BBMP
Loading ...

Lokayukta (1)

Greater Bengaluru News9 : ಇನ್ಸ್​ಪೆಕ್ಟರ್​ ಬಳಿಯೇ ಲಂಚ ಸ್ವೀಕರಿಸುವಾಗ ಎಸ್​​ಡಿಎ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ನೊಂದೆಡೆ ಬೆಂಗಳೂರಿನ ಹೆಬ್ಬಾಳದ ಪಶುಸಂಗೋಪನೆ ಇಲಾಖೆ ಆಯುಕ್ತರ ಕಚೇರಿಯ ಎಸ್‌ಡಿಎ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇಲಾಖಾ ತನಿಖೆಯ ಅಂತಿಮ ಆದೇಶ ಪ್ರಕ್ರಿಯೆ ಕಾರ್ಯಗತಗೊಳಿಸಲು ಪಶುಸಂಗೋಪನೆ ಇಲಾಖೆ ಆಯುಕ್ತರ ಕಚೇರಿಯ ಎಸ್‌ಡಿಎ ಮುದಾಸಿರ್ ಎನ್ನುವರು ವಿಜಯಪುರ ಜಿಲ್ಲೆಯ ಪಶುಸಂಗೋಪನೆ ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಂತೆ 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರೆ. ಸದ್ಯ ಮುದಾಸಿರ್‌ನನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರಿಂದ ವಿಚಾರಣೆ ನಡೆಸಿದ್ದಾರೆ.

ಪಿಎಸ್​​ಐ, ಕಾನ್ಸ್​ಟೇಬಲ್ ಲೋಕಾ ಬಲೆಗೆ
ಬಾಗಲಕೋಟೆ: ಇಸ್ಪೀಟ್ ಆಡುವವರ ಬಳಿ ಲಂಚ ಸ್ವೀಕರಿಸುವಾಗ ಪೊಲೀಸ್​ ಸಬ್ ಇನ್ಸ್​ಪೆಕ್ಟರ್ ಹಾಗೂ ಕಾನ್ಸ್​​​ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಠಾಣೆಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ ಭೀಮಪ್ಪ ರಬಕವಿ ಹಾಗೂ ಕಾನ್ಸ್​ಟೇಬಲ್ ಸಂತೋಷ್ ಬಿರಾದಾರ ಎನ್ನುವರು ಮುತ್ತಪ್ಪ ನಾಯ್ಕರ್​ ಎಂಬುವರಿಂದ ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಇಸ್ಪೀಟ್ ಆಡುತ್ತಿದ್ದ ಓರ್ವ ಆರೋಪಿ ರಕ್ಷಣೆಗೆ ಮುಂದಾಗಿದ್ದ ಪೊಲೀಸರು, ಬೈಕ್ ಬಿಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಮುತ್ತಪ್ಪ ನಾಯ್ಕರ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಅನ್ವಯ ಲೋಕಾಯುಕ್ತ SP ಮಹಾಲಿಂಗ ನಂದಗಾಂವಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಪಿಎಸ್​ಐ ಭೀಮಪ್ಪ, ಪಿಸಿ ಬಿರಾದಾರನನ್ನು 1.70 ಲಕ್ಷ ಲಂಚ ಸ್ವೀಕರಿಸುವಾಗ ಹಿಡಿದಿದ್ದಾರೆ.

Leave a Reply

Your email address will not be published. Required fields are marked *