BBMP
Loading ...

RCB

ಐಪಿಎಲ್-2025 ಟ್ರೋಫಿಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಕೊನೆಗೂ ಮುತ್ತಿಟ್ಟಿದೆ. ಅಹ್ಮದಾಬಾದ್​ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ ಪಾಟೀದಾರ್ ನಾಯಕತ್ವದ ಆರ್​ಸಿಬಿ​, ಕಪ್​​ ಗೆದ್ದುಕೊಂಡಿದೆ. ಸತತ 18 ವರ್ಷಗಳ ಕಾಯುವಿಕೆಯ ನಂತರ ಆರ್​ಸಿಬಿ ಚೊಚ್ಚಲ ಟ್ರೋಫಿಯನ್ನ ತನ್ನದಾಗಿಸಿಕೊಂಡಿದೆ.

18 ವರ್ಷಗಳ ಸತತ ಕನಸು.. ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆ.. ಆರ್​ಸಿಬಿ ಮ್ಯಾನೇಜ್ಮೆಂಟ್​ ಪರಿಶ್ರಮ, ಆಟಗಾರರ ನಿರಂತರ ಪ್ರಯತ್ನ, ಅಭಿಮಾನಿಗಳ ಪ್ರಾರ್ಥನೆ, ಹಾರೈಕೆ ಕೊನೆಗೂ ಫಲಿಸಿದೆ. ಸತತ ವರ್ಷಗಳ ಕಾಯುವಿಕೆಯ ನಂತರ ಆರ್​ಸಿಬಿ ಟ್ರೋಫಿಗೆ ಮುತ್ತಿಟ್ಟಿದೆ. ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಿದೆ. ಆರ್​ಸಿಬಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ. ಗೆಲುವು ಸಾಧಿಸುತ್ತಿದ್ದಂತೆಯೇ ಆರ್​ಸಿಬಿ ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಕೂಡ 18 ವರ್ಷಗಳಿಂದ ಟ್ರೋಫಿ ಗೆಲ್ಲಲು ಪ್ರಯತ್ನಿಸ್ತಿದೆ. ಈ ಬಾರಿ ಕಪ್​ ಗೆಲ್ಲಬೇಕು ಎಂಬ ಕನಸು ನುಚ್ಚು ನೂರಾಗಿದೆ. ಆ ಮೂಲಕ ಪಂಜಾಬ್ ಕಿಂಗ್ಸ್​ ಟ್ರೋಫಿ ಕನಸು ಜೀವಂತವಾಗಿಯೇ ಉಳಿದಿದ್ದು, ಮುಂದಿನ ಸೀಸನ್​ವರೆಗೆ ಕಾಯಬೇಕಿದೆ. ಫೈನಲ್​ವರೆಗೆ ಬಂದಿದ್ದ ಪಂಜಾಬ್ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಆರ್​​ಸಿಬಿ ಗೆಲುವಿನೊಂದಿಗೆ ಐಪಿಎಲ್ ಹಬ್ಬಕ್ಕೆ ತೆರೆಬಿದ್ದಿದೆ. ಮೇ 17 ರಂದು ಐಪಿಎಲ್ ಟೂರ್ನಿ ಆರಂಭವಾಗಿ, ಜೂನ್ 3 ರಂದು ಅಂತ್ಯಗೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಆರ್​ಸಿಬಿ, ಕೊಹ್ಲಿ ಅವರ ಅಮೂಲ್ಯ 43 ರನ್​ಗಳ ಕಾಣಿಕೆಯೊಂದಿಗೆ 190 ರನ್​ಗಳಿಸಿತ್ತು. ಆ ಮೂಲಕ ಪಂಜಾಬ್ ಕಿಂಗ್ಸ್ ಗೆಲುವಿಗೆ 191 ರನ್​ಗಳು ಬೇಕಾಗಿತ್ತು. ಆದರೆ ಆರ್​ಸಿಬಿ ಬೌಲರ್​ಗಳ ಮುಂದೆ ಪಂಜಾಬ್ ಕಿಂಗ್ಸ್​ ಬ್ಯಾಟರ್​​ಗಳ ಆಟ ನಡೆಯಲಿಲ್ಲ. ಕೊನೆಯದಾಗಿ 20 ಓವರ್​ಗೆ 7 ವಿಕೆಟ್ ಕಳೆದುಕೊಂಡು 184 ರನ್​ಗಳಿಸಿ ಶ್ರೇಯಸ್ ಅಯ್ಯರ್ ಪಡೆ ಸೋಲಿಗೆ ಶರಣಾಯ್ತು. ಕಿಂಗ್ ವಿರಾಟ್ ಕೊಹ್ಲಿ ಬಳಗ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತು.

Leave a Reply

Your email address will not be published. Required fields are marked *