲವೇ ಸಮೀಪದ ವಿದ್ಯುತ್ ವಿತರಣಾ ಕಚೇರಿಗಳಲ್ಲಿ ರಿಚಾರ್ಜ್ ಮಾಡಿಸಿ, ತಮಗೆ ಅವಶ್ಯಕತೆ ಇರುವಷ್ಟು ವಿದ್ಯುತ್ ಬಳಕೆ ಮಾಡಬಹುದಾಗಿದೆ.

ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ಕುರಿತು ಜೆಸ್ಕಾಂ ಸಿಇಇ ಫೆ.18 ರಂದು ಆದೇಶ ಹೊರಡಿಸಿದ್ದಾರೆ. ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಸಂಪರ್ಕಗಳನ್ನು ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ)ನಿರ್ದಿಷ್ಟಪಡಿಸಿದ ಮೀಟರಿಂಗ್ ನಿಯಮಗಳ ಪ್ರಕಾರ ಅಗತ್ಯ ಉಪಕರಣಗಳೊಂದಿಗೆ ಸೇವೆ ಸಲ್ಲಿಸಲಾಗುತ್ತದೆ. ಹಳೆಯ ಐಪಿ ಸೆಟ್ ಹೊರತುಪಡಿಸಿ ಎಲ್ಲ ಹೊಸ ಸ್ಥಾಪನೆಗಳನ್ನು ಸ್ಟಾರ್ಟ್ ಮೀಟರ್‌ಗಳೊಂದಿಗೆ ಸೇವೆ ನೀಡಲಾಗುತ್ತದೆ. ತಾತ್ಕಾಲಿಕ ಸ್ಥಾಪನೆಗಳ ಬಿಲ್ಲಿಂಗ್ ಅನ್ನು ಸ್ಟಾರ್ಟ್ ಮೀಟರ್‌ಗಳ ಮೂಲಕ ನಿರ್ವಹಿಸಲಾಗುತ್ತದೆ. ಇವುಗಳ ಬಿಲ್ಲಿಂಗ್ ಪ್ರಿಪೇಯ್ಡ್ ಮೋಡ್ ನಲ್ಲಿ ಮಾತ್ರ ಇರುತ್ತದೆ. ಈ ಎಲ್ಲ ಸ್ಥಾಪನೆಗಳು ಮಾ.1 ರಿಂದ ಸ್ಟಾರ್ಟ್ ಎನರ್ಜಿ ಮೀಟರ್ ನೊಂದಿಗೆ ಸೇವೆ ನೀಡುತ್ತವೆ.

ಬಳಕೆಯದ್ದೇ ಗೊಂದಲ
”ಹೊಸ ಮೀಟರ್‌ಗೆ ಅರ್ಜಿ ಸಲ್ಲಿಸುವ ಗ್ರಾಹಕರು, ವಿದ್ಯುತ್ ಬಳಕೆಗೂ ಮೊದಲೇ ಹಣವನ್ನು ಎಲ್ಲಿ ಪಾವತಿಸಬೇಕು? ಸ್ಮಾರ್ಟ್ ವಿದ್ಯುತ್ ಮೀಟರ್‌ ಬಳಕೆ ಹೇಗೆ? ಎನ್ನುವ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ, ಸರಕಾರದಿಂದ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ ಜಾರಿಯಲ್ಲಿದೆ. ಅಳವಡಿಸಿಕೊಳ್ಳುವವರಿಗೆ ಸೌಲಭ್ಯ ಸಿಗಲಿದೆಯೋ? ಇಲ್ಲವೋ? ಎಂಬ ಅನುಮಾನ ಕಾಡುತ್ತಿದೆ.” ಎನ್ನುತ್ತಾರೆ ವ್ಯಾಪಾರಿ ಮಂಜುನಾಥ ಬಳ್ಳಾರಿ.

Leave a Reply

Your email address will not be published. Required fields are marked *