BBMP
Loading ...

BBMP

Greater Bengaluru News9 : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳ 369 ವಾರ್ಡ್‌ಗಳಿಗೆ ಅಂತಿಮ ಮೀಸಲಾತಿ ಪ್ರಕಟಿಸಿ ರಾಜ್ಯ ಸರಕಾರ ಶನಿವಾರ ರಾತ್ರಿ ಅಧಿಸೂಚನೆ ಹೊರಡಿಸಿದೆ.

2011ರ ಜನಗಣತಿ ಆಧರಿಸಿ ಜನವರಿ 8 ರಂದು ವಾರ್ಡ್‌ವಾರು ಕರಡು ಮೀಸಲು ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಜನವರಿ 23 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಒಂದೂವರೆ ತಿಂಗಳು ತಡವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಜೂನ್‌ ಒಳಗೆ ಪಾಲಿಕೆ ಚುನಾವಣೆ
ರಾಜ್ಯ ಸರಕಾರ ಜೂನ್‌ ಅಂತ್ಯದೊಳಗೆ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಯಾವುದೇ ಅಡೆ, ತಡೆ ಎದುರಾಗದಿದ್ದರೆ ಆ ವೇಳೆಗೆ ಚುನಾವಣೆ ನಡೆಸುವ ಸಾಧ್ಯತೆಗಳಿವೆ. ಅಂತಿಮ ಮೀಸಲು ಪಟ್ಟಿ ಪ್ರಕಟಗೊಳ್ಳುವುದರೊಂದಿಗೆ ಚುನಾವಣೆ ಚಟುವಟಿಕೆ ಗರಿಗೆದರಲಿವೆ.

ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ
ಅಂತಿಮ ಮೀಸಲಾತಿ ಪಟ್ಟಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ. ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ಕರಡು ಪಟ್ಟಿಗೆ ಸಲ್ಲಿಕೆಯಾಗಿದ್ದ ನೂರಾರು ಆಕ್ಷೇಪಣೆಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಅಗತ್ಯ ತಿದ್ದುಪಡಿಗಳೊಂದಿಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಒಟ್ಟು 369 ವಾರ್ಡ್‌ಗಳ ಪೈಕಿ 185 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಕರಡು ಪಟ್ಟಿಯಲ್ಲಿ ಕಂಡುಬಂದಿದ್ದ ಅಸಮತೋಲನವನ್ನು ಸರಿಪಡಿಸಿ, ಸಮರ್ಪಕವಾಗಿ ಮೀಸಲಾತಿ ಹಂಚಿಕೆ ಮಾಡಲಾಗಿದೆ.

ಮುಖ್ಯಾಂಶಗಳು ಮತ್ತು ಅಂಕಿ – ಅಂಶಗಳು

  • ಜಿಬಿಎ ಒಟ್ಟು ವಾರ್ಡ್‌ಗಳು: 369
  • ಮಹಿಳೆಯರಿಗೆ ಮೀಸಲು: 185 ವಾರ್ಡ್‌ಗಳು (ಶೇ. 50)
  • ಸಾಮಾನ್ಯ ವರ್ಗ: 192 ವಾರ್ಡ್‌ಗಳು
  • ಬಿಸಿಎ (ಹಿಂದುಳಿದ ವರ್ಗ ಅ) ವರ್ಗ: 97 ವಾರ್ಡ್‌ಗಳು
  • ಪರಿಶಿಷ್ಟ ಜಾತಿ (ಎಸ್‌ಸಿ): 43 ವಾರ್ಡ್‌ಗಳು
  • ಬಿಸಿಬಿ (ಹಿಂದುಳಿದ ವರ್ಗ ಬಿ) ವರ್ಗ: 24 ವಾರ್ಡ್‌ಗಳು
    ಪರಿಶಿಷ್ಟ ಪಂಗಡ (ಎಸ್‌ಟಿ): 07 ವಾರ್ಡ್‌ಗಳು

ಬೆಂಗಳೂರು ದಕ್ಷಿಣ ಪಾಲಿಕೆ

  • ಒಟ್ಟು ವಾರ್ಡ್‌ಗಳು – 72 ವಾರ್ಡ್‌ಗಳು
  • ಎಸ್‌ಸಿ – 7 (ಮಹಿಳೆ 3)
  • ಎಸ್‌ಟಿ – 1
  • ಹಿಂದುಳಿದ ವರ್ಗಗಳು ಅ: 19 (ಮಹಿಳೆ 9)
  • ಹಿಂದುಳಿದ ವರ್ಗಗಳು ಬಿ: 5 (2 ಮಹಿಳೆ)
  • ಸಾಮಾನ್ಯ: 40 (20 ಮಹಿಳೆ)

ಬೆಂಗಳೂರು ಉತ್ತರ ನಗರ ಪಾಲಿಕೆ

  • ಒಟ್ಟು ವಾರ್ಡ್‌ಗಳು – 72 ವಾರ್ಡ್‌ಗಳು
  • ಎಸ್‌ಸಿ – 9 (ಮಹಿಳೆ 4)
  • ಎಸ್‌ಟಿ – 2 (ಮಹಿಳೆ 1)
  • ಹಿಂದುಳಿದ ವರ್ಗಗಳು ಅ: 19 (ಮಹಿಳೆ 9)
  • ಹಿಂದುಳಿದ ವರ್ಗಗಳು ಬಿ: 5 (2 ಮಹಿಳೆ)
  • ಸಾಮಾನ್ಯ: 37 (18 ಮಹಿಳೆ)

ಬೆಂಗಳೂರು ಕೇಂದ್ರ ನಗರ ಪಾಲಿಕೆ

  • ಒಟ್ಟು ವಾರ್ಡ್‌ಗಳು – 63 ವಾರ್ಡ್‌ಗಳು
  • ಎಸ್‌ಸಿ – 11 (ಮಹಿಳೆ 5)
  • ಎಸ್‌ಟಿ – 1
  • ಹಿಂದುಳಿದ ವರ್ಗಗಳು ಅ: 15 (ಮಹಿಳೆ 7)
  • ಹಿಂದುಳಿದ ವರ್ಗಗಳು ಬಿ: 4 (2 ಮಹಿಳೆ)
  • ಸಾಮಾನ್ಯ: 32 (16 ಮಹಿಳೆ)

ಬೆಂಗಳೂರು ಪಶ್ಚಿಮ ನಗರ ಪಾಲಿಕೆ

  • ಒಟ್ಟು ವಾರ್ಡ್‌ಗಳು – 112 ವಾರ್ಡ್‌ಗಳು
  • ಎಸ್‌ಸಿ – 9 (ಮಹಿಳೆ 4)
  • ಎಸ್‌ಟಿ – 2 (ಮಹಿಳೆ 1)
  • ಹಿಂದುಳಿದ ವರ್ಗಗಳು ಅ: 30 (ಮಹಿಳೆ 15)
  • ಹಿಂದುಳಿದ ವರ್ಗಗಳು ಬಿ: 7 (3 ಮಹಿಳೆ)
  • ಸಾಮಾನ್ಯ: 64 (32 ಮಹಿಳೆ)

ಬೆಂಗಳೂರು ಪೂರ್ವ ನಗರ ಪಾಲಿಕೆ

  • ಒಟ್ಟು ವಾರ್ಡ್‌ಗಳು – 50 ವಾರ್ಡ್‌ಗಳು
  • ಎಸ್‌ಸಿ – 7 (ಮಹಿಳೆ 3)
  • ಎಸ್‌ಟಿ – 1
  • ಹಿಂದುಳಿದ ವರ್ಗಗಳು ಅ: 14 (ಮಹಿಳೆ 7)
  • ಹಿಂದುಳಿದ ವರ್ಗಗಳು ಬಿ: 3 (1 ಮಹಿಳೆ)
  • ಸಾಮಾನ್ಯ: 25 (12 ಮಹಿಳೆ)

Leave a Reply

Your email address will not be published. Required fields are marked *