Greater Bengaluru News9: ಕರಗದ ವೇಳೆ ಹಾಕುವ ದೇವಿಯ ಸಾಂಗ್ ಹಾಕಿ ರೌಡಿ ಶೀಟರ್ ಓರ್ವ ಭರ್ಜರಿ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಾರೆ ತಾಯಿ ಬೆಂಗಳೂರ್ ಕಾಯೋನು ವಾದ್ಯಕ್ಕೆ ಮಚ್ಚು ಹಿಡಿದು ರೌಡಿಶೀಟರ್ ನಂದೀಶ್ @ ಕಾಟು ನಿಂದ ಫುಲ್ ಡ್ಯಾನ್ಸ್ ಮಾಡಲಾಗಿದೆ. ಎಣ್ಣೆ ಪಾರ್ಟಿಯಲ್ಲಿ ಮಚ್ಚು ಹಿಡಿದು ರೌಡಿ ಶೀಟರ್ ಮತ್ತವನ ಶಿಷ್ಯ ಡ್ಯಾನ್ಸ್ ಮಾಡಿದ್ದಾರೆ. ಕೈ ಯಲ್ಲಿ ಮಚ್ಚು ಹಿಡಿದು ಫುಲ್ ಡ್ಯಾನ್ಸ್ ಮಾಡಲಾಗಿದ್ದು, ವ್ಯಾಪಕ ಹರಿದಾಡಿದೆ.
ಬಾಸ್ ಜೊತೆ ಶಿಷ್ಯನಿಂದ ಸಹ ಚಾಕು ಹಿಡಿದು ಸ್ಟೆಪ್ಸ್ ಮಾಡಲಾಗಿದೆ. ಮಾರಾಕಸ್ತ್ರ ಪ್ರದರ್ಶನ ಮಾಡಿ ಫುಲ್ ಎಂಜಾಯ್ ಮಾಡಿದ್ದಾರೆ.
ನಂದೀಶ್ @ ಕಾಟು ಬ್ಯಾಟರಾಯನಪುರ ರೌಡಿಶೀಟರ್ ಆಗಿದ್ದು, ವಿಡಿಯೋ ಮಾಡಿ ಹವಾ ಸೃಷ್ಟಿಗೆ ನಡಿತಾ ಯತ್ನ ಎಂಬ ಪ್ರಶ್ನೆ ಮೂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತರಾವರಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.


